ದಿಗ್ಗಾಂವ ಶಂಭುಲಿಂಗೇಶ್ವರ ಜಾತ್ರೆ ಇಂದಿನಿಂದ


Team Udayavani, Apr 21, 2017, 3:24 PM IST

gul2.jpg

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ.21ರಂದು ಮಹಾ ರಥೋತ್ಸವ ನಡೆಯಲಿದೆ ಎಂದು ಶಂಭುಲಿಂಗೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ. 

ಏ.21ರಂದು ಸಂಜೆ 4:00ಕ್ಕೆ ಮಾಲಿಗೌಡರ ಮನೆಯಿಂದ ಕುಂಭಮೇಳ ಹಾಗೂ ಪೊಲೀಸ್‌ ಗೌಡರ ಮನೆಯಿಂದ ತೇರಿನ ಕಳಸ ಮತ್ತು ಅಣ್ಣೆಪ್ಪಗೌಡರ ಮನೆಯಿಂದ ಮಾಯೆಮರ್ತಪ ದಿವಟಿಗೆ, ಪುರವಂತರ ಆಟದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ದೇವಾಲಯಕ್ಕೆ ತಲುಪುವುದು.

ಸಂಜೆ 6:00ಕ್ಕೆ ಮಹಾ ರಥೋತ್ಸವ ನಡೆಯಲಿದೆ. ರಾತ್ರಿ 8:00ಕ್ಕೆಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ ಶಿವಾಚಾರ್ಯರು  ಮತ್ತು ಕಂಚಗಾರಹಳ್ಳ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ಅವರಿಂದ ಆಶೀವರ್ಚನ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9:30ಕ್ಕೆ ಗೀಗೀ ಪದ ಹಾಡುಗಾರಿಕೆ ಕಾರ್ಯಕ್ರಮ, ಏ. 22ರಂದು ಬೆಳಗ್ಗೆ 8:00ರಿಂದ 10:00ರ ವರೆಗೆ ಮತ್ತು ಸಂಜೆ 4:00ರಿಂದ 6:00ರ ವರೆಗೆ ಕುಸ್ತಿ ನಡೆಯಲಿದೆ. ಪ್ರತಿದಿನ ರಾತ್ರಿ 10:00ಕ್ಕೆ ನಾ ಸಾಕಿದ ಗಿಣಿ ಸಾಮಾಜಿಕ ನಾಟಕ ನಡೆಯಲಿದೆ ಎಂದು ತಿಳಿಸಿದ್ದಾರೆ. 

ಇತಿಹಾಸ: ತಾಲೂಕಿನ ದಿಗ್ಗಾಂವದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಪ್ರತಿರೂಪವಾಗಿದೆ. ದಿಗ್ಗಾಂವ ಗ್ರಾಮದ ಮೂಲ ಹೆಸರು ದಿಗ್ಗಾವಿ. ಕಲ್ಯಾಣ ಚಾಲುಕ್ಯರ ಕಾಲದಿಂದ 14 ಗ್ರಾಮಗಳ ಮಧ್ಯದಲ್ಲಿರುವ ದಿಗ್ಗಾವಿ ಗ್ರಾಮದಲ್ಲಿ 360 ಲಿಂಗಗಳು, 360 ಬಾವಿಗಳು ಹಾಗೂ 360 ಚಾವುಲಿ ಭೂಮಿ ಇವೆ.

ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಅತ್ಯಂತ ವೈಭವದ ಗೋಪುರ ನಿರ್ಮಿಸಲಾಗಿದೆ. ಇಲ್ಲಿ ಉದ್ಬವ ಲಿಂಗವಾಗಿ ಹೊಂದಿರುವ ಶಂಭುಲಿಂಗೇಶ್ವರ ದೇವಸ್ಥಾನ ಪ್ರಸಿದ್ಧ ಪಡೆದಿದೆ. ಪೂಜೆ ಬಾವಿ, ಸ್ನಾನದ ಬಾವಿ, ತೀರ್ಥದ ಬಾವಿ, 60 ಲಿಂಗದ ಪರುಷ ಸ್ನಾನದ ಬಾವಿ, ಹೂವಿನ ಬಾವಿ, ಗಂಗಾ ಸ್ಥಳದ ಬಾವಿ, ಮನುಕುಲದ  ಷಡುಣಗಳ ಶುದ್ಧಿಕರಣದ ಬಾವಿಗಳಿವೆ.

ಪೂರ್ವಾಭಿಮುಖವಾಗಿರುವ ಗುಡಿ ಆವರಣದಲ್ಲಿ 12 ಜ್ಯೋತಿ ರ್ಲಿಂಗಗಳಿವೆ. ಮಲ್ಲಿಕಾರ್ಜುನ ದೇವಾಲಯ, ಶ್ರೀ ವೀರಭದ್ರೇಶ್ವರ ದೇವಾಲಯ, ಭ್ರಮರಾಂಭೆ, ಕಾಳಿಕಾ ದೇವಾಲಯವಿದೆ. ಪಂಚಮುಖೀ ಪರಮೇಶ್ವರ ತ್ರಿಮೂರ್ತಿ ಲಿಂಗಗಳಿವೆ. ಮಲ್ಲಿಕಾರ್ಜುನ ಹಾಗೂ ಭ್ರಮರಾಂಬಿಕೆ ಹೊಂದಿರುವ 360 ಲಿಂಗಗಳು ಇರುವುದರಿಂದಲೇ ಇದು ಸಾಕ್ಷಾತ್‌ ಶ್ರೀಶೈಲ ಚಿಕ್ಕ ಕ್ಷೇತ್ರ ಎಂದು ಹೇಳಲಾಗುತ್ತಿದೆ. 

ಇಲ್ಲಿ ಅನೇಕ ಶಾಸನಗಳನ್ನು ನೋಡಬಹುದಾಗಿದೆ. ನೂರಾರು ವರ್ಷಗಳ ಹಿಂದಿನ ರಥದ ಕಲ್ಲಿನ ಚಕ್ರಗಳು ಶಕ್ತಿಯುತವಾಗಿವೆ. ಹಿಂದೆ ರಥಕ್ಕೆ ಇದ್ದ ಬಿದರಿನ ತಡಕಿ ತೆಗೆದು 1985ರಲ್ಲಿ ಕಬ್ಬಿಣದ ತಡಕಿ ತಯಾರಿಸಿ ಅಲಂಕೃತಗೊಳಿಸಲಾಗಿದೆ. ಗ್ರಾಮಸ್ಥರು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡಿದ್ದು, ದೇವಸ್ಥಾನ ಕಟ್ಟಡಗಳ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ.

ಟಾಪ್ ನ್ಯೂಸ್

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

Shivraj tangadagi

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.