ವಾಹನ ವೇಗ ನಿಯಂತ್ರಣ: ಇಂಟರ್‌ಸೆಪ್ಟರ್‌ನ ಪೂರ್ಣ ಬಳಕೆಯಾಗಲಿ

Team Udayavani, Mar 28, 2017, 4:36 PM IST

29-KUNDAPUR-5.jpg

ಕೋಟೇಶ್ವರ: ಅಮಿತ ವೇಗದಿಂದ ಸಾಗುವ ವಾಹನಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಪೊಲೀಸ್‌ ಹಾಗೂ ಆರ್‌ಟಿಒ ಇಲಾಖೆ ವಿಫಲ ವಾಗುತ್ತಿದ್ದು ಮಂಗಳೂರಿನಿಂದ ಬೈಂದೂರು ವರೆಗಿನ ರಾ. ಹೆದ್ದಾರಿ 66 ರ ಚತುಷ್ಪಥ ರಸ್ತೆಯಲ್ಲಿ ದಿನಂಪ್ರತಿ ಒಂದಲ್ಲೊಂದು ರೀತಿಯಲ್ಲಿ ವಾಹನ ಅಪಘಾತ ನಡೆಯುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ.

ಸಮೀಪದ ಕೇರಳದಲ್ಲಿ ಪ್ರತಿಯೊಂದು ವಾಹನದ ವೇಗದ ಮಿತಿ ಕಿ.ಮೀ. 70ರಂತೆ ಸಾಗಬೇಕಾದ ನಿರ್ಬಂಧ ಇರುವುದರಿಂದ ಅಲ್ಲಿ ಪ್ರತಿಯೊಂದು ವಾಹನವು ಆ ವೇಗದ ಮಿತಿಯಲ್ಲೇ ಸಾಗುತ್ತಿವೆ. ಅಮಿತ ವೇಗದಲ್ಲಿ ಸಾಗಿದಲ್ಲಿ ಇಂಟರ್‌ಸೆಪ್ಟರ್‌ ಸಹಿತ ಪೆಟ್ರೋಲಿಂಗ್‌ ವಾಹನಗಳು ತಡೆದು ನಿಲ್ಲಿಸಿ ದಂಡ ಹೇರುವುದರೊಡನೆ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಾದ ಕ್ರಮವು ಅಲ್ಲಿನ ಪ್ರತಿಯೊಂದು ವಾಹನ ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಸಹಿತ ಘನ ಹಾಗೂ ಲಘು ವಾಹನಗಳು ಕಿ.ಮೀ. 90ರಿಂದ 100ರ ವೇಗದಲ್ಲಿ ಸಾಗುತ್ತಿರುವುದು ಅನೇಕ ಅಪಘಾತಗಳಿಗೆ ಹೇತುವಾಗಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಇಂಟರ್‌ಸೆಪ್ಟರ್‌ ಪೊಲೀಸ್‌ ವಾಹನ ಬಳಕೆಯಲ್ಲಿದ್ದರೂ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಕ್ರಮವನ್ನು ಕೈಗೊಳ್ಳದಿರುವುದು ಈ ಭಾಗದ ವಾಹನ ಚಾಲಕರಿಗೆ ವರದಾನವಾಗಿದೆ. ಕುಂದಾಪುರ ತಾಲೂಕಿಗೆ ಸಂಬಂಧಪಟ್ಟಂತೆ ಸರಿಸುಮಾರು 4 ರಿಂದ 5 ಅಪಘಾತಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನಂಪ್ರತಿ ನಡೆಯುತ್ತಿರುವುದು ಆ ವಾಹನಗಳ ಮಿತವಲ್ಲದ ವೇಗದಿಂದಾಗಿದೆ ಎಂದು ಅಂದಾಜಿಸಲಾಗಿದೆ.

ಬಳಕೆಯಾಗದ ಇಂಡಿಕೇಟರ್‌: ಹಲವು ವಾಹನಗಳಲ್ಲಿ ಇಂಡಿಕೇಟರ್‌ ನಿಷ್ಕ್ರಿಯವಾಗಿದ್ದು ಮಿಕ್ಕುಳಿದ ವಾಹನಗಳಲ್ಲಿ ಇಂಡಿಕೇಟರ್‌ ಬಳಕೆ ಮಾಡದಿರುವುದು ಹಾಗೂ ಬ್ರೇಕ್‌ಲೈಟ್‌ ಇಲ್ಲದಿರುವುದು ವಾಹನ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ಹಲವಾರು ಕಡೆ ಸಿಗ್ನಲ್‌ ನೀಡದೇ ಮನಬಂದಂತೆ ವಾಹನ ಚಲಾಯಿಸುವ ಬೈಕ್‌ ಹಾಗೂ ರಿಕ್ಷಾಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಇಲಾಖೆ ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಮೃತಪಟ್ಟು ರಕ್ತದೋಕುಳಿ ಹರಿಯಲಿದೆ. ಉಡುಪಿ ಜಿಲ್ಲೆಗೆ ಮತ್ತೆ ಪ್ರತ್ಯೇಕ 3 ಪೊಲೀಸ್‌ ಗಸ್ತು ವಾಹನ ಅನಾವರಣ ಕಾರ್ಯಕ್ರಮ ರವಿವಾರ ನಡೆದಿರುವ ಈ ದಿಸೆಯಲ್ಲಿ ರಾ. ಹೆದ್ದಾರಿ 66 ಸಹಿತ ರಾಜ್ಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳ ವೇಗದ ಮೇಲೆ ನಿಗಾ ವಹಿಸ ಬೇಕಾದ ಕರ್ತವ್ಯ ಪೊಲೀಸರಿಗಿದೆ ಅನ್ನುವುದನ್ನು ಮರೆಯಬಾರದು.

ಸೀಟ್‌ ಬೆಲ್ಟ್ ಬಳಕೆಯಾಗಲಿ 
ಇತರ ರಾಜ್ಯಗಳಲ್ಲಿ ವಾಹನ ಚಾಲಕರಿಗೆ ಸೀಟ್‌ ಬೆಲ್ಟ್ ಬಳಕೆ ಕಡ್ಡಾಯವಾಗಿರುವ ಈ ದಿಸೆಯಲ್ಲಿ ಕರ್ನಾಟಕದ ಬೆಂಗಳೂರು, ಶಿವಮೊಗ್ಗ ಹೊರತುಪಡಿಸಿ ಇನ್ನಿತರ ಕಡೆಗಳಲ್ಲಿ  ಸೀಟ್‌ ಬೆಲ್ಟ್ ಕಡ್ಡಾಯವಿಲ್ಲದಿರುವುದು ಚಾಲಕರ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ. ಅಮಿತ ವೇಗದಲ್ಲಿ ಸಾಗುವ ವಾಹನಗಳ ವೇಗಕ್ಕೆ ನಿಯಂತ್ರಣ ಸಾಧಿಸದಿದ್ದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಕಂಡುಬಂದಿದ್ದು ಇದಕ್ಕೊಂದು ಪರ್ಯಾಯ ವ್ಯವಸ್ಥೆಯಾಗಿ ಪೊಲೀಸ್‌ ಇಲಾಖೆ ಆಯ್ದ ಪ್ರದೇಶಗಳಲ್ಲಿ ವಾಹನಗಳ ತಪಾಸಣೆ ಹಾಗೂ ಮಿತ ವೇಗದಲ್ಲಿ ಸಾಗುವ ಪರಿಪಾಠ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಡಾ| ಸುಧಾಕರ ನಂಬಿಯಾರ್‌
 
ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.