ಮಂಜನಾಡಿ ಗ್ರಾ.ಪಂ.: “ಕೃಷಿಕರಿಗೆ  ಇಲಾಖೆ ಮಾಹಿತಿ ಕಾರ್ಯಾಗಾರ’

Team Udayavani, Jul 27, 2017, 7:55 AM IST

manjanadi.jpg

ಮಂಜನಾಡಿ: ಮಂಜನಾಡಿ ಗ್ರಾ.ಪಂ.,ತೋಟಗಾರಿಕೆ ಇಲಾಖೆ ಜಂಟಿ ಯಾಗಿ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್‌ ಕೃಷಿಮೇಳವನ್ನು ಆಯೋ ಜಿಸುವ ಅನಿವಾರ್ಯತೆಯಿದೆ ಎಂದು ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಎನ್‌.ಎಸ್‌. ಕರೀಂ ಅಭಿಪ್ರಾಯಪಟ್ಟರು.

ಅವರು ಮಂಜನಾಡಿ ಗ್ರಾ.ಪಂ., ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹಾಗೂ ಪಶುಸಂಗೋಪನ ಇಲಾಖೆ ಮಂಗಳೂರು ಇವುಗಳ ಸಹಯೋಗದೊಂದಿಗೆ, ಮಂಜನಾಡಿ ಗ್ರಾ.ಪಂ. ಸಭಾಂಗಣದಲ್ಲಿ  ಮಂಗಳವಾರ ಆಯೋಜಿಸಿದ್ದ “ಕೃಷಿಕರಿಗೆ  ಇಲಾಖೆ ಮಾಹಿತಿ ಕಾರ್ಯಾಗಾರ’ದಲ್ಲಿ ಮಾತನಾಡಿದರು.

ಕೃಷಿ ಮೇಳದಲ್ಲಿ ತೆಂಗಿನ ಗಿಡ, ಅಡಿಕೆ ಗಿಡ, ಕಾಳು ಮೆಣಸಿನ ಗಿಡ ಹೀಗೆ ಹಲವಾರು ಬಗೆಯ ಗಿಡಗಳನ್ನು ವಿತರಿಸಬೇಕಿದೆ. ಕೃಷಿಕರು ಮೇಳದಲ್ಲಿ ತಮ್ಮ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಂದು ಯೋಜನೆಯಡಿ ಸಿಗುವ ಸವಲತ್ತುಗಳನ್ನು ಪಡೆಯಬಹುದಾಗಿದೆ ಎಂದರು. 

ಇದರಿಂದ ಕೃಷಿಕರು ಸವಲತ್ತುಗಳಿಗೆ ಅಲೆದಾಡುವುದು ತಪ್ಪಿದಂತಾಗುವುದು. ಅಲ್ಲದೆ, ಪ್ರತಿ ಸವಲತ್ತುಗಳ  ಪ್ರಯೋಜನ ವನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಹಿರಿಯ ಅಧಿಕಾರಿಗಳ ಜತೆಗೆ ಸಮಾಲೋ ಚನೆ ನಡೆಸಿ ಶೀಘ್ರವೇ ಕೃಷಿ ಮೇಳವನ್ನು ಆಯೋಜಿಸಬೇಕಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ನೇತ್ರಾವತಿ ಅವರು ಕೃಷಿಕರಿಗೆ ಮಾಹಿತಿ ನೀಡಿ, ಎರಡು ಎಕರೆ  ಜಾಗವಿರುವ ಕೃಷಿಕರಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಯಡಿ  ಶೇ.90ರಷ್ಟು ಸಹಾಯಧನ ಹಾಗೂ  2 ರಿಂದ  5 ಎಕರೆ ಜಾಗವಿರುವ  ಕೃಷಿಕರಿಗೆ ಶೇ. 50  ಸಹಾಯ ಧನವನ್ನು  ಕೃಷಿ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವುದು ಎಂದರು. 

ಅಡಿಕೆ ತೋಟ ಪುನಶ್ಚೇತನಕ್ಕೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಯಡಿ ಮಾತ್ರ ಅವಕಾಶವಿದ್ದು, ಪಂಚಾ ಯತ್‌ನಲ್ಲಿ ಉದ್ಯೋಗ ಚೀಟಿಯನ್ನು ನೋಂದಾಯಿಸಿ ಯೋಜನೆಯಲ್ಲಿ ತೊಡ ಗಿಸಿಕೊಳ್ಳಬಹುದಾಗಿದೆ. ಯೋಜನೆಯಡಿ 200 ಗಿಡಗಳಿಗೆ 24,000 ರೂ. ಸಹಾಯ ಧನ ಹಾಗೂ ಗೊಬ್ಬರ,  ಗಿಡ ಖರೀದಿ ರಶೀದಿ ಗಳಿದ್ದಲ್ಲಿ ಅದನ್ನು ಇಲಾಖೆಯಿಂದ ಪಡೆದು ಕೊಳ್ಳಬಹುದು ಎಂದು ತಿಳಿಸಿದರು. 

