Open AI: ಆಡಳಿತ ಮಂಡಳಿಯನ್ನೇ ವಜಾ ಮಾಡಿದ ಆಲ್ಟ್ಮನ್‌! 

-ತನ್ನನ್ನು ಕಿತ್ತೆಸೆದ ಆಡಳಿತ ಮಂಡಳಿ ವಿರುದ್ಧ ಚಾಟ್‌ ಜಿಪಿಟಿ ಜನಕನ ಪ್ರತೀಕಾರ

Team Udayavani, Nov 23, 2023, 9:38 PM IST

chat gpt owner

ಸ್ಯಾನ್‌ಫ್ರಾನ್ಸಿಸ್ಕೋ: ನಾಟಕೀಯ ಬೆಳವಣಿಗೆಯಲ್ಲಿ ಓಪನ್‌ ಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಸ್ಯಾಮ್‌ ಆಲ್ಟ್ಮನ್‌ ಅವರು ವಾಪಸಾದ ಬೆನ್ನಲ್ಲೇ, ಅವರು ತಮ್ಮನ್ನು ವಜಾ ಮಾಡಿದ್ದ ಇಡೀ ಆಡಳಿತ ಮಂಡಳಿಯನ್ನೇ ಕಿತ್ತುಹಾಕಿ ಆದೇಶ ಹೊರಡಿಸಿದ್ದಾರೆ!

ವಿಶೇಷವೆಂದರೆ, ಆಲ್ಟ್ಮನ್‌ ಹೊಸ ಆದೇಶದಿಂದಾಗಿ ವಜಾಗೊಂಡ ಆಡಳಿತ ಮಂಡಳಿಯಲ್ಲಿ ಉಳಿದಿರುವ ಏಕೈಕ ವ್ಯಕ್ತಿಯೆಂದರೆ, ಪ್ರಶ್ನೋತ್ತರ ಸೈಟ್‌ ಕೋರಾದ ಸಿಇಒ ಆಗಿರುವ ಆ್ಯಡಂ ಡಿ ಏಂಜೆಲೋ. ಇವರೊಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆಡಳಿತ ಮಂಡಳಿಯಿಂದ ಹೊರನಡೆದಿದ್ದಾರೆ. ಆದರೆ, ಆಲ್ಟ್ಮನ್‌ ಅವರಾಗಲೀ, ಸಂಸ್ಥೆಯ ಸ್ಥಾಪಕ ಗ್ರೆಗ್‌ ಬ್ರೋಕ್‌ಮನ್‌ ಆಗಲೀ ಆಡಳಿತ ಮಂಡಳಿಗೆ ಸೇರ್ಪಡೆಯಾಗಿಲ್ಲ. ಶೀಘ್ರದಲ್ಲೇ ಮಂಡಳಿಗೆ 6 ಹೆಚ್ಚುವರಿ ಸದಸ್ಯರನ್ನು ಸೇರಿಸಲಾಗುತ್ತದೆ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

“ನಾನು ಓಪನ್‌ ಎಐಯನ್ನು ಪ್ರೀತಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ನಾನು ಏನೇ ಮಾಡಿದ್ದರೂ ಅದು ಈ ತಂಡ ಮತ್ತು ಅದರ ಉದ್ದೇಶವನ್ನು ಉಳಿಸಿಕೊಳ್ಳುವುದಕ್ಕೋಸ್ಕರ’ ಎಂದು ಆಲ್ಟ್ಮನ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಳೆದು ಶುಕ್ರವಾರವಷ್ಟೇ ಯಾವುದೇ ಕಾರಣವನ್ನು ತಿಳಿಸದೇ ಕಂಪನಿಯ ಆಡಳಿತ ಮಂಡಳಿಯು ಏಕಾಏಕಿ ಚಾಟ್‌ಜಿಪಿಟಿ ಜನಕ ಆಲ್ಟ್ಮನ್‌ರನ್ನು ವಜಾ ಮಾಡಿತ್ತು. ಇದು ಇಡೀ ಕಂಪನಿಯಲ್ಲಿ ಸಂಚಲನಕ್ಕೆ ಕಾರಣವಾಗಿತ್ತಲ್ಲದೇ, ಈ ನಿರ್ಧಾರದ ವಿರುದ್ಧ ಸಂಸ್ಥೆಯ 700ರಷ್ಟು ಸಿಬ್ಬಂದಿ ಬಂಡಾಯವೆದ್ದು, ರಾಜೀನಾಮೆಗೆ ಮುಂದಾಗಿದ್ದರು.

ವಜಾಗೆ ಆ “ಅಪಾಯಕಾರಿ” ಟೂಲ್‌ ಕಾರಣವೇ?
ಓಪನ್‌ ಎಐ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ ಅತ್ಯಂತ ಬಲಿಷ್ಠವಾದ ಕೃತಕ ಬುದ್ಧಿಮತ್ತೆಯ ಆವಿಷ್ಕಾರವೇ ಸಂಸ್ಥೆಯೊಳಗೆ ಅಲ್ಲೋಲಕಲ್ಲೋಲ ಸೃಷ್ಟಿಯಾಗಲು ಕಾರಣವೇ? ಹೌದು ಎನ್ನುತ್ತಿವೆ ಮೂಲಗಳು. ಇತ್ತೀಚೆಗೆ ಸಂಸ್ಥೆಯು ಕ್ಯೂ*(ಕ್ಯೂ ಸ್ಟಾರ್‌) ಎಂಬ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿತ್ತು. ಇದು ಸೂಪರ್‌ ಇಂಟೆಲಿಜೆನ್ಸ್‌ನಲ್ಲಿ ಕ್ರಾಂತಿ ಮೂಡಿಸುವಂಥ ತಂತ್ರಜ್ಞಾನವಾಗಿದ್ದು, ಇದನ್ನು ಮನುಷ್ಯರಿಗಿಂತಲೂ ಹೆಚ್ಚಿನ ಬುದ್ಧಿವಂತಿಕೆಯಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಜನರಲ್‌ ಇಂಟೆಲಿಜೆನ್ಸ್‌) ಎಂದು ಪರಿಗಣಿಸಲಾಗಿತ್ತು.

ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಮಾನವತೆಗೇ ಅಪಾಯ ಉಂಟುಮಾಡುವ ಭೀತಿಯಿದೆ ಎಂದು ಸಂಸ್ಥೆಯೊಳಗಿನ ಸಂಶೋಧಕರು ನಿರ್ದೇಶಕರ ಮಂಡಳಿಗೆ ಪತ್ರ ಬರೆದಿದ್ದರು. ಈ ಪತ್ರದಿಂದ ಎಚ್ಚೆತ್ತ ಆಡಳಿತ ಮಂಡಳಿಯು ದಿಢೀರ್‌ ಸಭೆ ಕರೆದು, ಆಲ್ಟ್ಮನ್‌ರನ್ನು ವಜಾಗೊಳಿಸಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪತ್ರದ ಕುರಿತಾಗಲೀ, ಆ ಅಪಾಯಕಾರಿ ಟೂಲ್‌ ಕುರಿತಾಗಲೀ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಟಾಪ್ ನ್ಯೂಸ್

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

IPL; ಮುಂಬೈಗೆ ನಿರಾಶಾದಾಯಕ ಅಂತ್ಯ: ಲಕ್ನೋಗೆ ಜಯ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

PM Modi ಮತ ಹಾಕಿದವರ ಆಸ್ತಿ ವೋಟ್‌ ಜೆಹಾದ್‌ ಮಾಡಿದವರಿಗೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.