ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಅಂಕಿ ಅಂಶದ ರೂಪು ರೇಷೆ ಸಿದ್ದ: ಜಿ. ಪರಮೇಶ್ವರ್


Team Udayavani, May 23, 2023, 8:30 PM IST

ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಅಂಕಿ ಅಂಶದ ರೂಪು ರೇಷೆ ಸಿದ್ದ: ಜಿ. ಪರಮೇಶ್ವರ್

ಕೊರಟಗೆರೆ: ಪ್ರವಾಸಿಕ್ಷೇತ್ರ ಮತ್ತು ಶ್ರೀಮಠಗಳ ಅಭಿವೃದ್ದಿಗೆ ನನ್ನ ಸಹಕಾರ ಇದ್ದೇ ಇರುತ್ತೇ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ಅಂಕಿಅಂಶದ ರೂಪುರೇಷೆ ಸಿದ್ದವಾಗಿದೆ.

ಮುಂದಿನ 5 ವರ್ಷದ ಅವಧಿಯಲ್ಲಿ ಕೊರಟಗೆರೆಯು ಸಮಗ್ರ ಅಭಿವೃದ್ದಿಯ ಪಥದತ್ತಾ ಸಾಗಲಿದೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ 5 ಗ್ಯಾರಂಟಿಯು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾರಿಗೆ ಬರಲಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ ಭರವಸೆ ನೀಡಿದರು.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂ ಕೇಂದ್ರಸ್ಥಾನದ ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮಾತನಾಡಿದರು.

ಧಾರ್ಮಿಕ ಮತ್ತು ಪ್ರವಾಸಿ ಕ್ಷೇತ್ರದ ಅಭಿವೃದ್ದಿಗೆ ಪ್ರವಾಸೋದ್ಯಮ, ಅರಣ್ಯ, ತೋಟಗಾರಿಕೆ ಇಲಾಖೆಯ ಸಹಯೋಗದಿಂದ ಅಭಿವೃದ್ದಿ ಆಗಲಿವೆ. ಸಿದ್ದರಬೆಟ್ಟ ಶ್ರೀಕ್ಷೇತ್ರ ಸೇರಿದಂತೆ ಗೊರವನಹಳ್ಳಿಯ ಶ್ರಿಮಹಾಲಕ್ಷ್ಮೀ ದೇವಾಲಯ, ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯ ಮತ್ತು ಚನ್ನರಾಯನದುರ್ಗ ಏಳುಸುತ್ತಿನ ಕೋಟೆಯ ಅಭಿವೃದ್ದಿಗೆ ವಿಶೇಷ ಅನುಧಾನ ತರುತ್ತೇನೆ ಎಂದು ತಿಳಿಸಿದರು.

ಕಂಪನಿಗಳಿಗೆ ಪರಂ ಖಡಕ್ ಎಚ್ಚರಿಕೆ..
ತುಮಕುರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಪ್ರಥಮ ಆಧ್ಯತೆ ನೀಡಬೇಕಿದೆ. ಉದ್ಯೋಗ ನೀಡುವಲ್ಲಿ ತಾರತಮ್ಮ ಮಾಡಿದರೇ ಅಂತಹ ಕಂಪನಿಗಳ ಲೈಸನ್ಸ್ ಮುಲಾಜಿಲ್ಲದೇ ರದ್ದು ಮಾಡುತ್ತೇವೆ. ಈಗಾಗಲೇ ಖಾಸಗಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತೀಲ್ಲ ಎಂದು ಸಾಕಷ್ಟು ದೂರುಗಳು ಬಂದಿವೆ. ನಮ್ಮ ಸರಕಾರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಬೇಟಿಯ ವೇಳೆಯಲ್ಲಿ ಕೊರಟಗೆರೆ ಉಸ್ತುವಾರಿ ಕೇಶವಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಯುವಾಧ್ಯಕ್ಷ ವಿನಯ್, ಮುಖಂಡರಾದ ರೇಣುಕಾಪ್ರಸನ್ನ, ಶೇಖರ್, ವೀರಣ್ಣಗೌಡ, ಜೆಟ್ಟಿನಾಗರಾಜ್, ಸಿದ್ದಗಂಗಪ್ಪ, ಮಹೇಶ್, ಚಂದ್ರಶೇಖರ್, ಅರವಿಂದ್, ಪಟ್ಟನರಸಪ್ಪ, ರಮೇಶ್, ಕೃಷ್ಣಪ್ಪ, ಸೋಮಣ್ಣ, ಅಖಂಡರಾಧ್ಯ ಸೇರಿದಂತೆ ಇತರರು ಇದ್ದರು.

