ಸೈಕ್ಲಿಂಗ್ ದುರಂತ: ಬ್ರಿಟನ್ನ ಸೈಕ್ಲಿಸ್ಟ್ ಮೈಕ್ ಹಾಲ್ ದುರ್ಮರಣ
Team Udayavani, Apr 2, 2017, 3:04 PM IST
ಸಿಡ್ನಿ: ಬ್ರಿಟನ್ನ ಅಲ್ಟ್ರಾ ಡಿಸ್ಟೆನ್ಸ್ ಸೈಕ್ಲಿಸ್ಟ್ ಮೈಕ್ ಹಾಲ್ ಆಸ್ಟ್ರೇಲಿಯಾದಲ್ಲಿ ನಡೆದ ಸೈಕಲ್ ರೇಸ್ವೊಂದರ ವೇಳೆ ದುರಂತ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ.
35 ವರ್ಷದ ಅವರು 5,300 ಕಿ.ಮೀ. ಸವಾಲನ್ನು ಒಳಗೊಂಡ ಇಂಡಿಯನ್ ಫೆಸಿಪಿಕ್ ವೀಲ್ ಸೈಕ್ಲಿಂಗ್ ರೇಸ್ನಲ್ಲಿ ಪಾಲ್ಗೊಂಡಿದ್ದರು.
ಪರ್ಥ್ನಿಂದ ಸಿಡ್ನಿವರೆಗೆ ಕ್ರಮಿಸುವ ಸವಾಲಿನ ರೇಸ್ ಅದಾಗಿತ್ತು.ಈ ರೇಸ್ ವೇಳೆ ಕ್ಯಾನ್ಬೆರ್ರಾ ಬಳಿ ಎದುರಿನಿಂದ ರಭಸದಿಂದ ಬಂದ ಕಾರೊಂದು ಹಾಲ್ ಅವರ ಸೈಕಲ್ಗೆ ಗುದ್ದಿದೆ. ಘರ್ಷಣೆ ವೇಗಕ್ಕೆ ಹಾಲ್ ಗಂಭೀರ ಗಾಯಗೊಂಡರು. ಬಳಿಕ ಅಸುನೀಗಿದರು ಎಂದು ಸಂಘಟಕರು ತಿಳಿಸಿದ್ದಾರೆ. ಸಾವಿಗೀಡಾಗುವ ಮೊದಲು ರೇಸ್ನಲ್ಲಿ ಹಾಲ್ 2ನೇ ಸ್ಥಾನಿಯಾಗಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸ ಬಂಧಪಟ್ಟಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಎಲ್ಲ ರೀತಿಯಲ್ಲೂ ತನಿಖೆಗೆ ಸಹಕಾರ ನೀಡುವುದಾಗಿ ಸಂಘಟಕರು ತಿಳಿಸಿದ್ದಾರೆ. ಅಲ್ಲದೆ ಘಟನೆ ನಡೆದ ತಕ್ಷಣ ಕೂಟವನ್ನು ಸ್ಥಗಿತಗೊಳಿಸಲಾಗಿದ್ದು ಮುಂದಿನ ರೇಸ್ ಯಾವಾಗ ನಡೆಸಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಸೂಕ್ತ ಭದ್ರತೆ ವ್ಯವಸ್ಥೆ ಮಾಡಿದ ಬಳಿಕ ರೇಸ್ ನಡೆಸಲು ಸಂಘಟಕರು ಚಿಂತನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