ಬ್ರಝಿಲ್ ತಾರೆ ರೊನಾಲ್ಡಿನೊ ಶುಕ್ರವಾರ ಮುಂಬಯಿಗೆ
Team Udayavani, Jul 13, 2017, 3:50 AM IST
ಹೊಸದಿಲ್ಲಿ: ಬ್ರಝಿಲ್ನ ಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಶುಕ್ರವಾರ ಮುಂಬಯಿಗೆ ಆಗಮಿಸಲಿದ್ದಾರೆ. ಪ್ರೀಮಿಯರ್ ಫುಟ್ಸಾಲ್ ಜತೆ ತನ್ನ ಭವಿಷ್ಯದ ಬಗ್ಗೆ ಅವರು ಪ್ರಕಟನೆ ನೀಡಲಿದ್ದಾರೆ. ವಿಶ್ವಕಪ್ ವಿಜೇತ ಬ್ರಝಿಲ್ ತಂಡದ ಸದಸ್ಯರಾಗಿದ್ದ ರೊನಾಲ್ಡಿನೊ ಬಾಲನ್ ಡಿ’ಆರ್ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಕಳೆದ ವರ್ಷ ಕೇವಲ ಎರಡು ಪಂದ್ಯ ಆಡಿದ ಬಳಿಕ ರೊನಾಲ್ಡಿನೊ ಅವರು ಪ್ರೀಮಿಯರ್ ಪುಟ್ಸಾಲ್ ತಂಡವನ್ನು ತ್ಯಜಿಸಬೇಕಾಯಿತು. ಬ್ರಝಿಲ್ನ ರಿಯೋ ಡಿ ಜನೈರೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಗೇಮ್ಸ್ಗೆ ರಾಯಭಾರಿಯ ಕರ್ತವ್ಯ ನಿಭಾಯಿಸಲು ಅವರು ತವರಿಗೆ ಮರಳಿದ್ದರು. ಗೋವಾ ಫ್ರಾಂಚೈಸಿ ಪರ ಆಡಿದ್ದ ರೊನಾಲ್ಡಿನೊ ಐದು ಗೋಲು ಹೊಡೆದಿದ್ದರು.