ಬವುಮ-ಡಿ ಕಾಕ್‌ ಅಮೋಘ ಜತೆಯಾಟ ಕಿವೀಸ್‌ ಮೊತ್ತ ಹಿಂದಿಕ್ಕಿದ ದ.ಆಫ್ರಿಕಾ


Team Udayavani, Mar 18, 2017, 10:51 AM IST

sa-18.jpg

ವೆಲ್ಲಿಂಗ್ಟನ್‌: ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಟೆಂಬ ಬವುಮ ಮತ್ತು ಕ್ವಿಂಟನ್‌ ಡಿ ಕಾಕ್‌ ಅವರ 160 ರನ್‌ ಜತೆಯಾಟದ ಸಾಹಸದಿಂದ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 81 ರನ್ನುಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿ ಯಾಗಿದೆ. ನ್ಯೂಜಿಲ್ಯಾಂಡಿನ 268ಕ್ಕೆ ಉತ್ತರವಾಗಿ ದ್ವಿತೀಯ ದಿನದ ಕೊನೆಗೆ 9 ವಿಕೆಟಿಗೆ 349 ರನ್‌ ಗಳಿಸಿದೆ.

2 ವಿಕೆಟಿಗೆ 24 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ಮತ್ತಷ್ಟು ಕುಸಿದು ತೀವ್ರ ಸಂಕಟಕ್ಕೆ ಸಿಲುಕಿತು. ಲಂಚಿಗೂ ಮುನ್ನ 94 ರನ್ನಿಗೆ 6 ವಿಕೆಟ್‌ ಉದುರಿಸಿಕೊಂಡು ಚಡಪಡಿಸುತ್ತಿತ್ತು. ನ್ಯೂಜಿಲ್ಯಾಂಡ್‌ ಸಹಜವಾಗಿಯೇ ದೊಡ್ಡ ಮುನ್ನಡೆಯ ಲೆಕ್ಕಾಚಾರದಲ್ಲಿತ್ತು.
ಆದರೆ 7ನೇ ವಿಕೆಟಿಗೆ ಜತೆಗೂಡಿದ ಬವುಮ-ಡಿ ಕಾಕ್‌ ನಿಧಾನವಾಗಿ ಪರಿಸ್ಥಿತಿ ಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತ ಸಾಗಿದರು. ದ್ವಿತೀಯ ಅವಧಿಯನ್ನು ಸಂಪೂರ್ಣವಾಗಿ ಕ್ರೀಸಿನಲ್ಲಿ ಕಳೆದು ಕುಸಿತಕ್ಕೆ ತಡೆಯಾಗಿ ನಿಂತರು. ಟೀ ವೇಳೆ ಹರಿಣಗಳ ಮೊತ್ತ 218ಕ್ಕೆ ಏರಿತು. ಇಬ್ಬರೂ 60ರ ಗಡಿ ದಾಟಿ ಮುಂದಡಿ ಇರಿಸಿದ್ದರು. ಬಳಿಕ  ಇನ್ನೂ 8 ಓವರ್‌ ಜತೆಗೂಡಿ ಕಳೆದ ಈ ಜೋಡಿ 7ನೇ ವಿಕೆಟಿಗೆ 160 ರನ್‌ ಪೇರಿಸಿ ಬೇರ್ಪಟ್ಟಿತು. 

ಕೈಜಾರಿದ ಶತಕ
ಉತ್ತಮವಾಗಿ ಆಡುತ್ತಿದ್ದ ಇವರಿಬ್ಬ ರಿಗೂ ಶತಕ ಮಾತ್ರ ಕೈ ಹಿಡಿಯಲಿಲ್ಲ. ಬವುಮ 89 ರನ್‌ (160 ಎಸೆತ, 9 ಬೌಂಡರಿ) ಮತ್ತು ಡಿ ಕಾಕ್‌ 91 ರನ್‌ (118 ಎಸೆತ, 10 ಬೌಂಡರಿ, 3 ಸಿಕ್ಸರ್‌) ಮಾಡಿ ಔಟಾದರು. ನೂರರೊಳಗೆ 6 ವಿಕೆಟ್‌ ಹಾರಿಹೋದ ಸಂದರ್ಭದಲ್ಲಿ ತಂಡವೊಂದು ಮುನ್ನೂರರ ಗಡಿ ದಾಟಿದ 11ನೇ ಸಂದರ್ಭ ಇದಾಗಿದೆ. 

ಇದು ದಕ್ಷಿಣ ಆಫ್ರಿಕಾದ ಟೆಸ್ಟ್‌ ಇತಿಹಾಸ ದಲ್ಲಿ 7ನೇ ವಿಕೆಟಿಗೆ ಒಟ್ಟುಗೂಡಿದ 4ನೇ, ನ್ಯೂಜಿಲ್ಯಾಂಡ್‌ ಎದುರು ದಾಖಲಾದ 2ನೇ ಸರ್ವಾಧಿಕ ಮೊತ್ತ. ಅಷ್ಟೇ ಅಲ್ಲ, ನೂರರೊಳಗೆ 6 ವಿಕೆಟ್‌ ಹಾರಿಹೋದ ಬಳಿಕ 7ನೇ ವಿಕೆಟಿಗೆ ದಾಖಲಿಸಿದ ಬೃಹತ್‌ ಜತೆಯಾಟವೂ ಇದಾಗಿದೆ. ಹಿಂದಿನ ದಾಖಲೆ ಭಾರತದ ಹೆಸರಲ್ಲಿತ್ತು. ವೆಸ್ಟ್‌ ಇಂಡೀಸ್‌ ಎದುರಿನ 2011ರ ಕಿಂಗ್‌ಸ್ಟನ್‌ ಟೆಸ್ಟ್‌ನಲ್ಲಿ ಭಾರತದ 6 ವಿಕೆಟ್‌ 85 ರನ್ನಿಗೆ ಬಿದ್ದಾಗ ರೈನಾ-ಹರ್ಭಜನ್‌ ಸೇರಿಕೊಂಡು 146 ರನ್‌ ಒಟ್ಟುಗೂಡಿಸಿದ್ದರು.ಅಂತಿಮ ವಿಕೆಟಿಗೆ ಜತೆಗೂಡಿರುವ ವೆರ್ನನ್‌ ಫಿಲಾಂಡರ್‌ (ಬ್ಯಾಟಿಂಗ್‌ 36) ಮತ್ತು ಮಾರ್ನೆ ಮಾರ್ಕೆಲ್‌ (ಬ್ಯಾಟಿಂಗ್‌ 21) ಕೂಡ ಕಿವೀಸ್‌ ದಾಳಿಗೆ ಕಗ್ಗಂಟಾಗಿ ಉಳಿದಿದ್ದಾರೆ. ಈಗಾಗಲೇ 13.5 ಓವರ್‌ಗಳ ದಿಟ್ಟ ನಿಲುವಿನಲ್ಲಿ 47 ರನ್‌ ಸಂಗ್ರಹಿಸಿದ್ದಾರೆ. 

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-268. ದಕ್ಷಿಣ ಆಫ್ರಿಕಾ-9 ವಿಕೆಟಿಗೆ 349 (ಡಿ ಕಾಕ್‌ 91, ಬವುಮ 89, ಫಿಲಾಂಡರ್‌ ಬ್ಯಾಟಿಂಗ್‌ 36, ಗ್ರ್ಯಾಂಡ್‌ಹೋಮ್‌ 52ಕ್ಕೆ 3, ವ್ಯಾಗ್ನರ್‌ 96ಕ್ಕೆ 3, ಸೌಥಿ 98ಕ್ಕೆ 2).

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.