ಕಲಬುರಗಿಯಲ್ಲಿ ಜಿಎಸ್‌ಟಿ ಇನ್ನೂ ಪರಿಣಾಮವಿಲ್ಲ

Team Udayavani, Jul 5, 2017, 8:51 AM IST

GULB-5.jpg

ಕಲಬುರಗಿ: ಎಣ್ಣೆ ಉತ್ಪಾದನಾ ಕೃಷಿ ಉತ್ಪನ್ನಗಳಿಗೆ ಮಾತ್ರ ಜಿಎಸ್‌ಟಿ ಅನ್ವಯ ಆಗುವುದರಿಂದ ಸದ್ಯ ಇನ್ನೂ
ಮಾರುಕಟ್ಟೆಯಲ್ಲಿ ಎಣ್ಣೆ ಉತ್ಪನ್ನಗಳಾದ ಸೂರ್ಯಕಾಂತಿ, ಎಳ್ಳು ಮಾರುಕಟ್ಟೆಗೆ ಬಾರದಿರುವುದರಿಂದ ಎಪಿಎಂಸಿಯಲ್ಲಿ
ಯಾವುದೇ ಪರಿಣಾಮ ಈಗ ಕಂಡು ಬರುತ್ತಿಲ್ಲ. ಪ್ರಮುಖವಾಗಿ ಜಿಎಸ್‌ಟಿ ಸ್ವರೂಪ ಹಾಗೂ ಕಾರ್ಯರೂಪ ಕುರಿತಾಗಿ ಎಪಿಎಂಸಿಗೆ ಯಾವುದೇ ನಿಯಮಾವಳಿ ಬಂದಿಲ್ಲ. ಬರೀ ವಾಣಿಜ್ಯ ಜಂಟಿ ಆಯುಕ್ತರು ವ್ಯಾಪಾರಿಗಳನ್ನು ಕರೆಯಿಸಿ ಜಾಗೃತಿ ಮೂಡಿಸಿದ್ದಾರೆ. ಆದರೆ ವ್ಯಾಪಾರಿಗಳು ಇನ್ನೂ ಗೊಂದಲದಲ್ಲಿಯೇ ಇದ್ದಾರೆ.

ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೊಗರಿ. ತೊಗರಿ ಜಿಎಸ್‌ಟಿ ಅಡಿ ಇಲ್ಲ. ಆದರೆ ತೊಗರಿ ಬೇಳೆ ಪ್ಯಾಕಿಂಗ್‌ ಗೆ ಜಿಎಸ್‌ಟಿ ಅಳವಡಿಸಲಾಗಿದೆ. ಆದರೆ ಯಾವ ತರಹದ ಪ್ಯಾಕಿಂಗ್‌ ಎಂಬುದು ಸ್ಪಷ್ಟಪಡಿಸಿಲ್ಲ. ರೈತರು ಚೀಲದಲ್ಲಿಯೇ ತೊಗರಿ ತುಂಬಿಕೊಂಡು ಮಾರಾಟ ಹಾಗೂ ಸರಬರಾಜು ಮಾಡುತ್ತಾರೆ. ಇದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆಯೋ ಇಲ್ಲವೋ, ಒಂದೆರಡು ಕೆಜಿಯುಳ್ಳ ಪ್ಯಾಕೆಟ್‌ ಮಾಡಿ ಮಾರಾಟ ಮಾಡಲಾಗುತ್ತದೆಯೋ, ಅಂತಹ ಪ್ಯಾಕೆಟ್‌ಗಳ ಮೇಲೆ ಜಿಎಸ್‌ಟಿ ಅನ್ವಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟತೆಯಿಲ್ಲ ಎನ್ನುತ್ತಾರೆ ಇಲ್ಲಿನ ದ್ವಿದಳ ಧಾನ್ಯ ವ್ಯಾಪಾರಿಗಳು.

