ಇನ್ಫೋಸಿಸ್ ಮಧ್ಯಾವಧಿ ಎಂಡಿ, ಸಿಇಓ ಪ್ರವೀಣ್ ರಾವ್ ಯಾರು ?
Team Udayavani, Aug 18, 2017, 11:25 AM IST
ಹೊಸದಿಲ್ಲಿ : ಭಾರತೀಯ ಕಾರ್ಪೊರೇಟ್ ಜಗತ್ತಿನ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಕಂಪೆನಿಯ ಎಂಡಿ ಹಾಗೂ ಸಿಇಓ ಆಗಿರುವ ವಿಶಾಲ್ ಸಿಕ್ಕಾ ಅವರಿಂದು ಶುಕ್ರವಾರ ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ತಾತ್ಕಾಲಿಕ ಅವಧಿಗೆ ಯು ಬಿ ಪ್ರವೀಣ್ ರಾವ್ ಅವರನ್ನು ಇನ್ಫೋಸಿಸ್ ಆಡಳಿತ ಮಂಡಳಿ ನೇಮಿಸಿದೆ.
ಯಾರು ಈ ಪ್ರವೀಣ್ ರಾವ್ ?
ಪ್ರವೀಣ್ ರಾವ್ ಅವರು ಇನ್ಫೋಸಿಸ್ ಬಿಪಿಓ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾವ್ ಅವರು ಕಂಪೆನಿಯ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದುಕೊಂಡು ಕಂಪೆನಿಯ ಒಟ್ಟಾರೆ ವ್ಯೂಹಗಾರಿಕೆ ಮತ್ತು ಕಾರ್ಯನಿರ್ವಹಣೆ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ.
ರಾವ್ ಅವರು ಕಂಪೆನಿಯ ಜಾಗತಿಕ ಮಾರಾಟ, ಪೂರೈಕೆ ಹಾಗೂ ಉದ್ಯಮ ಪೂರಕ ಕಾರ್ಯನಿರ್ವಹಣೆಗಳನ್ನು ನಿಭಾಯಿಸಿಕೊಂಡಿದ್ದಾರೆ.
ಕಂಪೆನಿಯ ಪ್ರಮುಖ ಪ್ರಕ್ರಿಯೆಗಳ ಹೊಣೆಗಾರಿಕೆ, ವ್ಯವಸ್ಥೆ ಮತ್ತು ನೀತಿಗಳ ನಿರ್ವಹಣೆ, ಗ್ರಾಹಕ ಬಾಂಧವ್ಯ ನಿರ್ವಹಣೆ, ಪರಿಣಾಮಕಾರಿ ಮಾರಾಟ ನಿರ್ವಹಣೆ, ಪೂರೈಕೆಯಲ್ಲಿನ ಉತ್ಕೃಷ್ಟತೆ, ಗುಣಮಟ್ಟ ಸಂರಕ್ಷಣೆ, ಪ್ರತಿಭಾಪೂರ್ಣ ಆಡಳಿತೆಯ ರೂಪಣೆ, ನಾಯಕತ್ವ ಅಭಿವೃದ್ದಿ ಮುಂತಾದ ಜವಾಬ್ದಾರಿಗಳನ್ನು ನಿಭಾಯಿಸಿರುವ ರಾವ್ ಅವರಿಗೆ 30 ವರ್ಷಗಳ ಸುದೀರ್ಘ ಅನುಭವವಿದೆ.
ರಾವ್ ಇನ್ಫೋಸಿಸ್ ಸೇರಿದ್ದು 1986ರಲ್ಲಿ . ಬೆಂಗಳೂರು ವಿವಿಯಿಂದ ಇವರು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ನ್ಯಾಸ್ಕಾಂ ನ ಕಾರ್ಯಕಾರಿ ಮಂಡಳಿ ಮತ್ತು ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟದ ರಾಷ್ಟ್ರೀಯ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