NPS : ಬದಲಾವಣೆಗೆ ಕೇಂದ್ರ ಚಿಂತನೆ
ಶೇ. 45ರಷ್ಟು ಪಿಂಚಣಿ ಸಿಗುವ ಸಾಧ್ಯತೆ ವಿಪಕ್ಷಗಳ ಆಕ್ಷೇಪ ಹಿನ್ನೆಲೆಯಲ್ಲಿ ಈ ಕ್ರಮ
Team Udayavani, Jun 22, 2023, 7:46 AM IST
ಹೊಸದಿಲ್ಲಿ: ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಯಲ್ಲಿ ಕೆಲವು ಬದಲಾವಣೆ ತರಲು ಕೇಂದ್ರ ಸರಕಾರ ಚಿಂತಿಸಿದೆ. ಕೇಂದ್ರ ಸರಕಾರಿ ಉದ್ಯೋಗಿಗಳು ಪಡೆದಿರುವ ಕೊನೆಯ ಸಂಬಳದ ಶೇ. 40ರಿಂದ ಶೇ.45ರಷ್ಟು ಮೊತ್ತವನ್ನು ಪಿಂಚಣಿಯಾಗಿ ವಿತರಿಸುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ಆಡಳಿತದ ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೆ ತರುವ ಬಗ್ಗೆ ಘೋಷಿಸಿರುವ ಬೆನ್ನಲ್ಲೇ ಕೇಂದ್ರ ಸರಕಾರ ಈ ಬದಲಾವಣೆಗೆ ಚಿಂತಿಸಿದೆ. ಆದರೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಯಥಾವತ್ತಾಗಿ ಜಾರಿ ಮಾಡುವ ಸಾಧ್ಯತೆಯೇ ಇಲ್ಲ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ಹೇಳಿದ್ದಾರೆ.
2004ರಲ್ಲಿ ಆಗ ಅಧಿಕಾರದಲ್ಲಿದ್ದ ಸರಕಾರ ಜಾರಿಗೊಳಿಸಿದ್ದ ಪಿಂಚಣಿ ವ್ಯವಸ್ಥೆಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಬದಲಾವಣೆಗೊಳಿಸಿತ್ತು. ಜತೆಗೆ 2006ರಿಂದ ಸರಕಾರಿ ಸೇವೆಗಳಿಗೆ ಸೇರಿದವರಿಗೆ ಪಿಂಚಣಿ ನೀಡದಿರುವ ಬಗ್ಗೆ ಆ ವ್ಯವಸ್ಥೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕೇಂದ್ರ ಸರಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆ ಬಗ್ಗೆ ಹಲವಾರು ಆಕ್ಷೇಪಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಎಪ್ರಿಲ್‌ನಲ್ಲಿ ಎನ್‌ಪಿಎಸ್ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚಿಸಿತ್ತು.
ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳ ಮೂಲ ವೇತನ ದಿಂದ ಶೇ.10, ಸರಕಾರದ ವತಿಯಿಂದ ಶೇ.14ನ್ನು ಪಿಂಚಣಿಗೆ ನೀಡಲಾಗುತ್ತಿದೆ. ಆದರೆ ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಸರಕಾರಿ ಉದ್ಯೋಗಿಗೆ ಕೊನೆಯ ಬಾರಿ ಪಡೆದುಕೊಂಡ ವೇತನದ ಮೊತ್ತದ ಶೇ.50ರಷ್ಟು ಪಿಂಚಣಿಯಾಗಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ
Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್ ಕುಣಿಕೆ ಬಿಗಿದು ಸಾವು
Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ
Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು
Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್!