ದೇಶ ರಕ್ಷಣೆಗಾಗಿ ಚೀನಾ ವಸ್ತು ಬಹಿಷ್ಕರಿಸಲು ಜಾಗೃತಿ

Team Udayavani, Aug 3, 2017, 1:15 PM IST

03-RAI-1.jpg

ರಾಯಚೂರು: ಭಾರತದಲ್ಲಿ ವಹಿವಾಟು ನಡೆಸುವ ಮೂಲಕ ಲಕ್ಷಾಂತರ ಕೋಟಿ ರೂ. ಲಾಭ ಮಾಡಿಕೊಳ್ಳುವುದರ ಜತೆಗೆ ಪಾಕಿಸ್ತಾನವನ್ನು ನಮ್ಮ ದೇಶದ ವಿರುದ್ಧ ಎತ್ತಿ ಕಟ್ಟುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿದೆ. ಹೀಗಾಗಿ ಚೀನಾದಿಂದ ಬರುವ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸ್ವದೇಶಿ ಜಾಗರಣ ಮಂಚ್‌ -ಕರ್ನಾಟಕ ಮತ್ತು ತೆಲಂಗಾಣದ ಸಂಘಟನಾ ಸಂಚಾಲಕ ಜಗದೀಶ ಜೀ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಬಹುರಾಷ್ಟ್ರೀಯ ಒಪ್ಪಂದದನ್ವಯ ಚೀನಾದಿಂದ ಭಾರತಕ್ಕೆ ಆಮದಾಗುವ ಯಾವುದೇ ಉತ್ಪನ್ನಗಳನ್ನು ತಡೆಯಲು ಆಗುವುದಿಲ್ಲ. ಆದರೆ, ದೇಶದ ಪ್ರಜೆಗಳು ಆ ವಸ್ತುಗಳನ್ನು ಬಹಿಷ್ಕರಿಸಿದಲ್ಲಿ ಚೀನಾಕ್ಕೆ ದೊಡ್ಡ ಮಟ್ಟದ ಆರ್ಥಿಕ ಪೆಟ್ಟು 
ಕೊಟ್ಟಂತಾಗುತ್ತದೆ. ಈ ಕಾರಣಕ್ಕೆ ದೇಶದ ನಾಗರಿಕರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಲವು ಹಂತದ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. 

ದೇಶದ ಮನೆ ಮನೆಗೆ ತೆರಳಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜಾಗೃತಿ ಮೂಡಿಸುವ ಉದ್ದೇಶವಿದೆ. 2001-02ರಲ್ಲಿ ಕೇವಲ 6500 ಕೋಟಿ ವ್ಯವಹಾರ ನಡೆಸುತ್ತಿದ್ದ ಚೀನಾ, ಈಗ ಮೂರರಿಂದ ನಾಲ್ಕು ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ನಮ್ಮ ದೇಶದಿಂದ ಲಾಭ ಪಡೆಯುತ್ತಿದ್ದರೂ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದರ ಜತೆಗೆ ದೇಶದ ಮೇಲೆ ಆಕ್ರಮಣಾಕಾರಿ ಧೋರಣೆ ತಾಳುತ್ತಿದೆ. ಇದನ್ನು ಕಂಡು ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಅದರ ಆರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಬೀಳಬೇಕಿದೆ ಎಂದರು.

ದೇಶದ ಗಡಿಯಲ್ಲಿ ಪದೇಪದೆ ಸೀಮೋಲ್ಲಂಘನೆ  ಮಾಡುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಅವರು ತಯಾರಿಸಿದ ವಸ್ತುಗಳನ್ನು ಬಹಿಷ್ಕರಿಸುವುದೊಂದೇ ಇದಕ್ಕೆ ದಾರಿ. ಈ ಕಾರಣಕ್ಕೆ ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನವನ್ನು ಆಯೋಜಿಸಲಾಗಿದೆ. ಕಳೆದ ಹತ್ತು
ವರ್ಷಗಳ ಅವ ಧಿಯಲ್ಲಿ ಅಗ್ಗದ ವಸ್ತುಗಳು ಹರಿದು ಬರುತ್ತಿವೆ. ಇದರಿಂದ ದೇಶದ ಉತ್ಪನ್ನಗಳ ಮೇಲೆ ದುಷ್ಪರಿಣಾಮವಾಗುತ್ತಿದೆ. ನಿರುದ್ಯೋಗ ಸಮಸ್ಯೆ ಜತೆಗೆ ಪರಾವಲಂಬನೆ ಹೆಚ್ಚಾಗುತ್ತಿದೆ ಎಂದರು.

ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ನಿನಾದದೊಂದಿಗೆ ಎಲ್ಲ ಶಾಲಾ-ಕಾಲೇಜು, ಊರುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಆ.29ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ರ್ಯಾಲಿ ಏರ್ಪಡಿಸಲಾಗಿದೆ. ದೇಶದ ಪ್ರತಿ ನಾಗರಿಕರು ಕೂಡ ಈ ಅಭಿಯಾನಕ್ಕೆ ಜತೆಗೂಡಬೇಕು ಎಂದು ವಿನಂತಿಸಿದರು. ಚೀನಾ ಹಾಗೂ ಪಾಕಿಸ್ತಾನ ಎರಡೂ ಕುತಂತ್ರದಿಂದ ದೇಶದೊಳಕ್ಕೆ ನುಗ್ಗುತ್ತಿವೆ. ಇವುಗಳಿಗೆ ಪರೋಕ್ಷವಾಗಿ ನಾವೇ ಹಣಕಾಸಿನ ನೆರವು ನೀಡಿದಂತಾಗುತ್ತಿದೆ. ಅಲ್ಲದೇ, ಚೀನಾಕ್ಕೆ ಹೆಚ್ಚು ಮಿತ್ರ ರಾಷ್ಟ್ರಗಳಿಲ್ಲ. ಯುದ್ಧಕ್ಕೆ ಬಂದಲ್ಲಿ ಅದು ಪಾಕಿಸ್ತಾನದೊಟ್ಟಿಗೆ ಬರಬೇಕು. ಆದರೆ, ಭಾರತಕ್ಕೆ ಸಾಕಷ್ಟು ರಾಷ್ಟ್ರಗಳು ನೆರವು ನೀಡಲು ಸಿದ್ಧವಿದ್ದು, ಚೀನಾವನ್ನು ಸದೆ ಬಡೆಯಲು ಎಲ್ಲರೂ
ಕೈಜೋಡಿಸಬೇಕು ಎಂದರು. ಮಂಚ್‌ನ ಸದಸ್ಯರಾದ ರಾಜೇಂದ್ರ ಶಿವಳ್ಳಿ, ರಾಜೇಂದ್ರ ಕುಮಾರ, ಶರಣಪ್ಪ ಇತರರಿದ್ದರು. 

ಟಾಪ್ ನ್ಯೂಸ್

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

ಯುವತಿಯ ಅಪಹರಣ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Shimoga; ಕಾಡಾನೆ ದಾಳಿಗೆ ವ್ಯಕ್ತಿ ಬಲಿ

6-

Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ

ಯುವತಿಯ ಅಪಹರಣ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

5-fir

Bengaluru: ಠಾಣೆಯಲ್ಲೇ ಮಹಿಳಾ ಪಿಎಸ್‌ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.