ಬಳ್ಳಾರಿ ನಂಟು ಬಿಡದ ಬಾಹ್ಯಾಕಾಶ ವಿಜ್ಞಾನಿ 

Team Udayavani, Jul 25, 2017, 6:30 AM IST

UR-RAO-BELLARy.jpg

ಬಳ್ಳಾರಿ: ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಜ್ಞಾನಿ ಯು.ಆರ್‌.ರಾವ್‌ ಅವರು ಪ್ರೌಢ
ಹಾಗೂ ಇಂಟರ್‌ ಮೀಡಿಯಟ್‌ ಶಿಕ್ಷಣ ಪಡೆದಿದ್ದು ಬಳ್ಳಾರಿಯಲ್ಲಿ. ವಿದ್ಯಾರ್ಥಿಯಾಗಿದ್ದಾಗ ರಾವ್‌ ಅವರು ಇಲ್ಲಿನ ಶ್ರೀನಿವಾಸ ಆಚಾರ್‌ ಅವರ ಮನೆಯಲ್ಲಿ ಇದ್ದರು.

60-70ರ ದಶಕದಲ್ಲಿ ಬಹು ದೊಡ್ಡ ಹೆಸರು ಗಳಿಸಿದ್ದ ನಗರದ ಮೀನಾಕ್ಷಿ ಭವನದ ಮಾಲೀಕರಾಗಿದ್ದ ಮೀನಾಕ್ಷಿ ಸೀನಪ್ಪನವರು (ಶ್ರೀನಿವಾಸ ಆಚಾರ್‌ ) ಪ್ರೊ| ಯು.ಆರ್‌.ರಾವ್‌ ಅವರಿಗೆ ಬಳ್ಳಾರಿಯಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದರು. ರಾವ್‌ ಅವರಿಂದ ಹಣ ಪಡೆಯದೇ 2 ವರ್ಷಗಳ ಕಾಲ ಊಟ- ತಿಂಡಿ ವ್ಯವಸ್ಥೆ ಕಲ್ಪಿಸಿದ್ದರು.

ಯು.ಆರ್‌.ರಾವ್‌ ಅವರ ತಂದೆ ಲಕ್ಷ್ಮಣ ಆಚಾರ್‌ ಪ್ರಸಿದಟಛಿ ಸಿಹಿ ತಿನಿಸಿನ ತಯಾರಕರಾಗಿದ್ದರು. ಈ ಸಂದರ್ಭ ರಾವ್‌ 1940ರ ದಶಕದಲ್ಲಿ ನಗರದ ವಾಡ್ಲಾì ಹೈಸ್ಕೂಲಿನಲ್ಲಿ ಎರಡು ವರ್ಷ ಅಭ್ಯಾಸ ಮಾಡಿದ್ದರು. ಕೆಲ ಕಾಲದ ನಂತರ ಬಳ್ಳಾರಿಗೆ ಮರಳಿದ್ದ ಪ್ರೊ| ರಾವ್‌ 1947ರಲ್ಲಿ ನಗರದ ವೀರಶೈವ ಕಾಲೇಜಿನಲ್ಲಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಹಾಗೂ ಗಣಿತ ಶಾಸ್ತ್ರಗಳಿದ್ದ ವಿಜ್ಞಾನ ಇಂಟರ್‌ ಮೀಡಿಯೇಟ್‌ ಓದಿದ್ದರು.

ಬಳ್ಳಾರಿಯಲ್ಲಿದ್ದ ಸಂದರ್ಭ ನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಹಿಂದಿನ ಬೀದಿಯಲ್ಲಿ ವಾಸಿಸುತ್ತಿದ್ದರು. ಆಗ ಅವರು ಮೀನಾಕ್ಷಿ ಸೀನಪ್ಪನವರ ಮನೆಗೆ ಹೋಗಿ ಬರುತ್ತಿದ್ದರು. ಅವರ ಮಕ್ಕಳೊಡನೆ ಬೆರೆಯುತ್ತಿದ್ದರು. ಮುಂದೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮಾಡಿ ವಿಶ್ವ ಪ್ರಸಿದಟಛಿರಾಗಿದ್ದರೂ ಬಾಲ್ಯದಲ್ಲಿ ಆಶ್ರಯ ನೀಡಿದ್ದ ಬಳ್ಳಾರಿಯನ್ನು ಎಂದಿಗೂ ಮರೆತಿರಲಿಲ್ಲ.

