ಹೊಸ ಮನೆಗೆ ಹೊಸ ಲುಕ್‌


Team Udayavani, Mar 15, 2017, 12:26 AM IST

House-15-3.jpg

ಮನೆ ನಿರ್ಮಾಣದಲ್ಲಿ ಮರಗಳ ಬಳಕೆ ಹಲವು ಕಾಲದಿಂದಲೂ ಇದೆ. ಆದರೆ, ಒಂದು ಹಂತದಲ್ಲಿ ಟೇರೆಸ್‌ ಮನೆಗಳ ಮಾದರಿಗೆ ಮನಸೋತ ನಾವು ಈಗ ಮತ್ತೆ ಹಳೆಯ, ಸಾಂಪ್ರದಾಯಿಕ ಲುಕ್‌ ಕೊಡುವ ಮನೆಗಳತ್ತ ಫ್ಯಾಷನ್‌ ಹೆಸರಲ್ಲಿ ಮರಳಿ ಬರುತ್ತಿದ್ದೇವೆ. ಆಧುನಿಕ ಮನೆಗಳ ಸೌಂದರ್ಯ ಹೆಚ್ಚಿಸುವಲ್ಲೂ ಇಂದು ಮರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ದೊಡ್ಡ ಬಜೆಟ್‌ನ ಮನೆಗಳು. ಆಧುನಿಕ ಸೌಕರ್ಯಗಳೆಲ್ಲ ಅದರಲ್ಲಿ ಬೇಕು. ಹೊಸತನದ ಸ್ಪರ್ಶ ಅದರಲ್ಲಿ ಮಿಳಿತವಾಗಿರಲೇಬೇಕು ಎಂದು ಹಪಹಪಿಸುವ ಹಲವು ಮನಸ್ಸುಗಳು ನಮ್ಮ ಜತೆಗಿದ್ದಾರೆ. ವಿಶೇಷವೆಂದರೆ ಎಷ್ಟೇ ಆಧುನಿಕ ಸೌಂದರ್ಯಗಳು ಇದರಲ್ಲಿದ್ದರೂ, ಸಾಂಪ್ರದಾಯಿಕವಾಗಿರಲಿ ಎಂಬ ಆಶಯ ಅವರದ್ದಾಗಿರುತ್ತದೆ. ಕಾರಣ ಸಾಂಪ್ರದಾಯಿಕ ಶೈಲಿಯ ಮನೆಗಳಿಗೆ ತನ್ನದೇ ಆದ ಗತ್ತು ಹಾಗೂ ಗೌರವ ಇದೆ. ಇದಕ್ಕಾಗಿಯೇ ಹೊಸ ಮನೆಗೆ ಹಳೆಯ ಲುಕ್‌ ಇರುತ್ತದೆ. ಪ್ರತ್ಯೇಕವಾಗಿ ಮನೆ ಕಟ್ಟುವುದಾದರೆ ಅದನ್ನು ಸಾಂಪ್ರದಾಯಿಕವಾಗಿಯೇ ಮಾಡಲು ಹೆಚ್ಚಿನವರು ಒಲವು ತೋರುತ್ತಾರೆ. ಹಿಂದೆ ಇದು ಮಾತ್ರ ಜಾರಿಯಲ್ಲಿದ್ದರೆ ಈಗ ಇದುವೇ ಫ್ಯಾಷನ್‌ ಆಗಿದೆ. ಮನೆಯನ್ನು ಪೂರ್ಣವಾಗಿ ಮರಗಳ ವಿಭಿನ್ನತೆಯ ಮೂಲಕ ಬಂಧಿಸುವ ವಿಶೇಷ ಶೈಲಿಗಳು ಈಗ ಜಾರಿಯಲ್ಲಿದೆ.