ಗೇರು, ಬಾಳೆ, ಕೋಕೊ, ತೆಂಗು ಗಿಡ ಗಳನ್ನು ಇಲಾಖೆಯಿಂದ  ವಿತರಿಸಲಾ ಗುವುದು.  ಕಾಳು ಮೆಣಸು ಪುನಶ್ಚೇತನದಡಿ ಇಲಾಖೆ ವತಿಯಿಂದ 1 ಎಕರೆಗೆ  200 ಗಿಡಗಳನ್ನು ನೀಡಲಾಗುವುದು ಎಂದರು. 
ಫಲಾನುಭವಿಗಳಿಗೆ ಸಹಾಯಧನ ಚೆಕ್‌ಗಳನ್ನು ವಿತರಿಸಲಾಯಿತು.

ಪಶು ಸಂಗೋಪನ ಇಲಾಖೆಯ ಹಿರಿಯ ಪಶುವೈದ್ಯಕೀಯ ಪರೀಕ್ಷಕ ದೇವಾನಂದ ಎಸ್‌. ಸಹಾಯಕ ಕೃಷಿ ಅಧಿಕಾರಿ ಬಾಲಕೃಷ್ಣ, ನಿವೃತ್ತ ತೋಟಗಾರಿಕೆ ಅಧಿಕಾರಿ ಕೇಶವ ಶೆಟ್ಟಿ, ಪಿಡಿಒ ಪರಮೇಶ್ವರ ಭಂಡಾರಿ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್‌, ಉಪಾಧ್ಯಕ್ಷೆ ಮರಿಯಮ್ಮ, ಮಾಜಿ ಅಧ್ಯಕ್ಷ ಮೊದಿನ್‌ ಕುಂಞ ಮರಾಟಿಮೂಲೆ, ಸದಸ್ಯರಾದ ಎ.ಎಂ. ಇಸ್ಮಾಯಿಲ್‌, ಎಂ. ಇಲಿಯಾಸ್‌,  ಕುಂಞಿ ಬಾವಾ, ಎಂ. ಅಬ್ಟಾಸ್‌, ನಿವೃತ್ತ ಪಿಡಿಒ ರಮಾನಾಥ ಪೂಂಜ ಉಪಸ್ಥಿತರಿದ್ದರು.

ಮೌಲಾನ ಆಜಾದ್‌ ಆಂಗ್ಲ ಮಾಧ್ಯಮ ಶಾಲೆ
ರಾಜ್ಯದಲ್ಲಿ 100 ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಗೆ ರಾಜ್ಯ ಸರಕಾರ ಈ ವರ್ಷದ ಬಜೆಟಿನಲ್ಲಿ ಶಿಫಾರಸ್ಸು ಮಾಡಿದ್ದು ಜಿಲ್ಲೆ ಯಲ್ಲಿ ಪ್ರಾರಂಭಗೊಳ್ಳಲಿರುವ ನಾಲ್ಕು ಶಾಲೆಗಳಲ್ಲಿ ಒಂದು ಮಂಜನಾಡಿಯಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಜಿ.ಪಂ. ಮಾಜಿ ಸದಸ್ಯ ಎಂ.ಎಸ್‌. ಕರೀಂ ತಿಳಿಸಿದರು. ಮಾಹಿತಿ ಕಾರ್ಯಾಗಾರದಲ್ಲಿ  ಮಾತನಾಡಿದ ಅವರು, ಪಂಚಾಯತ್‌ ಸದಸ್ಯರ ಶ್ರಮ ಹಾಗೂ ಈ ಭಾಗದ ಶಾಸಕ ಯು.ಟಿ. ಖಾದರ್‌ ಅವರ ಮುತುವರ್ಜಿಯಿಂದ ಅಲ್ಪಸಂಖ್ಯಾಕರೇ ಹೆಚ್ಚಿರುವ ಮಂಜನಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೌಲಾನ ಆಜಾದ್‌ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಲಿದ್ದು, ಇಲ್ಲಿ 6ರಿಂದ 10ನೇ ತರಗತಿಯವರೆಗೆ 75 ಶೇ.ದಷ್ಟು ಅಲ್ಪಸಂಖ್ಯಾಕರಿಗೆ ಹಾಗೂ ಶೇಕಡಾ 25 ರಷ್ಟು ಇತರ ಸಮುದಾಯದ ವಿದ್ಯಾರ್ಥಿ ಗಳಿಗೆ ಉಚಿತ ಶಿಕ್ಷಣ, ವಸತಿ, ಪುಸ್ತಕ, ಬ್ಯಾಗ್‌ ನೀಡಲಾಗುತ್ತದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ತಿಳಿಸಿದರು. “ಮಂಜನಾಡಿ ಆಸುಪಾಸಿನಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿದ್ದು, ಬಡವರ್ಗದ ಜನರಿಗೆ ಅಧಿಕ ಶುಲ್ಕವನ್ನು ಕಟ್ಟಿ ಕಲಿಸಲು ಅಲ್ಲಿ ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ರಾಜ್ಯ ಸರಕಾರ ಬಡ ವರ್ಗದ ಜನರಿಗೆ ಅನೂಕೂಲವಾಗುವಂತೆ ಉಚಿತ ಆಂಗ್ಲ ಶಿಕ್ಷಣವನ್ನು ನೀಡುವ ನಿಟ್ಟಿ ನಲ್ಲಿ ಶಾಲೆಗಳನ್ನು  ಸ್ಥಾಪಿಸಿದೆ. ಈಗ 6ರಿಂದ 10ನೇ ತರಗತಿಯವರೆಗೆ ಆರಂಭವಾಗುವ ಈ ಶಾಲೆ ಭವಿಷ್ಯದಲ್ಲಿ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿವರೆಗೂ ಆರಂಭವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.