ಉಪ್ಪಿನಂಗಡಿಯ ವಿಜಯ-ವಿಕ್ರಮ ಕಂಬಳ: ಕರೆ ಮುಹೂರ್ತ

Team Udayavani, Feb 25, 2017, 3:15 PM IST

24upg1.jpg

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯ ವಿಜಯ-ವಿಕ್ರಮ ಕಂಬಳ ಕರೆಯಲ್ಲಿ ಶುಕ್ರವಾರ ಕರೆ ಮುಹೂರ್ತ ನಡೆಯಿತು. ಸುಬ್ರಹ್ಮಣ್ಯ ಭಟ್‌ ಧಾರ್ಮಿಕ ವಿಧಿ-ವಿಧಾನ ಗಳನ್ನು ನೆರವೇರಿಸಿದರು.

ಕರೆ ಮುಹೂರ್ತದ ಬಳಿಕ ಶ್ರಮದಾನ ನಡೆಸಿದ ಕಂಬಳಾಭಿಮಾನಿಗಳು ಕರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಕೊಂಡರು. ಈ ಸಂದರ್ಭ ಉಪ್ಪಿನಂಗಡಿ ವಿಜಯ-ವಿಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್‌ ಶೆಣೈ ನಂದಾವರ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ವಿಟuಲ ಶೆಟ್ಟಿ ಕುಲ್ಲೊಟ್ಟು, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್‌ ಕುಮಾರ್‌ ದಡ್ಡು,  ನ್ಯಾಯವಾದಿ ಅನಿಲ್‌ ಕುಮಾರ್‌ ದಡ್ಡು, ಸಿಎ ಬ್ಯಾಂಕ್‌ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಜೇಸಿಐ ಅಧ್ಯಕ್ಷ ಕೇಶವ ರಂಗಾಜೆ, ಕಾರ್ಯದರ್ಶಿ ಶೇಖರ ಗೌಂಡತ್ತಿಗೆ, ಪ್ರಮುಖರಾದ ಸತೀಶ್‌ ಪಿಲಿಗೂಡು, ಆದರ್ಶ ಶೆಟ್ಟಿ ಕಜೆಕ್ಕಾರು, ಯೊಗೀಶ್‌ ಸಾಮಾನಿ ಸಂಪಿಗೆದಡಿ, ದಿಲೀಪ್‌ ಶೆಟ್ಟಿ ಕರಾಯ, ಹರಿಪ್ರಸಾದ್‌ ಶೆಟ್ಟಿ ಬೊಳ್ಳಾವು, ವಿಶ್ವನಾಥ ಶೆಟ್ಟಿ ಕಂಗ್ವೆ, ಹರಿಶ್ಚಂದ್ರ ಆಚಾರ್ಯ, ಸದಾಶಿವ ಸಾಮಾನಿ, ಮೋಹನ್‌ ಪಕಳ ಕುಂಡಾಪು ಮತ್ತಿತರರು ಉಪಸ್ಥಿತರಿದ್ದರು.