ಶ್ರೀಗಳ ಆರ್ಶಿವಾದ ಪಡೆದ ಡಾ.ಜಿ.ಪರಮೇಶ್ವರ..

ಚಿಕ್ಕತೋಟ್ಲುಕೆರೆಯ ಶ್ರೀಕ್ಷೇತ್ರ ಅಟವಿ ಮಠದ ಶ್ರೀಅಟವಿಶಿವಲಿಂಗ ಮಹಾಸ್ವಾಮಿ, ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀವೀರಭದ್ರಶಿವಾಚಾರ್ಯ ಸ್ವಾಮೀಜಿ ಮತ್ತು ತಂಗನಹಳ್ಳಿಯ ಶ್ರೀಕಾಶಿಅನ್ನಪೂಣೇಶ್ವರಿ ಶ್ರೀಮಠದ ಶ್ರೀಬಸವಮಹಾಲಿಂಗ ಸ್ವಾಮೀಜಿ, ಬೆಳ್ಳಾವಿ ಖಾರದ ಶ್ರೀಮಠದ ಶ್ರೀವೀರಬಸವ ಮಹಾಸ್ವಾಮೀಜಿಯ ಆರ್ಶಿವಾದ ಪಡೆದ ಸಚಿವ ಡಾ.ಜಿ.ಪರಮೇಶ್ವರ ಶ್ರೀಮಠಗಳ ಧಾರ್ಮಿಕ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಡಾ.ಜಿ.ಪರಮೇಶ್ವರ ಸಿದ್ದರಬೆಟ್ಟದ ಅಭಿವೃದ್ದಿಗೆ ೫೦ಲಕ್ಷ ಮತ್ತು ಶ್ರೀಮಠದ ಅಭಿವೃದ್ದಿಗೆ ಈಗಾಗಲೇ ೩೦ಲಕ್ಷ ಅನುಧಾನ ನೀಡಿದ್ದಾರೆ. ಪ್ರವಾಸಿ ಮತ್ತು ಪುಣ್ಯಕ್ಷೇತ್ರ ಅಭಿವೃದ್ದಿಗೆ ಸಚಿವರು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಧಾರ್ಮಿಕ ಕೇಂದ್ರ ಮತ್ತು ಸಾಮಾಜಿಕ ಕ್ಷೇತ್ರದ ಅಭಿವೃದ್ದಿಗೆ ಸರಕಾರದ ಸಹಕಾರ ಅಗತ್ಯ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸರಕಾರ ಮತ್ತು ಸಚಿವರ ಜೊತೆ ಅಧಿಕಾರಿಗಳ ಪಾತ್ರವು ಬಹುಮುಖ್ಯ.–

– ವೀರಭದ್ರಶಿವಚಾರ್ಯ ಸ್ವಾಮೀಜಿ. ಪೀಠಾಧ್ಯಕ್ಷ. ಸಿದ್ದರಬೆಟ್ಟ ಶ್ರೀಮಠ

ನನ್ನ ಕೊರಟಗೆರೆ ಕ್ಷೇತ್ರದ ಸ್ವಾಮೀಜಿಗಳಿಗೆ ನಾನು ವಿಜಯದ ಕೃತಜ್ಞತೆ ಸಲ್ಲಿಸಿದ್ದೇನೆ. ವಿಧಾನಸಭಾ ಅಧಿವೇಶನ ಮುಗಿದ ತಕ್ಷಣವೇ ನನ್ನ ಕ್ಷೇತ್ರದ ೩೬ಗ್ರಾಪಂಗಳಿಗೆ ಬೇಟಿ ನೀಡಿ ವಿಜಯೋತ್ಸವ ಆಚರಣೆ ಮಾಡ್ತೇನೆ. ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ್ದ ೫ಗ್ಯಾರಂಟಿಗಳು ರಾಜ್ಯ ಸರಕಾರದ ನಿಯಮದ ಅನುಸಾರ ಮುಂದಿನ ಸಂಪುಟ ಸಭೆಯಲ್ಲಿ ಈಡೇರುತ್ತೇ.

– ಡಾ.ಜಿ.ಪರಮೇಶ್ವರ. ಸಚಿವ. ಕೊರಟಗೆರೆ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.