IMF: ಲಂಕಾಗೆ ಐಎಂಫ್ ನೆರವು ಅಂತಿಮ ಹಂತದ ಮಾತುಕತೆ
Team Udayavani, Oct 20, 2023, 11:19 PM IST
ಕೊಲಂಬೊ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವತಿಯಿಂದ ನೀಡಲಾಗುತ್ತಿರುವ ನೆರವು ಮೊತ್ತವನ್ನು ಬಿಡುಗಡೆಗೊಳಿಸಲು 2ನೇ ಹಂತದ ಸಿದ್ಧತೆಗಳು ನಡೆಯುತ್ತಿದ್ದು, ಲಂಕಾ ಹಾಗೂ ಐಎಂಎಫ್ ಸಿಬ್ಬಂದಿ ಮಾತುಕತೆ ವರೆಗೆ ತಲುಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವರ್ಷದ ಮಾರ್ಚ್ನಲ್ಲಿ ಐಎಂಎಫ್ ಲಂಕಾಗೆ 2.9 ಶತಕೋಟಿ ಡಾಲರ್ ಹಣದ ನೆರವು ನೀಡಲು ಅನುಮೋದಿಸಿತ್ತು. ಈ ಸಂಬಂಧಿಸಿದಂತೆ ಐಎಂಎಫ್ ನಿಯೋಗವೊಂದು ಶ್ರೀಲಂಕಾಗೆ ಭೇಟಿ ನೀಡಿ, ಆರ್ಥಿಕ ಪುನಶ್ಚೇತನದ ಸಾಧ್ಯತೆಗಳನ್ನೂ ಪರಿಶೀಲಿಸಿತ್ತು. ಇದೀಗ ಅದರ ವರದಿಯನ್ನೂ ಸಲ್ಲಿಕೆಮಾಡಲಾಗಿದ್ದು, ಐಎಂಎಫ್ ನಿಯಂತ್ರಕ ಮಂಡಳಿ ಅನುಮೋದಿಸುತ್ತಿದ್ದಂತೆ 330 ದಶಲಕ್ಷ ಡಾಲರ್ ಲಂಕಾಗೆ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದು, ಈ ಕುರಿತು ಸಿಬ್ಬಂದಿ ಮಟ್ಟದ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
London: ಭಾರತೀಯ ಮೂಲದ ಮಹಿಳೆಗೆ ಬಸ್ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ
Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