ಬಳ್ಳಾರಿಯ ಬಗೆಗೆ ಸಾಕಷ್ಟು ಅಭಿಮಾನ, ಪ್ರೀತಿ ಇರಿಸಿಕೊಂಡಿದ್ದರು. ಬಾಹ್ಯಾಕಾಶ ವಿಜ್ಞಾನಿಯಾಗಿ ಮಹತ್ವದ ಸಂಶೋಧನೆಗಳ ಆನಂತರ ಬಳ್ಳಾರಿಗೆ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರೊ| ರಾವ್‌, ತಮ್ಮ ಭಾಷಣಗಳಲ್ಲಿ ಬಳ್ಳಾರಿಯಲ್ಲಿ ಕಳೆದ ದಿನಗಳನ್ನು, ಮೀನಾಕ್ಷಿ ಸೀನಪ್ಪನವರ ಮನೆಯ ಆತಿಥ್ಯವನ್ನು, ಅವರ ಎರಡನೇ ಪುತ್ರ ಹಾಗೂ ಸ್ನೇಹಿತರಾಗಿದ್ದ ವಕೀಲ ಕೆ.ಸೀತಾರಾಮ್‌ ಅವರೊಂದಿಗಿನ ಗೆಳೆತನವನ್ನು ಪ್ರಸ್ತಾಪಿಸುತ್ತಿದ್ದರು. ಸೀನಪ್ಪನವರ ಹಿರಿಯ ಪುತ್ರ ಪ್ರಸ್ತುತ ಬೆಂಗಳೂರಿನಲ್ಲಿರುವ ಕೆ.ಕೃಷ್ಣಮೂರ್ತಿ, “ಯು.ಆರ್‌. ರಾವ್‌ ನನ್ನ ಆಪ್ತ ಮಿತ್ರರಾಗಿದ್ದರು. ಇತ್ತೀಚಿನವರೆಗೂ ನಾವಿಬ್ಬರೂ ಭೇಟಿಯಾಗುತ್ತಿದ್ದ ಸಂದರ್ಭಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದೆವು. ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಬ್ಬರೂ ವಾಡ್ಲಾì ಹೈಸ್ಕೂಲಿನ ಮೈದಾನದಲ್ಲಿ ಫುಟ್‌ಬಾಲ್‌, ಕಬಡ್ಡಿ ಆಡುತ್ತಿದ್ದೆವು. ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ’ ಎಂದು ಸಂತಾಪ ಸೂಚಿಸಿದ್ದಾರೆ.

ರಾವ್‌ ಅವರೊಂದಿಗಿನ ಗೆಳೆತನದ ಕುರಿತು ಮಾತನಾಡಿರುವ ಸೀನಪ್ಪನವರ ಎರಡನೇ ಪುತ್ರ, ಬಳ್ಳಾರಿಯಲ್ಲಿರುವ ವಕೀಲ ಸೀತಾರಾಮ್‌, ಪ್ರೊ|ರಾವ್‌ ಅಷ್ಟು ದೊಡ್ಡ ವ್ಯಕ್ತಿಯಾಗಿದ್ದರೂ ಬಳ್ಳಾರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಬಾಲ್ಯದಲ್ಲಿ ಹೇಗಿದ್ದರೋ ಅವರು ದೊಡ್ಡವರಾಗಿ ಬೆಳೆದಾಗಲೂ ಅದು ಮಾಸಿರಲಿಲ್ಲ. ಊಟ ಮಾಡುತ್ತಾ ಹಳೆಯ ದಿನಗಳ ನೆನಪನ್ನು ನೆನೆಯುತ್ತಾ ಅವರು ನಮ್ಮೊಂದಿಗೆ ಹರಟುತ್ತಿದ್ದರು ಎಂದು ಸ್ಮರಿಸಿದ್ದಾರೆ.

– ಎಂ.ಮುರಳಿಕೃಷ್ಣ

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.