ಟೇರೆಸ್‌ ಮನೆಯ ಮೇಲ್ಗಡೆಯಲ್ಲಿ ಶೀಟ್‌ ಹಾಸುವ ಕೆಲವರ ವಿಧಾನವನ್ನು ಈಗ ಮೀರಿ, ಮರಗಳ ಮುಚ್ಚಳಕ್ಕೆ ಮುಂದಾಗುತ್ತಿದ್ದಾರೆ. ಮನೆಯ ಉಷ್ಣತೆಯನ್ನು ಕಡಿಮೆ ಮಾಡಲು ಹಾಗೂ ನೋಡುವುದಕ್ಕೆ ಆಕರ್ಷಕವಾಗಿ ಕಾಣಬೇಕು ಎಂಬ ನೆಲೆಯಲ್ಲಿ ಟೇರೆಸ್‌ ಮೇಲ್ಭಾಗದಲ್ಲೂ ನಾನಾ ತರದ ಮರದ ಕೆತ್ತನೆಗಳನ್ನು ಪಡಿಮೂಡಿಸುವ ಕೆಲಸ ನಡೆಯುತ್ತಿದೆ. ರೀಪರ್‌ ಕಾನ್ಸೆಪ್ಟ್ಗಳನ್ನು ಕೆಲವರು ಜಾರಿಗೆ ತಂದಿದ್ದಾರೆ. ಹಳೆಯ ಶೈಲಿ ಹಾಗೂ ಆಧುನಿಕ ಸ್ಪರ್ಶ ನೀಡುವ ಮೂಲಕ ಮನೆಗೆ ಹೊಸತನ ನೀಡುವ ಪ್ರಯತ್ನವಿದು. ಸಿಂಗಲ್‌ ಮನೆ ಕಟ್ಟುವುದಾದರೆ ಮನೆಯ ಮುಂಭಾಗದ ‘ಸಿಟ್‌ ಔಟ್‌’ ಅನ್ನು ಮರದ ಲುಕ್‌ ನೀಡುವುದರ ಮೂಲಕ ಕಂಗೊಳಿಸುವಂತೆ ಮಾಡಲಾಗುತ್ತದೆ. ನಿಲ್ಲುವ ಹಾಗೂ ಕುಳಿತು ವ್ಯವಹರಿಸಲು ಬೇಕಾಗುವಷ್ಟು ಸ್ಥಳವನ್ನು ಬಿಟ್ಟು ಹೊರಭಾಗಕ್ಕೆ ಮರದ ಡಿಸೈನ್‌ಗಳ ಮೂಲಕ ಒಪ್ಪ ನೀಡಲಾಗುತ್ತದೆ. ವಿಶೇಷವೆಂದರೆ ಕೇರಳ ಶೈಲಿಯಲ್ಲಿ ಇದರ ವಿನ್ಯಾಸ ಮಾಡಲಾಗುತ್ತದೆ. 

ಬಾಲ್ಕನಿಯಲ್ಲಿ ಕೆತ್ತನೆಗಳು
ಫ್ಲ್ಯಾಟ್‌ಗಳಲ್ಲಿರುವ ಬಾಲ್ಕನಿಯನ್ನು ಮರದ ಕೆತ್ತನೆಗಳ ಮೂಲಕ ವೈಭವೀಕರಿಸುವ ಶೈಲಿಯೂ ಈಗ ಚಾಲ್ತಿಯಲ್ಲಿದೆ. ಲಿಂಟಲ್‌ ಕೆಲಸ ನಡೆಸುವಾಗಲೇ ಮರದ ವಿನ್ಯಾಸವನ್ನು ಜೋಡಿಸಲಾಗುತ್ತದೆ. ಇದು ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮನೆಗಳಿಗಿಂತಲೂ ಅಧಿಕವಾಗಿ ಕಾರ್ಪೊರೇಟ್‌ ಕಚೇರಿ, ಆಫೀಸ್‌ಗಳಲ್ಲಿ ಬಹುವಾಗಿ ಬಳಕೆಯಲ್ಲಿವೆ. ಮರದ ವಿನ್ಯಾಸದ ಮಧ್ಯೆ ಇಂಟೀರಿಯರ್‌ ಡಿಸೈನ್‌ಗಳನ್ನು ಪೋಣಿಸಿಕೊಂಡು ಅದಕ್ಕೆ ಬೆಳಕಿನ ವ್ಯವಸ್ಥೆ ನೀಡಿದರೆ ಲುಕ್‌ ಬರುತ್ತದೆ. 

ಮರದ ಲ್ಯಾಮಿನೇಟ್‌ ಬಳಕೆಯೂ ಪ್ರಸ್ತುತ ಹೆಚ್ಚು ಜನಜನಿತ. ವೀನಿಯರ್‌ ಬಳಕೆಯಲ್ಲೂ ಹೆಚ್ಚು ಸ್ಟೈಲಿಶ್‌ ಕಾಣುತ್ತದೆ. ಲ್ಯಾಮಿನೇಟ್‌ ಮರದ ಶೀಟ್‌ಗಳನ್ನು ಹಾಕುವ ಮೂಲಕ ಅದರ ಮೇಲೆ ಮರದ ಪಾಲಿಷ್‌ ಮಾಡಿದರೆ ಸುಂದರವಾಗಿ ಕಾಣುತ್ತದೆ. ಅದರ ಮೇಲೆ ಲೈಟ್‌ ಡಿಸೈನ್‌ ಮಾಡಿದರೆ ಮರದ ಒರಿಜಿನಲ್‌ ಕಲರ್‌ ಸಿಗುತ್ತದೆ. ಆಗ ಬಾಲ್ಕನಿಗೆ ಹಾಕಿದ್ದು, ಒರಿಜಿನಲ್‌ ಮರಗಳು ಎಂಬಷ್ಟು ಖಾತ್ರಿ ಮೂಡಿಸುತ್ತವೆ. ಮನೆಗೆ ಪ್ರವೇಶ ಮಾಡುವಾಗಲೇ ಬಾಗಿಲನ್ನು ಕಂಡಾಗಲೇ ಮನಸ್ಸು ತುಂಬಿ ಬರುವಂತಾಗಬೇಕು. ಹೀಗಾಗಿ ಮನೆಯ ಬಾಗಿಲಿಗೆಂದೇ ಲಕ್ಷಾಂತರ ರೂ. ಖರ್ಚು ಮಾಡುವುದಿದೆ. ಮನೆಯ ಬಾಗಿಲು ಕೇರಳ ಶೈಲಿಯಲ್ಲಿ ಇರಬೇಕು ಎಂಬ ತುಡಿತದೊಂದಿಗೆ ಅಲ್ಲಿನ ಶೈಲಿಯೇ ಈಗ ಇಲ್ಲಿ ಬಳಕೆಯಲ್ಲಿದೆ. ತರತರದ ಮರದ ಕೆತ್ತನೆಗಳು, ದೇವರ ಚಿತ್ರಗಳು ಹೀಗೆ ಎಲ್ಲವೂ ಬಾಗಿಲಿನಲ್ಲಿ ಬೆಸೆದುಕೊಂಡಿರುತ್ತದೆ. 

