ವಿಮಾನ ಹೈಜಾಕ್‌ ಆಗಿದೆ ಎಂದು ಪ್ರಧಾನಿಗೆ ಟ್ವೀಟ್‌: ಪ್ರಯಾಣಿಕ ಅರೆಸ್ಟ್


Team Udayavani, Apr 28, 2017, 5:40 PM IST

Jet Air ways-700.jpg

ಜೈಪುರ : “ಪ್ರಧಾನಿಯವರೇ, ಜೆಟ್‌ ಏರ್‌ ವೇಸ್‌ ವಿಮಾನದಲ್ಲಿ ನಾನು ಕಳೆದ ಮೂರು ತಾಸುಗಳಿಂದ ಇದ್ದೇನೆ; ಇದು ಹೈಜಾಕ್‌ ಆಗಿರುವ ಹಾಗೆ ಕಾಣುತ್ತಿದೆ’  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್‌ ಮಾಡಿ ಪ್ರಯಾಣಿಕ ನಿತಿನ್‌ ವರ್ಮಾ ಎಂಬವರು ಮಾಡಿದ ಟ್ವೀಟ್‌, ಅವರಿಗೇ ತಿರುಗುಬಾಣವಾಗಿ ಬಂಧನಕ್ಕೆ ಸಂಕಷ್ಟಕ್ಕೆ ಗುರಿಯಾಗಬೇಕಾದ ದುಃಸ್ಥಿತಿ ಒದಗಿದ ವಿಲಕ್ಷಣಕಾರಿ ಪ್ರಸಂಗ ನಡೆದಿದೆ. 

ಈ ಪ್ರಸಂಗ ನಡೆದದ್ದು ಹೀಗೆ : ನಿನ್ನೆ ಗುರುವಾರ ಮುಂಬಯಿಯಿಂದ ದಿಲ್ಲಿಗೆ ಹೋಗುತ್ತಿದ್ದ ವಿಮಾನವನ್ನು ಪ್ರತಿಕೂಲ ಹವಾಮಾನದ ಕಾರಣ ಜೈಪುರಕ್ಕೆ ತಿರುಗಿಸಲಾಯಿತು. ಇದರಿಂದ ಪ್ರಯಾಣಿಕ ನಿತಿನ್‌ ವರ್ಮಾಗೆ ಕಿರಿಕಿರಿ ಉಂಟಾಗಿ ತಮ್ಮ ಸಿಟ್ಟನ್ನು ಟ್ವಿಟರ್‌ನಲ್ಲಿ ತೋಡಿಕೊಂಡರು. ವಿಮಾನದ ಭದ್ರತಾ ಅಧಿಕಾರಿಗಳಿಗೆ ಮಾಡಿದ ತನ್ನ ಟ್ವೀಟನ್ನು ಪ್ರಧಾನಿಗೂ ಟ್ಯಾಗ್‌ ಮಾಡಿದರು. 

“ನರೇಂದ್ರ ಮೋದಿ ಸರ್‌, ನಾವು ಜೆಟ್‌ ಏರ್‌ ವೇಸ್‌ ವಿಮಾನದಲ್ಲಿ ಕಳೆದ 3 ತಾಸುಗಳಿಂದ ಇದ್ದೇವೆ. ಇದು ಹೈಜ್ಯಾಕ್‌ ಆಗಿರೋ ಹಾಗೆ ಕಾಣುತ್ತಿದೆ. ದಯವಿಟ್ಟು ಸಹಾಯ ಮಾಡಿ’ ಎಂಬುದು ನಿತಿನ್‌ ವರ್ಮಾ ಮಾಡಿದ್ದ ಟ್ವೀಟ್‌ ಆಗಿತ್ತು.

ಈ ಟ್ವೀಟನ್ನು ಗಂಭೀರವಾಗಿ ಪರಿಗಣಿಸಿದ ಭದ್ರತಾ ಅಧಿಕಾರಿಗಳು  ಒಡನಯೇ ಕಾರ್ಯಾಚರಣೆಗೆ ಇಳಿದರು. ನಿತಿನ್‌ ವರ್ಮಾ ಸಹಿತ ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಯಾಣಿಕರನ್ನು ಹಾಗೂ ಎಂಟು ಚಾಲಕ ಸಿಬಂದಿಗಳನ್ನು ವಿಮಾನದಿಂದ ಕೂಡಲೇ ಕೆಳಗಿಳಿಸಿದರು. ವಿಮಾನವನ್ನು ಆಮೂಲಾಗ್ರವಾಗಿ ಶೋಧಿಸಿದರು. 

ಅಂತಿಮವಾಗಿ ಎಲ್ಲವೂ ಸರಿಯಾಗಿದೆ ಎಂದು ಕಂಡುಕೊಳ್ಳಲಾದ ಬಳಿಕ, ಟ್ವೀಟಿಗ ನಿತಿನ್‌ ವರ್ಮಾ ಹೊರತು ಪಡಿಸಿ, ಎಲ್ಲ ಪ್ರಯಾಣಿಕರನ್ನು ಮರಳಿ ವಿಮಾನಕ್ಕೇರಿಸಲಾಗಿ, ವಿಮಾನವನ್ನು ದಿಲ್ಲಿಗೆ ಹಾರಿಸಲಾಯಿತು.

ವರ್ಮಾ ಅವರನ್ನು ವಶಕ್ಕೆ ತೆಗೆದುಕೊಂಡ ಭದ್ರತಾ ಪಡೆಗಳು ನಿನ್ನೆ ತಡ ರಾತ್ರಿಯ ವರೆಗೂ ಪ್ರಶ್ನಿಸಿದರು. ಐಪಿಸಿ ಸೆಕ್ಷನ್‌ 505ರ ಪ್ರಕಾರ ನಾವು ಆತನ ವಿರುದ್ಧ ಕೇಸು ದಾಖಲಿಸಿದ್ದೇವೆ ಎಂದು ಎಸ್‌ಎಚ್‌ಓ ಸಂಗನೇರ್‌ ಶಿವರತನ್‌ ಗೋದರ ತಿಳಿಸಿದರು. 

ಈ ಘಟನೆಯ ಕುರಿತಾಗಿ ಜೆಟ್‌ ಏರ್‌ ವೇಸ್‌ ಹೊರಡಿಸಿದ ಪ್ರಕಟನೆಯಲ್ಲಿ “ಪ್ರಯಾಣಿಕರೋರ್ವರು ಮಾಡಿದ ಟ್ವಿಟರ್‌ ಸಂದೇಶವು ಭದ್ರತಾ ಬೆದರಿಕೆಯನ್ನು ಒಳಗೊಂಡಿದ್ದರಿಂದ ನಾವು ಭದ್ರತಾ ಶಿಷ್ಟಾಚಾರಗಳನ್ನು ತತ್‌ಕ್ಷಣವೇ ಪರಿಪಾಲಿಸಬೇಕಾಯಿತು’ ಎಂದು ಹೇಳಿದರು. 

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.