ಕಲೆ, ಅಧ್ಯಯನಕ್ಕೆ ಪ್ರೋತ್ಸಾಹ: ಹೆಗ್ಗಡೆ


Team Udayavani, Feb 20, 2017, 3:45 AM IST

1902bel3ph.jpg

ಬೆಳ್ತಂಗಡಿ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಕಲೆ, ಅಭ್ಯಾಸಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮೀಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಸಾಧನೆಗಳಿಗೆ ಸಂಸ್ಥೆಯಿಂದ ಸದಾ ಪ್ರೋತ್ಸಾಹ ಇದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ರವಿವಾರ ಧರ್ಮಸ್ಥಳದಲ್ಲಿ ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಗಿನ್ನೆಸ್‌ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ಗಿನ್ನೆಸ್‌ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಒಂದು ಬದಿ ಚಾರ್ಲಿ ಚಾಪ್ಲಿನ್‌, ಇನ್ನೊಂದು ಬದಿ ಮಿ| ಬೀನ್‌ ಚಿತ್ರ ಬರುವಂತೆ 20 ವಿದ್ಯಾರ್ಥಿಗಳು ಪೃಥೀÌಶ್‌ ನೇತೃತ್ವದಲ್ಲಿ ಕ್ಯೂಬ್‌ಗಳನ್ನು ಸ್ಥಳದಲ್ಲಿಯೇ ಬೇಕಾದ ಬಣ್ಣಗಳಿಗೆ ಬರುವಂತೆ ವಿನ್ಯಾಸ ಮಾಡಿ ಅನಂತರ ಚಿತ್ರ ರಚನೆ ಮಾಡಿದ್ದರು. ಇದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಯಾಗಿದೆ. 4,500 ಕ್ಯೂಬ್‌ಗಳನ್ನು ಬಳಸಲಾಗಿದ್ದು, ಈಗಾಗಲೇ 500 ಶಾಲಾ ವಿದ್ಯಾರ್ಥಿಗಳಿಗೆ ಒಗಟು ಬಿಡಿಸುವ ಕೌಶಲ ಹೇಳಿಕೊಟ್ಟು ಕ್ಯೂಬ್‌ ವಿತರಿಸಲಾಗಿದೆ. ಇನ್ನೂ 4 ಸಾವಿರ ಕ್ಯೂಬ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಬುದ್ಧಿಮತ್ತೆ ಹೆಚ್ಚಿಸುವ ಈ ಕಲೆ ಇನ್ನಷ್ಟು ಪಸರಿಸಲಿ ಎಂದರು.

ದಾಖಲೆವೀರ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಪೃಥೀÌಶ್‌ ಕೆ. ಭಟ್‌ ಮಾತನಾಡಿ, ತಲಾ 5.7 ಸೆಂ.ಮೀ. ಗಾತ್ರದ ಒಟ್ಟು 4,500 ಕ್ಯೂಬ್‌ಗಳ ಜೋಡಣೆ ಕಾರ್ಯ ಪೂರ್ಣಗೊಂಡಾಗ 4.33 ಮೀ. ಎತ್ತರ, 3.46 ಅಗಲ ಒಟ್ಟು 14.981 ಚದರ ಮೀ. ವಿಸ್ತೀರ್ಣದ ಚಿತ್ರ ರಚಿಸಲಾಗಿದೆ. ಗಿನ್ನೆಸ್‌ನಿಂದ ನಮಗೆ 13.41 ಚ.ಮೀ. ಸವಾಲಿನ ಕನಿಷ್ಠ ಮಾನದಂಡ ನೀಡಲಾಗಿತ್ತು.
 
ಶಿವಪ್ರಸಾದ ಅಜಿಲ, ಪ್ರೊ| ಗಣಪತಿ ಭಟ್‌ ಕುಳಮರ್ವ ಹಾಗೂ ವಿವೇಕ್‌ ಪ್ರಸಾದ್‌ ಮಾಡ ಅವರು ಪರಿಣತ ಸಾಕ್ಷಿಗಳಾಗಿದ್ದುದು ಪ್ರಮಾಣಪತ್ರಕ್ಕೆ ಪೂರಕವಾಯಿತು. ಕಾಲೇಜು, ಆಡಳಿತ ಮಂಡಳಿಯ ಪ್ರೋತ್ಸಾಹ ಅನನ್ಯ. ಪೃಥ್ವೀಶ್‌ ಜತೆಗೆ ಇದ್ದ 20 ಮಂದಿ ವಿದ್ಯಾರ್ಥಿಗಳಾದ  ಪ್ರಜ್ವಲ್‌ ಪಾಟೀಲ್‌, ಶರತ್‌ಕೃಷ್ಣ, ವೀರೇಶ್‌ ಎಸ್‌.ಬಿ., ಶಾಂತಿನಾಥ, ಶಿವಕುಮಾರ್‌, ವಿನಯ್‌, ಸ್ವಪ್ನಿಲ್‌, ಪ್ರಹ್ಲಾದ್‌, ಹರಿಕೃಷ್ಣ, ಸಾತ್ವಿಕ್‌, ಸ್ಟೀಫನ್‌, ಮಧುರ್‌, ಕಾರ್ತಿಕ್‌, ಮಲ್ಲನಗೌಡ ಮೇಟಿ, ಸುಜಯ್‌, ಸಂಜಯ್‌ ಹೊಳ್ಳ, ರೋಹನ್‌, ಶಾಯಿಲ್‌ ನಾೖಕ್‌, ಶಿವ ದಾಖಲೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಪ್ರಮಾಣಪತ್ರವನ್ನು ಡಾ| ಹೆಗ್ಗಡೆ ವಿತರಿಸಿದರು.

ಹೇಮಾವತಿ ವೀ. ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಕಾಲೇಜಿನ ಪ್ರಾಚಾರ್ಯ ಡಾ| ಸುರೇಶ್‌, ಪ್ರಾಧ್ಯಾಪಕರಾದ ಡಾ| ಎಸ್‌.ಪಿ. ಹೆಗಡೆ, ಪ್ರೊ| ಸತ್ಯನಾರಾಯಣ, ಪ್ರೊ| ಮನೋಜ್‌ ಟಿ. ಗಡಿಯಾರ್‌, ಪೃಥೀÌಶ್‌ ಹೆತ್ತವರಾದ ಉಡುಪಿಯ ಬ್ರಹ್ಮಾವರದ ಚೇರ್ಕಾಡಿಯ ಪೇತ್ರಿಯ ಶ್ಯಾಮಪ್ರಸಾದ್‌-ಪ್ರಸನ್ನಾ ಹಾಗೂ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.