ಅಂಗೀಕಾರ ದೊರೆತರೆ ಕಂಬಳ 
ಮಾಧ್ಯಮದೊಂದಿಗೆ ಮಾತನಾಡಿದ ಕಂಬಳದ ಪರ ಕಾನೂನು ಹೋರಾಟಗಾರ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಇದಕ್ಕಿನ್ನು ರಾಷ್ಟ್ರಪತಿಯವರು ಅಂಗೀಕಾರ ನೀಡ ಬೇಕಾಗಿದೆ. ಆದ್ದರಿಂದ ನಾನು ಸೇರಿದಂತೆ ಕಂಬಳ ಸಮಿತಿಯ ನಿಯೋಗವೊಂದು ಮಂಗಳವಾರ ದಿಲ್ಲಿಗೆ ತೆರಳಲಿದ್ದು, ಸಂಸದರನ್ನು ಭೇಟಿಯಾಗಿ ಶೀಘ್ರ ಈ ಮಸೂದೆಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದೇವೆ. ಮಾ. 18ರ ಮೊದಲು ಈ ಮಸೂದೆಗೆ ರಾಷ್ಟ್ರಪತಿ ಯವರಿಂದ ಅಂಗೀಕಾರ ದೊರೆತರೆ, ಮಾ. 18ರಂದು ಉಪ್ಪಿನಂಗಡಿಯ ವಿಜಯ-ವಿಕ್ರಮ ಕಂಬಳ ನಡೆಯಲಿದೆ. ಇಲ್ಲದಿದ್ದರೆ ಇಲ್ಲ. ಮಾ. 18ರ ಬಳಿಕ ಅಂಗೀಕಾರ ದೊರೆತರೆ ಅದು ಕಂಬಳ ನಡೆಸುವ ಸಮಯ ವಾಗಿದ್ದರೆ, ಈ ವರ್ಷದ ಪ್ರಥಮ ಕಂಬಳವನ್ನು ಉಪ್ಪಿ ನಂಗಡಿಯಿಂದಲೇ ಆರಂಭಿಸಲು ತೀರ್ಮಾ ನಿಸಿದ್ದೇವೆ. ಅದಕ್ಕಾಗಿ ಈಗಾಗಲೇ ಕರೆ ಮುಹೂರ್ತ ನಡೆಸಿ, ಕರೆಯನ್ನು ಸಿದ್ಧಪಡಿಸಿ ಇಡಲಿದ್ದೇವೆ. ಕುದಿ ಓಡಿಸುವವರಿಗೂ ಅವಕಾಶ ಕಲ್ಪಿಸಿಕೊಡಲಿದ್ದೇವೆ. 

ಈ ಹಿಂದೆ ಹೇಳಿದಂತೆ ಮಾ. 18ರಂದು ವಿಜಯೋತ್ಸವ ಅಥವಾ ಪ್ರತಿಭಟನಾರ್ಥ ಕಂಬಳ ನಡೆಸುವ ತೀರ್ಮಾನವನ್ನು ಈ ಮಸೂದೆ ರಾಷ್ಟ್ರಪತಿಯವರ ಅಂಗಳದಲ್ಲಿರುವುದರಿಂದ ಕೈಬಿಡಲಾಗಿದೆ. ರಾಷ್ಟ್ರ ಪತಿಯವರು ಅಂಕಿತ ಹಾಕಲಿದ್ದಾರೆ ಎಂಬ ಭರವಸೆ ಇದೆ ಎಂದರು.

ಶ್ರಮದಾನ 
ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ವಿಜಯ- ವಿಕ್ರಮ ಕಂಬಳ ಕರೆಯ ಬಳಿ ಫೆ. 26ರಂದು ಸ್ವತ್ಛತೆಗಾಗಿ ಶ್ರಮದಾನ ನಡೆಯಲಿದ್ದು, ಕಂಬಳಾಭಿಮಾ ನಿಗಳು, ಸಂಘಟನೆಗಳು ಹೀಗೆ ಪ್ರತಿಯೋರ್ವರು ಶ್ರಮದಾನ ದಲ್ಲಿ ಭಾಗವಹಿಸಿ, ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

ಟಾಪ್ ನ್ಯೂಸ್

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

1-KL-S

Amethi;ನಾನು ಗಾಂಧಿ ಕುಟುಂಬದ ಸೇವಕನಲ್ಲ: ಕಾಂಗ್ರೆಸ್‌ ಅಭ್ಯರ್ಥಿ

1-qweqeq

Bihar;10 ವರ್ಷ ಜೈಲು ಶಿಕ್ಷೆ: ಪರೋಲ್‌ ಮೇಲೆ ಬಂದು ಚುನಾವಣ ಪ್ರಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

Belthangady ವೇಣೂರಿನ ಬಾಹುಬಲಿಗೆ ಮಸ್ತಕಾಭಿಷೇಕ; ವಿರಾಟ್‌ ವಿರಾಗಿಗೆ ಮಜ್ಜನ ಸಮಾಪನ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Belthangady ವಿದ್ಯುತ್‌ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

Snake; ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.