ಭಾರತೀಯ ಸೈನಿಕರು ತಾಯಿಯಿದ್ದಂತೆ: ಸೆಹವಾಗ್
Team Udayavani, Jul 1, 2017, 3:45 AM IST
ಹೊಸದಿಲ್ಲಿ: ಒಂದೇ ತಿಂಗಳಲ್ಲಿ ಪಾಕಿಸ್ಥಾನ ಸೈನಿಕರು 23ನೇ ಬಾರಿ ಕದನ ವಿರಾಮ ಉಲ್ಲಂ ಸಿದ್ದು ದೊಡ್ಡ ಸುದ್ದಿಯಾಗಿತ್ತು. ಭಾರತೀಯ ಯೋಧರ ಕುರಿತು ಪದೇ ಪದೇ ಗೌರವದಿಂದ ಪ್ರತಿಕ್ರಿಯಿಸುವ ವೀರೇಂದ್ರ ಸೆಹವಾಗ್ ಈ ಬಗ್ಗೆಯೂ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಯೋಧರನ್ನು ತಾಯಿಗೆ ಹೋಲಿಸಿದ್ದಾರೆ.
“ನಮ್ಮ ಸೈನಿಕರು ತಾಯಿಯಿದ್ದಂತೆ, ನಿಸ್ವಾರ್ಥವಾಗಿ ಸೇವೆ ಮಾಡುತ್ತಾರೆ, ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ. ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸೈನ್ಯವನ್ನು ಗೌರವಿಸೋಣ. ಜೈ ಹಿಂದ್’ ಎಂದು ಸೆಹವಾಗ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ವೀರೂ, ಯೋಧರನ್ನು ಯಾವಾಗ, ಎಲ್ಲೇ ಕಂಡರೂ ಒಮ್ಮೆ ಸೆಲ್ಯೂಟ್ ಹೊಡೆಯಿರಿ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.