ಯುವತಿಯೊಂದಿಗೆ ಪರಾರಿಯಾದ 55ರ ಬೋಗಸ್ ಬಾಬಾ ಬಂಧನ
Team Udayavani, Mar 15, 2017, 11:01 AM IST
ಹೈದರಾಬಾದ್ : ಇಲ್ಲಿನ ಪೊಲೀಸರು ಮಂಗಳವಾರ ಜನರನ್ನು ವಂಚಿಸುತ್ತಿದ್ದ ಖತರ್ನಾಕ್ ಬೋಗಸ್ ಬಾಬಾನೊಬ್ಬನನ್ನು ಬಂಧಿಸಿದ್ದಾರೆ.
55 ರ ಹರೆಯದ ಸಯೀದ್ ಅಬ್ಬಾಸ್ ಪೀರ್ ಖಾದ್ರಿ ಎಂಬಾತ ಯುವತಿಯೊಬ್ಬಳನ್ನು ಮರಳು ಮಾಡಿ ಪರಾರಿಯಾಗಿದ್ದ. ನಾನು ಯುನಾನಿ ವೈದ್ಯ ಎಂದು ಹೇಳಿ ಹಲವರನ್ನು ವಂಚಿಸಿದ್ದ. ಪೊಲೀಸರಿಗೆ ಬಾಲಕಿ ಕಾಣೆಯಾದ ಬಳಿಕ ದೂರು ನೀಡಲಾಗಿತ್ತು. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.