ವಿಮಾನ ಪ್ರಯಾಣಿಕರನ್ನು ಅವಮಾನಿಸಿದ ಚೀನ 


Team Udayavani, Aug 14, 2017, 6:50 AM IST

China-air.jpg

ಬೀಜಿಂಗ್‌: ಭಾರತ-ಚೀನ ಗಡಿಯಲ್ಲಿನ ಪ್ರಕ್ಷುಬ್ಧ ವಾತಾವರಣದ ಅಡ್ಡ ಪರಿಣಾಮ ಈಗ ಅನಿವಾಸಿ ಭಾರತೀಯರು ಹಾಗೂ ಭಾಷಿಕರ ಮೇಲೆ ಆಗುತ್ತಿದ್ದು, ಆತಂಕ ಸೃಷ್ಟಿಯಾಗಿದೆ.

ಹೌದು, ಇದೀಗ ಮತ್ತೂಂದು ಘಟನೆ ಶಾಂಘೈನಿಂದ ವರದಿಯಾಗಿದೆ. ಚೀನ ವಿಮಾನಯಾನ ಸಂಸ್ಥೆ ಭಾರತೀಯ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ನಿಂದಿಸಿ ಅವಮಾನಗೊಳಿಸಿದ ಘಟನೆ ರವಿವಾರ ಇಲ್ಲಿನ ಪುಡಾಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇದೀಗ, ಈ ಸಂಬಂಧ ಭಾರತ ದೂರು ಸಲ್ಲಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಘಟನೆ ಕುರಿತು ಶಾಂಘೈ ವಿದೇಶಾಂಗ ವ್ಯವಹಾರಗಳ ಕಚೇರಿ ಹಾಗೂ ಚೀನ ವಿದೇಶಾಂಗ ಇಲಾಖೆಗೂ ಗೊತ್ತಾಗಿದೆ. ಅಲ್ಲದೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ದೂರು ನೀಡಲಾಗಿದ್ದು, ಅವರು ಈಗಾಗಲೇ ವಿಮಾನ ನಿಲ್ದಾಣ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಚೀನ ಈಸ್ಟರ್ನ್ ಏರ್‌ಲೈನ್ಸ್‌ ಈ ಆರೋಪವನ್ನು ತಳ್ಳಿಹಾಕಿದೆ. ಸಿಸಿಟಿವಿ ಫ‌ೂಟೇಜ್‌ ಪರೀಕ್ಷಿಸಿ ಪ್ರಾಥಮಿಕ ತನಿಖೆ ನಡೆಸಿದ ಬಳಿಕವೂ ಇದಕ್ಕೆ ಕಾರಣ ಏನೆನ್ನುವುದನ್ನು ಖಚಿತ ಪಡಿಸಿಲ್ಲ. ಪ್ರಯಾಣಿಕರೊಂದಿಗೆ ಸಿಬಂದಿ ಅಹಿತಕರವಾಗಿ ವರ್ತಿಸಿರುವ ಘಟನೆ ನಡೆದಿಲ್ಲ ಎಂದು ವೈಮಾನಿಕ ಸಂಸ್ಥೆ ಹೇಳಿಕೊಂಡಿದೆ. ಚೀನ ವಿದೇಶಾಂಗ ಇಲಾಖೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಡೋಕ್ಲಾಂನಿಂದ ಕಾಲ್ಕಿàಳಲು ಚೀನ ತಯಾರಿ?: ಉತ್ತರ ಕೊರಿಯಾಕ್ಕೆ ಅದರದೇ ಧಾಟಿಯಲ್ಲಿ ನೇರವಾಗಿ ಅಮೆರಿಕ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಇತ್ತ ಚೀನ ಕೂಡ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಭಾರತದ ಗಡಿಯಲ್ಲಿ ತಾನು ನಿಯೋಜಿಸಿ ರುವ ಸೇನಾಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಸೇನಾ ಬಲದಲ್ಲಿ ವಿಶ್ವದ ಯಾವುದೇ ದೇಶವನ್ನು ಎದುರಿಸುವ ಶಕ್ತಿ ಹೊಂದಿರುವ ಅಮೆರಿಕ ಶನಿವಾರವಷ್ಟೇ ಸಿಕ್ಕಿಂ ಗಡಿ ವಿಚಾರದಲ್ಲಿ ಭಾರತ ಪ್ರೌಢಿಮೆ ಮೆರೆದಿದೆ ಎಂದು ಬೆಂಬಲಿಸಿ ಮಾತನಾಡಿತ್ತು. ಅದೇ ಸಂದರ್ಭದಲ್ಲಿ ಯುದೊœàನ್ಮಾದದಲ್ಲಿ ಇರುವ ಉತ್ತರ ಕೊರಿಯಾಕ್ಕೂ ಎಚ್ಚರಿಕೆ ರವಾನಿಸಿತ್ತು. ಇದರ ಸೂಕ್ಷ್ಮ ಅರಿತ ಚೀನ ಈಗ ಡೋಕ್ಲಾಂ ಗಡಿ ವಿವಾದಕ್ಕೆ ಸಂಬಂಧಿಸಿ ಮೃದು ಧೋರಣೆ ತಾಳಿದೆ ಎಂದು ವರದಿಯಾಗಿದೆ.

ಚೀನಕ್ಕೆ ಯುದ್ಧವಷ್ಟೇ ಗೊತ್ತು
“ಚೀನಕ್ಕೆ ಯುದ್ಧದ ಪರಿಭಾಷೆ ಮಾತ್ರ ಗೊತ್ತಿರುವುದು. ಶಾಂತಿಯ ಬಗ್ಗೆ ತಿಳಿದೇ ಇಲ್ಲ. ಅವರು ದಲೈ ಲಾಮಾ ಇಲ್ಲಿ ಇಲ್ಲ ಎಂದು ಭಾವಿಸಿರಬಹುದು’ ಎಂದು ಯೋಗ ಗುರು ಬಾಬಾ ರಾಮದೇವ್‌ ಹೇಳಿದ್ದಾರೆ. ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾವು ಯೋಗದ ಭಾಷೆಯಲ್ಲಿ ಮಾತನಾಡು ತ್ತೇವೆ. ಆದರೆ ಇದು ಅರ್ಥವಾಗದೇ ಇರುವವರಿಗೆ ಯುದ್ಧದ ಭಾಷೆಯಲ್ಲೇ ಗೊತ್ತು ಮಾಡಬೇಕಾಗುತ್ತದೆ’ ಎಂದಿದ್ದಾರೆ. ಇದೇ ವೇಳೆ ಚೀನದೊಂದಿಗೆ ಯಾವುದೇ ಕ್ಷಣದಲ್ಲಿ ಯುದ್ಧ ನಡೆಯಬಹುದಾದ ಸಾಧ್ಯತೆ ಇರುವ ಕಾರಣ ಭಾರತ ಸಿದ್ಧವಿರಬೇಕು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಲೈಲಾಮಾ ಮಾತನಾಡಿ, “ಭಯ ಕೆರಳಿಸುವಂತೆ ಮಾಡುತ್ತದೆ. ಕೆರಳುವುದು ಸಿಟ್ಟಿನ ಹುಟ್ಟಿಗೆ ಮೂಲವಾಗುತ್ತದೆ. ಸಿಟ್ಟು ಗಲಭೆಗೆ ಕಾರಣವಾಗುತ್ತದೆ’ ಎಂದು ಚೀನಕ್ಕೆ ಟಾಂಗ್‌ ನೀಡಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.