ರಾಮಕೃಷ್ಣ ಮೂಲ್ಯ ಕೊಲೆ ಕೃತ್ಯಕ್ಕೆ ಪ್ರತಿಭಟನೆ: ಸಿ.ಐ.ಕಚೇರಿಗೆ ಜಾಥಾ


Team Udayavani, Jun 7, 2017, 4:08 PM IST

shrikanth.jpg

ಕುಂಬಳೆ: ಹಿಂದೂಗಳ ಕೊಲೆಯನ್ನು ಗಂಭೀರವಾಗಿ ಪರಿಗಣಿಸದ ಎಡರಂಗ ಸರಕಾರ, ಅಕ್ರಮ ರಾಜಕೀಯವನ್ನು ಬೆಂಬಲಿಸುವ ಗೃಹಖಾತೆ ಹೊಂದಿದ ರಾಜ್ಯದ ಮುಖ್ಯಮಂತ್ರಿಯವರಿಂದ ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಮತಾಂಧ ಕೊಲೆ ಆರೋಪಿಗಳು ಕೋಮು ಭಾವನೆ ಕೆದಕಲು ಯತ್ನಿಸುತ್ತಿದ್ದಾರೆ. ನಿರಪರಾಧಿ ಹಿಂದೂಗಳ ಕೊಲೆ ನಡೆಸಿ ಇದರ ಹೆಸರಿನಲ್ಲಿ ವಿದೇಶ, ರಾಜ್ಯದಿಂದ ಹೇರಳ ಹಣ ಸಂಗ್ರಹಿಸುತ್ತಿದ್ದಾರೆ. ರಾಜ್ಯದ ಪೊಲೀಸರ ಮೇಲಿನ ಎಡಬಲ ರಂಗನಾಯಕರ ಒತ್ತಡದಿಂದ ಕೊಲೆಗಡುಕರು ನಿರಪರಾಧಿಗಳಾಗುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ಆರೋಪಿಸಿದರು.

ಕಯ್ನಾರು ಬಳಿಯ ಮಂಡೆಕಾಪುವಿನಲ್ಲಿ ಕಳೆದ ಮೇ 4ರಂದು ಮಧ್ಯಾಹ್ನ ಅಂಗಡಿಯೊಳಗೆ ರಾಮಕೃಷ್ಣ ಮೂಲ್ಯ ಅವರನ್ನು ಬರ್ಬರವಾಗಿ ಕೊಲೆಗೈದ ಮತಾಂಧರ ಕೃತ್ಯವನ್ನು ಪ್ರತಿಭಟಿಸಿ ಮಂಜೇಶ್ವರ ಬಿ.ಜೆ.ಪಿ. ಮಂಡಲ ಸಮಿತಿಯ ಆಶ್ರಯದಲ್ಲಿ ಸಂಘ ಪರವಾರದ ವತಿಯಿಂದ ಕುಂಬಳೆ ಸಿ.ಐ. ಕಚೇರಿಗೆ ನಡೆದ ಬೃಹತ್‌ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊಲೆಗೆ ಪ್ರತೀಕಾರವಾಗಿ ನಾವು ಕೊಲೆ ನಡೆಸಿರುವುದಾಗಿ ಕೊಲೆ ಆರೋಪಿಗಳು ತನಿಖೆಯಲ್ಲಿ ತಿಳಿಸಿದರೂ ಇದನ್ನು ಲಘುವಾಗಿ ಪರಿಗಣಿಸಿದ ಪೊಲೀಸರು ರಾಜಕೀಯ ಒತ್ತಡದಿಂದ ಕೇಸನ್ನು ಕಳ್ಳತನ ಪ್ರಕರಣವೊಂದಕ್ಕೆ ಥಳುಕು ಹಾಕಿದ್ದಾರೆ.ಆದುದರಿಂದ ಪ್ರಕರಣದ ತನಿಖೆಯನ್ನು ಕೇಂದ್ರ ಏಜೆನ್ಸಿಗೆ ನೀಡಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿ ಕಾಸರಗೋಡು ಮತ್ತು ಮಂಜೇಶ್ವರ ಉಭಯ ಶಾಸಕರು ಮುಸ್ಲಿಂ ಕಾರ್ಯಕರ್ತನ ಕೊಲೆಗೆ ಸರಕಾರದಿಂದ 10 ಲಕ್ಷ ನೀಡಬೇಕೆಂದು ವಿಧಾನ ಸಭೆಯಲ್ಲಿ ಒತ್ತಾಯಿಸಿರುವರು. ಆದರೆ ಹಿಂದೂಗಳ ಕೊಲೆ ನಡೆದಾಗ ಚಕಾರವೆತ್ತದ ಶಾಸಕರ ನಿಲುವು ಖಂಡನೀಯ. ರಾಮಕೃಷ್ಣ ಕೊಲೆ ಆರೋಪಿಗಳು ಪೆಯ್ಡ ಆರೋಪಿಗಳಾಗಿದ್ದು ಇವರಿಗೆ ಆರ್ಥಿಕ ಮತ್ತು ಪರೋಕ್ಷ ಬೆಂಬಲ ನೀಡಿದವರನ್ನು ಬಂಧಿಸಬೇಕು.ಉಗ್ರ ಸಂಘಟನೆಯ ನಂಟು ಹೊಂದಿರುವ ಈ ತಂಡದ ಸಂಚನ್ನು ಭೇದಿಸಲು ಪೊಲೀಸರು ಸಿದ್ಧರಾಗಬೇಕು. ರಾಜ್ಯದ ಸಿ.ಎಂ. ತನ್ನ ಜವಾಬ್ದಾರಿಯನ್ನು ಮರೆತು ಸಿಪಿಎಂ ಕಣ್ಣೂರು ಏರಿಯಾ ಕಾರ್ಯದರ್ಶಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಅಕ್ರಮ ಕೊಲೆ ರಾಜಕೀಯವಲ್ಲದೆ ಕಾಸರಗೋಡಿನ ಕನ್ನಡದ ಕೊಲೆಗೆ ಮುಂದಾಗಿದ್ದಾರೆ. ರಾಮಕೃಷ್ಣ ಕೊಲೆ ತನಿಖೆಗೆ ರಾಜಕೀಯ ಒತ್ತಡವಿದ್ದಲ್ಲಿ ಪ್ರಕರಣವನ್ನು ಕೇಂದ್ರಕ್ಕೆ ಒಪ್ಪಿಸಬೇಕೆಂಬುದಾಗಿ ಹೇಳಿದರು.

