ಐತಿಹಾಸಿಕ 30,167 ಅಂಶಕ್ಕೆ ಏರಿದ ಷೇರುಪೇಟೆ ಸೆನ್ಸೆಕ್ಸ್
Team Udayavani, Apr 27, 2017, 11:41 AM IST
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಷೇರು ಸೂಚ್ಯಂಕ 30 ಸಾವಿರ ಅಂಶಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ ಹೊಸ ದಾಖಲೆ ಬರೆದಿದೆ. ಜಾಗತಿಕ ಮಟ್ಟದಲ್ಲಿ ಧನಾತ್ಮಕ ಪರಿಣಾಮಗಳು, ಖರೀದಿದಾರರ ಉತ್ಸಾಹ, ಅಮೆರಿಕದಲ್ಲಿ ತೆರಿಗೆ ನೀತಿ ಧಾರಣೆ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಸೂಚ್ಯಂಕ ಭಾರೀ ಏರಿಕೆ ಕಂಡಿದೆ. ಬಿಎಸ್ಇ ಪ್ರಮುಖ 30 ಷೇರುಗಳ ಬೆಲೆ ಏರಿಕೆ ಕಂಡಿದ್ದು, ಸೂಚ್ಯಂಕ ದಿನದಂತ್ಯಕ್ಕೆ 30,167 ಮುಟ್ಟಿದೆ.
ಮಾ.4ರಂದು ಸೂಚ್ಯಂಕ ಸರ್ವಾಧಿಕ 30,024ಕ್ಕೆ ತಲುಪಿದ್ದು ಈವರೆಗಿನ ದಾಖಲೆಯಾಗಿತ್ತು. ಇದರೊಂದಿಗೆ 3 ದಿನಗಳಲ್ಲಿ ಸೂಚ್ಯಂಕ 768 ಅಂಶಗಳಷ್ಟು ಏರಿಕೆ ಕಂಡಂತಾಗಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕ 45 ಅಂಶ ಏರಿಕೆಯೊಂದಿಗೆ ದಾಖಲೆ ಯ 9,367 ಅಂಶಕ್ಕೆ ಬಂದು ನಿಂತಿದೆ. ರೂಪಾಯಿಯೂ ಚೇತರಿಕೆ ಕಂಡಿದ್ದು, ಪ್ರತಿ ಡಾಲರ್ಗೆ 63.93 ರೂ. ಆಗಿದೆ.