ಮುಂಬಾಗಿಲು
ಮುಂಬಾಗಿಲು ಮನೆಯ ಕಣ್ಮನ ಸೆಳೆಯುವಂತಿರಬೇಕು. ಆಲಂಕಾರಿಕವಾಗಿ ಕೆತ್ತಿರುವ ಮುಂದಿನ ಬಾಗಿಲುಗಳು ಮನೆಗೆ ಹೆಚ್ಚು ಘನತೆ ತಂದು ಕೊಡುತ್ತದೆ. ಪೂಜಾ ಕೋಣೆಯ ಬಾಗಿಲುಗಳಲ್ಲೂ ನಾನಾ ರೀತಿಯ ಕೆತ್ತನೆಗಳು ಗಮನ ಸೆಳೆಯುತ್ತದೆ. ಒಳಮನೆಯ ಬಾಗಿಲುಗಳಿಗೆ ತೇಗ ಅಥವಾ ಓಕ್‌ ಮರಗಳನ್ನು ಬಳಸುತ್ತಾರೆ. ಅವುಗಳ ವಿನ್ಯಾಸ ಹಾಗೂ ಆಕರ್ಷಕ ಹೊರಮೈ ಕಣ್ಮನ ಸೆಳೆಯುತ್ತದೆ. ವಿವಿಧ ನಮೂನೆಯ ವುಡ್‌ ಗೆùನ್‌ ಫಿನಿಶ್‌ಗಳನ್ನು ಮನೆ ಬಾಗಿಲುಗಳಿಗೆ ಕಪಾಟುಗಳಿಗೆ ಹಾಗೂ ಫಲಕಗಳಿಗೆ ಬಳಸುತ್ತಾರೆ. ಇದು ನೋಡಲು ಸರಳವಾಗಿರುತ್ತದೆ. ಆದರೆ ಒನಪು ಪ್ರಖರವಾಗಿರುತ್ತದೆ. 

ಮನೆಗೆ ಸಾಂಪ್ರದಾಯಿಕ ಟಚ್‌ಗೆ ಹೆಚ್ಚಿದ ಆಸಕ್ತಿ
ಆಧುನಿಕ ಶೈಲಿಯಲ್ಲಿ ಮನೆ ನಿರ್ಮಾಣ ಮಾಡುವಾಗ ಈಗ ಸಾಂಪ್ರಾಯಿಕ ಟಚ್‌ ನೀಡಲು ಜನರು ಹೆಚ್ಚು ಆಸಕ್ತರಾಗಿದ್ದಾರೆ. ಮನೆಯ ಟೇರೆಸ್‌, ಬಾಲ್ಕನಿ, ಬಾಗಿಲು ಇವೆಲ್ಲವನ್ನೂ ಮರದಿಂದಲೇ ಆಕರ್ಷಕವಾಗಿ ಮಾಡುವ ಟ್ರೆಂಡ್‌ ಈಗ ಶುರುವಾಗಿದೆ. ಒಂದೆಡೆ ಬಾಳಿಕೆ, ಇನ್ನೊಂದೆಡೆ ಸಾಂಪ್ರದಾಯಿಕ ಶೈಲಿ ಇವೆರಡೂ ಲಾಭವಾಗಲಿದೆ.
– ಸುನೀಲ್‌ ಕುಮಾರ್‌ ರೈ, ಇಂಟೀರಿಯರ್‌ ಡಿಸೈನರ್‌

– ದಿನೇಶ್‌ ಇರಾ

ಟಾಪ್ ನ್ಯೂಸ್

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.