ಅಕ್ರಮ ರಾಜಕೀಯದಿಂದ ಬೇಸತ್ತ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಜನ ಬಯಸಿದ್ದಾರೆ.  ಉತ್ತರ ಪ್ರದೇಶದ ಮುಖ್ಯಮಂತ್ರಿಯಂತೆ ಓರ್ವ  ಸನ್ಯಾಸಿ ಶ್ರೇಷ್ಠರು ಮುಂದೆ ಕೇರಳದ ಸಿಎಂ ಆಗುವ ಸಾಧ್ಯತೆ ಇದೆ. ಮಂಜೇಶ್ವರ ಶಾಸಕರ ಪಕ್ಷಭೇದ ವರ್ತನೆ ಯಿಂದ ಜನ ರೋಸಿ ಹೋಗಿದ್ದಾರೆ. ಕಾಸರಗೋಡು ಮತ್ತು ಮಂಜೇಶ್ವರ ಉಗ್ರ ಸಂಘಟನೆ ಚಟುವಟಿಕೆಗಳ ಕೇಂದ್ರ ವಾಗುತ್ತಿರುವುದಾಗಿ ಹಿಂದೂ ಐಕ್ಯವೇದಿ  ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜನ್‌ ಮುಳಿಯಾರ್‌ ಆರೋಪಿಸಿದರು. ಮುರಳೀಧರ ಯಾದವ್‌ ಸ್ವಾಗತಿಸಿದರು.ಆದರ್ಶ್‌ ಬಿಎಂ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮಂಡಲ ಸಮಿತಿಯ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ವಹಿಸಿದರು. 

ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿ.ಜೆ.ಪಿ., ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ, ಹಿಂದೂ ಐಕ್ಯವೇದಿ, ಯುವಮೋರ್ಚಾ, ಮಹಿಳಾ ಮೋರ್ಚಾ, ಪರಿಶಿಷ್ಟ ಜಾತಿ, ವರ್ಗ ಮೋರ್ಚಾ, ಒ.ಬಿ.ಸಿ. ಮೋರ್ಚಾ, ನಾಯಕ  ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಪಿ. ಸುರೇಶ್‌ ಕುಮಾರ್‌ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ಜನಾರ್ದನ ಪ್ರತಾಪ ನಗರ,  ಲೋಕೇಶ್‌ ಜೋಡುಕಲ್ಲು, ರಘು ಕಾಳ್ಯಂಗಾಡು, ಅಂಗಾರ ಶ್ರೀಪಾದ, ವಿನೋದ್‌ ಕುಂಬಳೆ, ಸಂಕಪ್ಪ ಭಂಡಾರಿ, ರಾಧಾಕೃಷ್ಣ ರೈ ಮಡ್ವ, ಶೇಂತಾರು ನಾರಾಯಣ ಭಟ್‌, ಶಂನಾ ಕಿದೂರು, ರಾಮ ಮಾಸ್ತರ್‌, ಸರೋಜಾ ಆರ್‌. ಬಲ್ಲಾಳ್‌, ಪ್ರೇಮಲತಾ  ಎಸ್‌., ಪುಷ್ಪಾಲಕ್ಷ್ಮೀ, ಕೆ. ಜಯಲಕ್ಷ್ಮೀ  ಭಟ್‌,  ಪ್ರೇಮಾ  ಶೆಟ್ಟಿ, ಜಯಂತಿ ಶೆಟ್ಟಿ, ಆಶಾಲತಾ, ಸೇ°ಹಲತಾ, ರೇವತಿ ನಾಯಕ್‌, ಭವ್ಯಾ ಬಿ., ರಾಜೀವಿ, ತಾರಾ ವಿ. ಶೆಟ್ಟಿ, ಸಂದೀಪ್‌ ಗಟ್ಟಿ, ಸುಮಿತ್‌ರಾಜ್‌ ಪೆರ್ಲ, ಎಂ. ವಿಜಯಕುಮಾರ್‌ ರೈ, ನ್ಯಾಯವಾದಿ ನವೀನ್‌ರಾಜ್‌, ಹರೀಶ್‌ ಬೊಟ್ಟಾರಿ, ಎಂ. ಹರಿಶ್ಚಂದ್ರ, ಪದ್ಮನಾಭ ಕಡಪ್ಪುರ, ಬಾಬು ಕುಬಣೂರು, ಚಂದ್ರಹಾಸ ಸುವರ್ಣ, ಎ.ಕೆ. ಕಯ್ನಾರು, ದಿನೇಶ್‌ ಆರಿಕ್ಕಾಡಿ, ಧನರಾಜ್‌, ಹರೀಶ್‌, ಚಂದ್ರಕಾಂತ್‌ ಶೆಟ್ಟಿ, ಯಾದವ ಬಡಾಜೆ, ವಸಂತ ವರ್ಕಾಡಿ, ಸದಾಶಿವ ಯು., ಪ್ರಸಾದ್‌ ರೈ,   ವೇಣುಗೋಪಾಲ ಶೆಟ್ಟಿ, ಮೋಹನ  ಬಲ್ಲಾಳ್‌, ಎಸ್‌. ಸುಬ್ರಹ್ಮಣ್ಯ ಭಟ್‌, ಕಿಶೋರ್‌ ನಾಯಕ್‌, ಬಾಬು ಗಟ್ಟಿ, ಬಾಲಕೃಷ್ಣ ರೈ ಬಾನೋಟು, ಎಂ. ಶಂಕರ ಆಳ್ವ, ಕರುಣಾಕರ ಶೆಟ್ಟಿ ಕಳಾಯಿ, ಸುಧಾಕರ ಕಾಮತ್‌, ರ‌ಮೇಶ್‌ ಭಟ್‌, ಭರತ್‌ ರೈ ಪ್ರತಿಭಟನೆಯ ನೇತೃತ್ವ ವಹಿಸಿದರು.

ಪ್ರತಿಭಟನೆಗೆ ಮುನ್ನ ಬದಿಯಡ್ಕ ರಸ್ತೆಯ ಗೋಪಾಲಕೃಷ್ಣ ಸಭಾಭವನದ ಬಳಿಯಿಂದ ಮಹಿಳೆಯರ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಮೆರವಣಿಗೆ ಸರಕಾರದ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಆಗಮಿಸಿತು. ಪೊಲೀಸರು ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನಕಾರರನ್ನು ತಡೆದರು.

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.