ವಿಶೇಷ ಗೆಲುವು: ಕೋಚ್ ಮನ್ಪ್ರೀತ್
Team Udayavani, Aug 17, 2017, 9:10 AM IST
ಅಹ್ಮದಾಬಾದ್: ಪ್ರೊ ಕಬಡ್ಡಿ ಲೀಗ್ನ ಚೊಚ್ಚಲ ಪ್ರವೇಶದಲ್ಲಿಯೇ ಕನ್ನಡಿಗ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ಗಮನಾರ್ಹ ನಿರ್ವಹಣೆ ದಾಖಲಿಸಿದೆ. ಅಹ್ಮದಾಬಾದ್ ಗುಜರಾತ್ ತಂಡದ ತವರಿನ ತಾಣವಾಗಿದ್ದು ಇಷ್ಟರವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಸಾಧನೆ ಮಾಡಿದೆ.
ಇದೊಂದು ವಿಶೇಷ ಗೆಲುವು. ಯಾಕೆಂದರೆ ಆರಂಭದಲ್ಲಿ ನಾವು ಅಂಕ ಗಳಿಕೆಯಲ್ಲಿ ಎದುರಾಳಿ ಬೆಂಗಳೂರು ಬುಲ್ಸ್ ತಂಡಕ್ಕಿಂತ ಹಿಂದೆ ಇದ್ದೆವು. ಬುಲ್ಸ್ 9 ಅಂಕಗಳಿಂದ ಮುನ್ನಡೆಯಲ್ಲಿತ್ತು. ಆಬಳಿಕ ನಾವು ನಮ್ಮ ಅನುಭವದ ಆಟ ಪ್ರದರ್ಶಿಸಿ ಗೆಲುವು ಒಲಿಸಿಕೊಂಡೆವು ಎಂದು ಗುಜರಾತ್ ತಂಡದ ಕೋಚ್ ಮನ್ಪ್ರೀತ್ ಸಿಂಗ್ ತಿಳಿಸಿದರು. ಗುಜರಾತ್ ತಂಡವು ಮಂಗಳವಾರದ ಪಂದ್ಯದಲ್ಲಿ ಬುಲ್ಸ್ ತಂಡವನ್ನು 27-24 ಅಂಕಗಳಿಂದ ಕೆಡಹಿತ್ತು.
ಆರಂಭದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದೆವು. ಇದರಿಂದ ನಾವು ಹಿನ್ನಡೆ ಅನುಭವಿಸುವಂತಾಯಿತು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಬೇಗನೇ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಚೇತರಿಸಿಕೊಳ್ಳಲು ಪೂರ್ಣ ಪಂದ್ಯ ಬೇಕಾಗುತ್ತದೆ. ಯಾವ ರೀತಿ ಮುನ್ನಡೆಯಬೇಕು ಮತ್ತು ಎದುರಾಳಿಯ ಮುನ್ನಡೆಯನ್ನು ಯಾವ ರೀತಿ ಹಿಡಿದಿಟ್ಟುಕೊಳ್ಳಬಹುದು ಎಂಬ ಬಗ್ಗೆ ಯೋಜನೆ ಹಾಕಿಕೊಂಡರೆ ನಾವು ಮೇಲುಗೈ ಸಾಧಿಸಬಹುದು. ಆಟವಾಡುವ ಜತೆ ಕೆಲವೊಂದು ತಂತ್ರಗಳನ್ನು ಬಳಸಿದರೆ ಮುನ್ನಡೆ ಪಡೆಯಬಹುದು ಎಂದು ಅವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