ನಿರೀಕ್ಷೆ ಮುಟ್ಟದ ಕೆಲಸ: ಇನ್ನೂ 2,000 Wipro ಉದ್ಯೋಗಿಗಳು ವಜಾ ?


Team Udayavani, Apr 21, 2017, 12:28 PM IST

WIPRO-700.jpg

ಹೊಸದಿಲ್ಲಿ : ವಾರ್ಷಿಕ ಕಾರ್ಯನಿರ್ವಹಣೆ ವಿಶ್ಲೇಷಣೆಯ ಭಾಗವಾಗಿ ದೇಶದ ಮೂರನೇ ಬೃಹತ್‌ ಐಟಿ ಸಂಸ್ಥೆಯಾಗಿರುವ ವಿಪ್ರೋ ತನ್ನ ನೂರಾರು ನೌಕರರನ್ನು ಉದ್ಯೋಗದಿಂದ ಕಿತ್ತು ಹಾಕಿದೆ.

ಮೂಲಗಳ ಪ್ರಕಾರ ನಿರೀಕ್ಷಿತ ಮಟ್ಟದ ತೃಪ್ತಿಕರ ಕಾರ್ಯನಿರ್ವಹಣೆ ತೋರದ ಸುಮಾರು 600 ಮಂದಿ ನೌಕಕರನ್ನು ಉದ್ಯೋಗದಿಂದ ತೆಗೆದು ಹಾಕಿರುವುದಾಗಿ ತಿಳಿದು ಬಂದಿದೆ. ಆದರೆ ವಿಪ್ರೋದಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ 2,000 ದಾಟಲಿದೆ ಎಂದು ಊಹಿಸಲಾಗಿದೆ.

2016ರ ಡಿಸೆಂಬರ್‌ ಅಂತ್ಯಕ್ಕೆ ಬೆಂಗಳೂರಿನಲ್ಲಿ ನೆಲೆಗೊಂಡಿರುವ ವಿಪ್ರೋ ಐಟಿ ಕಂಪೆನಿಯಲ್ಲಿ 1.79 ಲಕ್ಷಕ್ಕೂ ಅಧಿಕ ನೌಕರರು ಇದ್ದರು. 

ವಿಪ್ರೋ ಕಂಪೆನಿಯನ್ನು ಈ ಬಗ್ಗೆ ಸಂಪರ್ಕಿಸಿದಾಗ, “ಅತ್ಯಂತ ಕಠಿನ ಗುಣಮಟ್ಟದ ಕಾರ್ಯನಿರ್ವಹಣ ವಿಶ್ಲೇಷಣೆಯನ್ನು ಕಂಪೆನಿಯು ಕೈಗೊಂಡಿದ್ದು ಕಂಪೆನಿಯ ಔದ್ಯಮಿಕ ಉದ್ದೇಶಗಳಿಗೆ ಸರಿಹೊಂದುವ, ಗ್ರಾಹಕರ ಆವಶ್ಯಕತೆಗಳನ್ನು ಪೂರೈಸಬಲ್ಲ, ಸಂಸ್ಥೆಯ ವ್ಯೂಹಾತ್ಮಕ ಆದ್ಯತೆಗಳಿಗೆ ತಕ್ಕುದಾಗಿರಬಲ್ಲ ಕಾರ್ಯಪಡೆಯನ್ನು ರೂಪಿಸುವ ನಿಟ್ಟಿನಲ್ಲಿ ನೌಕರರ ಕಾರ್ಯಸಾಮರ್ಥ್ಯ, ದಕ್ಷತೆ, ನಿರ್ವಹಣಾ ಕೌಶಲ ಇತ್ಯಾದಿಗಳನ್ನು ಕಾಲಕಾಲಕ್ಕೆ ನಡೆಸುತ್ತಿದ್ದೇವೆ’ ಎಂದು ಅದು ಹೇಳಿದೆ. 

ಅಂದ ಹಾಗೆ ಇದೇ ಎಪ್ರಿಲ್‌ 25ರಂದು ವಿಪ್ರೋ ಕಂಪೆನಿಯು ತನ್ನ ನಾಲ್ಕನೇ ತ್ತೈಮಾಸಿಕ ಹಾಗೂ ಪೂರ್ಣ ಹಣಕಾಸು ವರ್ಷದ ಆದಾಯ ಫ‌ಲಿತಾಂಶವನ್ನು ಪ್ರಕಟಿಸಲಿದೆ. 

ಅಮೆರಿಕ, ಸಿಂಗಾಪುರ, ಆಸ್ಟ್ರೇಲಿಯ ಮತ್ತು ನ್ಯೂಜೀಲಂಡ್‌ ದೇಶಗಳು ಐಟಿ ಉದ್ಯೋಗ ವೀಸಾ ನಿಬಂಧನೆಗಳನ್ನು ಕಟ್ಟುನಿಟ್ಟುಗೊಳಿಸಿ ಸ್ವದೇಶೀಯರಿಗೇ ಮೊದಲ ಆದ್ಯತೆಯಲ್ಲಿ ಉದ್ಯೋಗ ಎಂಬ ನೀತಿ, ನಿಲುವು, ತತ್ವಕ್ಕೆ ಅಂಟಿಕೊಂಡಿರುವುದರಿಂದ ಭಾರತೀಯ ಐಟಿ ಕಂಪೆನಿಗಳಿಗೆ ತೀವ್ರವಾಗಿ ಬಿಸಿ ಮುಟ್ಟಿದೆ. 

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.