ಸಯಾನ್ ಜಿಎಸ್ಬಿ ಮೆಡಿಕಲ್ ಟ್ರಸ್ಟ್: ಹೆಲ್ತ್ ರಕ್ಷಕ್ಗೆ ಚಾಲನೆ
Team Udayavani, Mar 30, 2017, 5:08 PM IST
ಮುಂಬಯಿ: ಸಯಾನ್ ಪೂರ್ವದ ಶಿಲ್ಪಾ ಅಪಾರ್ಟ್ಮೆಂಟ್ನಲ್ಲಿರುವ ಜಿಎಸ್ಬಿ ಮೆಡಿಕಲ್ ಟ್ರಸ್ಟ್ ವತಿಯಿಂದ ಹೆಲ್ತ್ ರಕ್ಷಕ್ ವಿಶೇಷ ಕೊಡುಗೆಯನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಸಂಸ್ಥೆಯ ಈ ನೂತನ ಯೋಜನೆಯಿಂದ ಗ್ಯಾಸ್ಟೊÅà ಸ್ಕೋಪ್, ಕೊಲೊನೋ ಸ್ಕೋಪ್ ಇತ್ಯಾದಿಗಳನ್ನು ಹೆಲ್ತ್ ರಕ್ಷಕ್ ಯಂತ್ರದಿಂದ ಮಾಡಬಹುದು. ಡಾ| ಮುಕುಂದ್ ಮೆಹ್ತಾ ಅವರು ತಮ್ಮ ಮಾತಾಪಿತರಾದ ಶ್ರೀದೇವಿ ಮಹಾಲೆ ಮತ್ತು ಬಾಬುರಾವ್ ಮಹಾಲೆ ಅವರ ಸಂಸ್ಮರಣಾರ್ಥ ಈ ವಿನೂತನ, ಅತ್ಯಾಧುನಿಕ ವೈಜ್ಞಾನಿಕ ಯಂತ್ರವನ್ನು ಸಂಸ್ಥೆಗೆ ಪ್ರದಾನಿಸಿದರು. ಜಿಎಸ್ಬಿ ಮೆಡಿಕಲ್ ಟ್ರಸ್ಟ್ನ ಈ ಅತ್ಯಾಧುನಿಕ ಯಂತ್ರವನ್ನು ಹೊಂದಿರುವುದರಿಂದ ಸಮಾಜ ಬಾಂಧವರಿಗೆ ಬಹಳಷ್ಟು ಅನುಕೂಲವಾದಂತಾಗಿದೆ.
ಟ್ರಸ್ಟ್ನ ಕಾರ್ಯಾಧ್ಯಕ್ಷ ಡಾ| ಸುಹಾಸ್ ಪ್ರಭು ಅವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಡಾ| ಕುಮುದಾ ಮೆಹ¤ ಮತ್ತು ಡಾ| ಪ್ರವೀಣ್ ಮೆಹ¤ ಅವರು ನೂತನ ಯಂತ್ರಕ್ಕೆ ಚಾಲನೆ ನೀಡಿ, ಭವಿಷ್ಯದಲ್ಲಿ ಸಮಾಜ ಬಾಂಧವರಿಗೆ ಇದು ಪ್ರಯೋಜನಕಾರಿಯಾಗಲಿದೆ ಎಂದು ನುಡಿದು ಶುಭ ಹಾರೈಸಿದರು.
ಮಹಾಲೆ ಕುಟುಂಬದ ಹಿರಿಯ ಸದಸ್ಯ ಡಾ| ವಿ. ವಿ. ಪ್ರಭು ಅವರು ಉಪಸ್ಥಿತರಿದ್ದು ಮಹಾಲೆ ಕುಟುಂಬಿಕರ ಸಮಾಜಪರ ಕಾರ್ಯಕ್ರಮಗಳನ್ನು ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ಗೀತಾ ಆರ್. ಪೈ ಅವರು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸಿಬಂದಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?