ಮನಕಲುಕುವ ಘಟನೆ… ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮಹಿಳೆಯರು
Team Udayavani, Jul 8, 2023, 7:12 PM IST
ಉತ್ತರಪ್ರದೇಶ : ಬೈಕ್ ಅಪಘಾತದಲ್ಲಿ ರಸ್ತೆಗೆ ಬಿದ್ದಿದ್ದ ಇಬ್ಬರ ರಕ್ಷಣೆಗೆ ಹೋದ ಇಬ್ಬರು ಮಹಿಳೆಯರಿಗೆ ವೇಗವಾಗಿ ಬಂದ ಟ್ರಕ್ ಒಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಮಿಥಿಲೇಶ್ ದೇವಿ (45) ಮತ್ತು ನೇಮಾ ದೇವ್ (43) ಎಂದು ಗುರುತಿಸಲಾಗಿದೆ.
ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಪುರುಷ ಮತ್ತು ಮಹಿಳೆಗೆ ಟ್ರಕ್ ಡಿಕ್ಕಿ ಹೊಡೆದಿದ್ದು ಈ ವೇಳೆ ಗಾಯಗೊಂಡ ಇಬ್ಬರು ರಸ್ತೆಗೆ ಬಿದ್ದಿದ್ದಾರೆ ಇದನ್ನು ಕಂಡ ಅಲ್ಲಿಯೇ ಇದ್ದ ಇಬ್ಬರು ಮಹಿಳೆಯರು ಅವರ ರಕ್ಷಣೆಗೆ ಧಾವಿಸಿದ್ದಾರೆ ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಕ್ ಈ ಇಬ್ಬರು ಮಹಿಳೆಯರಿಗೆ ಡಿಕ್ಕಿ ಹೊಡೆದು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರು ಬೈಕ್ ಸವಾರರು ಹಾಗೂ ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಸಿಎಂ ಶಿಂಧೆಗೆ ರಾಜೀನಾಮೆ ನೀಡುವಂತೆ ಹೇಳಲಾಗಿದೆ…: ಆದಿತ್ಯ ಠಾಕ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