IPL: ಆಸ್ಟ್ರೇಲಿಯಾಗೆ ವಿಶ್ವಕಪ್ ತಂದುಕೊಟ್ಟ ಕೋಚ್ ಹಿಂದೆ ಬಿದ್ದ ಲಕ್ನೋ ಸೂಪರ್ ಜೈಂಟ್ಸ್

Team Udayavani, Jul 10, 2023, 6:51 PM IST

Justin Langer In Consideration To Become Head Coach Of LSG

ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ ನ ಹೊಸ ಫ್ರಾಂಚೈಸಿಗಳಲ್ಲಿ ಒಂದಾದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿಯೂ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ಸತತ ಎರಡು ಸೀಸನ್ ಗಳಲ್ಲಿ ಪ್ಲೇ ಆಫ್ ಹಂತಕ್ಕೇರಿದ ಲಕ್ನೋ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲಲಾಗಿಲ್ಲ. ಹೀಗಾಗಿ ಮುಂದಿನ ಸೀಸನ್ ಗೆ ಮಹತ್ತರ ಬದಲಾವಣೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.

ಮೊದಲ ಹಂತವಾಗಿ ಫ್ರಾಂಚೈಸಿಯು ಮುಖ್ಯ ಕೋಚ್ ಬದಲಾವಣೆಗೆ ಹೊರಟಿದೆ. ತಂಡದ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಅವರು ಎರಡು ವರ್ಷದ ಒಪ್ಪಂದ ಹೊಂದಿದ್ದಾರೆ. ಈ ಬಾರಿ ಅವರ ಒಪ್ಪಂದದ ಅವಧಿ ಮುಗಿಯಲಿದೆ. ಹೀಗಾಗಿ ಹೊಸ ಕೋಚ್ ಹುಡುಕಲು ಹೊರಟ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಸೂಪರ್ ಜೈಂಟ್ಸ್, ಆಸ್ಟ್ರೇಲಿಯಾ ಮಾಜಿ ಆಟಗಾರ, ಈ ಹಿಂದೆ ಆಸೀಸ್ ತಂಡದ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಚರ್ಚೆ ನಡೆಸಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

ಎಲ್ಎಸ್ ಜಿ ಮ್ಯಾನೇಜ್‌ ಮೆಂಟ್ ಅಥವಾ ಲ್ಯಾಂಗರ್ ಸ್ವತಃ ನಡೆಯುತ್ತಿರುವ ಮಾತುಕತೆಗಳನ್ನು ದೃಢೀಕರಿಸದಿದ್ದರೂ, ಐಪಿಎಲ್‌ನ ಮೂಲಗಳು ಆಸ್ಟ್ರೇಲಿಯಾದ ಮಾಜಿ ಕೋಚ್ ಮತ್ತು ಫ್ರಾಂಚೈಸ್ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿವೆ ಎಂದು ಸೂಚಿಸಿವೆ ಎಂದು ವರದಿ ಹೇಳಿದೆ. ಲ್ಯಾಂಗರ್ ಈ ಹಿಂದೆ 2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ್ದಾರೆ. ಅಲ್ಲದೆ ಮೊದಲ ನಾಲ್ಕು ವರ್ಷಗಳಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಮೂರು ಬಿಗ್ ಬ್ಯಾಷ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಕೋಚ್ ಆಗಿ ಸಹಾಯಕರಾಗಿದ್ದಾರೆ.

ಇದನ್ನೂ ಓದಿ:ಪ್ರತಿಭಟನೆ ಕೈ ಬಿಡಿ, ಜೈನ ಸಮಾಜದೊಂದಿಗೆ ನಾವಿದ್ದೇವೆ: ಸಚಿವ ಡಾ.ಜಿ.ಪರಮೇಶ್ವರ ಅಭಯ

ಸದ್ಯ ಜಸ್ಟಿನ್ ಲ್ಯಾಂಗರ್ ಅವರು ಯಾವುದೇ ಜವಾಬ್ದಾರಿ ಹೊಂದಿಲ್ಲ. ಹೀಗಾಗಿ ಫ್ರಾಂಚೈಸಿಯು ಹಲವು ಸುತ್ತಿನ ಮಾತುಕತೆ ನಡೆಸಿದೆ.

ಆದರೆ, ಎಲ್ಎಸ್ ಜಿ ಸಹಾಯಕ ಸಿಬ್ಬಂದಿಯಲ್ಲಿ ಇತರ ಬದಲಾವಣೆಗಳ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಮೋರ್ನೆ ಮೊರ್ಕೆಲ್, ಜಾಂಟಿ ರೋಡ್ಸ್ ಮತ್ತು ವಿಜಯ್ ದಹಿಯಾ ಕ್ರಮವಾಗಿ ಬೌಲಿಂಗ್, ಫೀಲ್ಡಿಂಗ್ ಮತ್ತು ಸಹಾಯಕ ತರಬೇತುದಾರರಾಗಿ ಮುಂದುವರಿಯುವ ನಿರೀಕ್ಷೆಯಿದೆ.

ಟಾಪ್ ನ್ಯೂಸ್

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

JDS: ಸಂಪುಟದಿಂದ ಡಿಕೆಶಿ ಕೈಬಿಡಿ; ರಾಜ್ಯಪಾಲರಿಗೆ ಜೆಡಿಎಸ್‌ ದೂರು

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ

Compensation: ಮಳೆ ಆಧಾರಿತ ಬೆಳೆಗಳಿಗೂ ಪರಿಹಾರಧನ; ಸಚಿವ ಕೃಷ್ಣ ಬೈರೇಗೌಡ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

ಪೆನ್‌ಡ್ರೈವ್‌ ಪ್ರಕರಣ: ಕಲಾಪ ತಾತ್ಕಾಲಿಕ ಸ್ಥಳಾಂತರಕ್ಕೆ ರಿಜಿಸ್ಟ್ರಾರ್‌ಗೆ ಪತ್ರ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

Hasana: “ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

1-wwewqewq

NADA ಬೆನ್ನಲ್ಲೇ UWW ನಿಂದಲೂ ವರ್ಷಾಂತ್ಯದ ವರೆಗೆ ಬಜರಂಗ್ ಅಮಾನತು

kl rahul

KL Rahul; ಮಾಲಕರ ತರಾಟೆಯ ಬಳಿಕ ಲಕ್ನೋ ತಂಡದ ನಾಯಕತ್ವ ತೊರೆದ ರಾಹುಲ್?

Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ

Mumbai Indians ತಂಡದಲ್ಲಿ ಒಳ ಜಗಳ..; ರೋಹಿತ್, ಬುಮ್ರಾ, ಸೂರ್ಯ ಪ್ರತ್ಯೇಕ ಸಭೆ!

IPL 2024; Trending Come to RCB: What happened to the LSG team ?

IPL 2024; ಟ್ರೆಂಡ್ ಆಗುತ್ತಿದೆ Come to RCB: ಅಷ್ಟಕ್ಕೂ ಎಲ್ಎಸ್ ಜಿ ತಂಡದಲ್ಲಿ ಆಗಿದ್ದೇನು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

court

Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ

1-weqewq

Bidar; ರಾಜಿ ಸಂಧಾನದಲ್ಲಿ ಒಂದಾದ ಮೂರು ದಂಪತಿಗಳು

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.