ಪ್ರಮುಖವಾಗಿ ಇಲ್ಲಿ ತೊಗರಿ ವಹಿವಾಟುವೇ ಮುಖ್ಯವಾಗಿದ್ದರಿಂದ ಪ್ರಸ್ತುತವಾಗಿ ತೊಗರಿ ಬೆಲೆ ಕುಸಿತವಾಗಿದ್ದರಿಂದ ಮಾರುಕಟ್ಟೆಯಲ್ಲಿ ತೊಗರಿ ಖರೀದಿ ಇಲ್ಲವೇ ಮಾರಾಟದ ವಹಿವಾಟೇ ಇಲ್ಲ. ಸಗಟು ಮಾರಾಟದಲ್ಲಿ ರೈತರ ಉತ್ಪನ್ನ ಮಾರಾಟಗಳ ಮೇಲೆ  ಒಂದುವರೆ ಪ್ರತಿಶತ ತೆರಿಗೆ ಇದೆ. ಆದರೆ ಈ ತೆರಿಗೆ ನೆರೆಯಆಂಧ್ರಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಇಲ್ಲ. ಅದೇ ರೀತಿ ರಾಜ್ಯದಲ್ಲೂ ತೆಗೆಯಬೇಕು. ಹೀಗಾದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ನೆಹರು ಗಂಜ್‌ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ. ಕೈಗಾರಿಕಾ ಉತ್ಪನ್ನಗಳ ಮೇಲೆ ಜಿಎಸ್‌ಟಿ ಅಳವಡಿಸಲಾಗಿದೆ. ಆದರೆ ಬಹುತೇಕ ಎಲ್ಲ ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ಹೇರಿಲ್ಲ. ಆದರೆ ಎಣ್ಣೆ ಉತ್ಪಾದನಾ ಕೃಷಿ ಉತ್ಪನ್ನಗಳಿಗೆ ಮಾತ್ರ ಜಿಎಸ್‌ಟಿ ಅನ್ವಯವಾಗಿಸಿರುವುದು ಸಮಂಜಸವಲ್ಲ. ಇದನ್ನು ತೆಗೆದು ಹಾಕಬೇಕು. ಇಲ್ಲದಿದ್ದಲ್ಲಿ ಕೃಷಿ ಕ್ಷೇತ್ರ ಹಾಗೂ ವ್ಯಾಪಾರ ವಹಿವಾಟು ಮೇಲೆ ಪರಿಣಾಮ ಬೀರುತ್ತದೆ ಎಂದು ವ್ಯಾಪಾರಿ ಸದಾಶಿವ ಬಿರಾದಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುತ್ತೋಲೆ ಬಂದಿಲ
ಎಪಿಎಂಸಿ ಜಿಎಸ್‌ಟಿ ಅಳವಡಿಕೆ ಕುರಿತಾಗಿ ಯಾವುದೇ ಸುತ್ತೋಲೆ ಬಂದಿಲ್ಲ. ಆದರೆ ಎಪಿಎಂಸಿಗೆ ವಹಿವಾಟು ಸಂಬಂಧಪಟ್ಟಂತೆ ಜಿಎಸ್‌ಟಿ ಕಾರ್ಯಸ್ವರೂಪ ಕುರಿತಾಗಿ ಸುತ್ತೋಲೆ ಕಳುಹಿಸುವಂತೆ ಎಪಿಎಂಸಿ ಮೇಲಧಿಕಾರಿಗಳಿಗೆ
ಹಾಗೂ ವಾಣಿಜ್ಯ ಜಂಟಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ಟಿ.ಸಿ.ಗಿರೀಶ, ಕಾರ್ಯದರ್ಶಿಗಳು, ಎಪಿಎಂಸಿ, ಕಲಬುರಗಿ

ಹಣಮಂತರಾವ್‌ ಭೈರಾಮಡಗಿ

ಟಾಪ್ ನ್ಯೂಸ್

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.