ಮುಂಬಯಿ ಶೇರು ಪೇಟೆಗೆ ಆರಂಭಿಕ ಆಘಾತ: 73 ಅಂಕ ಕುಸಿತ
Team Udayavani, Apr 13, 2017, 11:02 AM IST
ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 73.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 29,570.3 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಆರಂಭಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 26.55 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,176.90 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 48.26 ಅಂಕಗಳ ನಷ್ಟದೊಂದಿಗ 9,595.22 ಅಂಕಗಳ ಮಟ್ಟದಲ್ಲೂ ನಿಫ್ಟಿ 15.15 ಅಂಕಗಳ ನಷ್ಟದೊಂದಿಗೆ 9.188.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್, ಐಟಿ, ಟೆಕ್ನಾಲಜಿ, ಕ್ಯಾಪಿಟಲ್ ಗೂಡ್ಸ್ ಮತ್ತು ಎಫ್ಎಂಸಿಜಿ ರಂಗದ ಶೇರುಗಳು ಶೇ.1ರಷ್ಟು ಕುಸಿತವನ್ನು ಕಂಡವು.
ನಿನ್ನೆ ಸರಕಾರ ಪ್ರಕಟಿಸಿರುವ ಕೈಗಾರಿಕಾ ಉತ್ಪಾದನಾ ಅಂಕಿ ಅಂಶಗಳ ಪ್ರಕಾರ ಕೈಗಾರಿಕಾ ಉತ್ಪಾದನೆ ಕಳೆದ 4 ತಿಂಗಳ ಕನಿಷ್ಠ ಮಟ್ಟವಾಗಿ ಫೆಬ್ರವರಿಯಲ್ಲಿ ಶೇ.1.2ರಷ್ಟು ಕುಗ್ಗಿರುವುದು ಇಂದು ಶೇರು ಪೇಟೆಯಲ್ಲಿ ಹೂಡಿಕೆದಾರರ ನಿರಾಸಕ್ತಿಗೆ ಕಾರಣವಾಗಿತ್ತು.
ಏಶ್ಯನ್ ಶೇರು ಪೇಟೆಗಳಲ್ಲಿ ಕೂಡ ಇಂದು ದುರ್ಬಲ ಪ್ರವೃತ್ತಿ ಕಂಡು ಬಂದಿದೆ. ಹಾಂಕಾಂಗ್ನ ಹ್ಯಾಂಗ್ ಸೆಂಗ್ ಶೇ.0.07ರಷ್ಟು ಕುಸಿತ ಕಂಡಿದೆಯಾದರೆ ಜಪಾನಿನ ನಿಕ್ಕಿ ಶೇ.1.14ರ ಕುಸಿತ ಕಂಡಿದೆ. ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಬಹುತೇಕ ಮಟ್ಟಸವಾಗಿತ್ತು. ಅಮೆರಿಕದ ಡೋವ್ ಜೋನ್ಸ್ ನಿನ್ನೆ ಶೇ.0.29ರ ಕುಸಿತವನ್ನು ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್