ಜಲ ಸಂರಕ್ಷಣೆ ಕಾರ್ಯಕ್ಕೆ ನೆರೆ ರಾಜ್ಯ ಜನ ಖುಷ್‌

Team Udayavani, Aug 18, 2017, 4:48 PM IST

Water-1.jpg

ವಿಜಯಪುರ: ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಾಕ್ಷರ ಸಮಾವೇಶಕ್ಕೆ ನೆರೆಯ ರಾಜ್ಯಗಳ ಜನರು ಇನ್ನಿಲ್ಲದ ಸಂತಸ ವ್ಯಕ್ತಪಡಿಸಿದ್ದು, ಇಂಥ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಜಲ ಜಾಗೃತಿಯಲ್ಲಿ ರಾಜ್ಯಕ್ಕೆ ಮಾದರಿ ಎಂದು ಹೊಗಳಿದ್ದಾರೆ. ಭೀಕರ ಬರಕ್ಕೆ ತುತ್ತಾಗುವ ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ ಪ್ರದೇಶದಲ್ಲಿ ನಗರೀಕರಣ ಹಾಗೂ ಕೈಗಾರೀಕರಣದ ಫಲವಾಗಿ ಅಲ್ಲಿನ ಕೃಷ್ಣಾ ನದಿಯ ಪುಟ್ಟ ಉಪನದಿ ಪಂಚಗಂಗಾ ಜೀವ ಕಳೆದುಕೊಂಡಿತ್ತು. ಇದನ್ನರಿತ ರಾಷ್ಟ್ರ ಸೇವಾ ದಳ ಎಂಬ ಸಂಸ್ಥೆಯ ಸಾರಥ್ಯದಲ್ಲಿ ನದಿಯ ಪುನರುಜ್ಜೀವನಕ್ಕೆ ಮುಂದಾದ ಜಲ ಸಂರಕ್ಷಕರ ಪಡೆ ಇದಕ್ಕಾಗಿ ದೊಡ್ಡ ಮಟ್ಟದ ಅಭಿಯಾನವನ್ನೇ ಮಾಡಿ, ತನ್ನ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸತತ ನಾಲ್ಕಾರು ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಿ, ಪಂಚಗಂಗಾ ಎಂಬ ತಮ್ಮ ಜೀವನದಿ ಉಳಿಸುವಲ್ಲಿ ಹಳ್ಳಿಗರ ಪಾತ್ರದ ಕುರಿತು ಮನವರಿಕೆ ಮಾಡಿಕೊಟ್ಟರು. ಪಂಚಗಂಗಾ ನದಿಯ ಜೀವಸೃಷ್ಟಿಯಾಗಿರುವ ಹಳ್ಳಗಳಿಗೆ ಪ್ಲಾಸ್ಟಿಕ್‌ ಸೇರಿದಂತೆ, ನದಿ ತೀರದಲ್ಲಿ ಶವಸುಡುವ, ಸ್ಮಶಾನ ತ್ಯಾಜ್ಯ ಎಸೆಯದಂತೆ, ಗಣೇಶ ಮೂರ್ತಿ ಸೇರಿದಂತೆ ಧಾರ್ಮಿಕ ಮಾಲಿನ್ಯವನ್ನು ನದಿಗೆ ಎಸೆಯುವುದನ್ನು ತಡೆಯಲು ಜನಜಾಗೃತಿ ಮೂಡಿಸಿದೆ. 75 ಕಿ.ಮೀ. ದ್ದ ಹರಿಯುವ ಪಂಚಗಂಗಾನದಿ ತೀರದಲ್ಲಿರುವ ಸುಮಾರು 20 ಹಳ್ಳಿಗಳಲ್ಲಿ ಪ್ರತಿ ಊರಲ್ಲೂ ಕನಿಷ್ಟ 20 ಜಲ ಕಾರ್ಯಕರ್ತರ ತಂಡ ಕಟ್ಟಿದ್ದಾರೆ. ಅಲ್ಲದೇ ನದಿಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮುಕ್ತಿಗೂ ಶ್ರಮದಾನ ಮಾಡಿ, ಜಲ ಸಾಕ್ಷರತೆ ಕಾರ್ಯ ಮಾಡುತ್ತಿದ್ದಾರೆ. ಇದರ ಪರಿಣಾಮ ನದಿಗಳಿಗೆ ಯಾವುದೇ ಧಾರ್ಮಿಕ ತ್ಯಾಜ್ಯವಿದ್ದರೂ ಹಿಡಿಯಷ್ಟನ್ನು ಮಾತ್ರ ಸಾಂಕೇತಿಕವಾಗಿ ನದಿಗೆ ಎಸೆದು ಪರಂಪರೆ ರಕ್ಷಣೆ ಜೊತೆಗೆ ನದಿಯ ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗರು ಈ ವಿಷಯದಲ್ಲಿ ಬಹುತೇಕ ಜಾಗೃತರಾಗಿದ್ದರೂ, ಕೊಲ್ಲಾಪುರ, ಇಚಲಕರಂಜಿ, ಶಿರೋಡ ಸೇರಿದಂತೆ ಪಟ್ಟಣಗಳ ಜನರು ಮಾತ್ರ ಚರಂಡಿ, ಕೈಗಾರಿಕೆ ತ್ಯಾಜ್ಯವನ್ನೆಲ್ಲ ಪಂಚಗಂಗೆಯ ಒಡಲಿಗೆ ಸುರಿಯುವುದನ್ನು ನಿಲ್ಲಿಸಿಲ್ಲ. ಈ ಕುರಿತು ಶೀಘ್ರವೇ ದೊಡ್ಡಮಟ್ಟದ ಅಭಿಯಾನ ಹಮ್ಮಿಕೊಂಡು ಆಡಳಿತ ವ್ಯವಸ್ಥೆಗೆ
ಚುರುಕು ಮುಟ್ಟಿಸುವ ಗುರಿ ಹಾಕಿಕೊಂಡಿದ್ದಾರೆ. ಪಂಚಗಂಗೆ ಪುನರುಜ್ಜೀವನಕ್ಕೆ ಮುಂದಾಗಿರುವ ಈ ತಂಡ ಕೊಲ್ಲಾಪುರದ
ಬಾಬಾಸಾಹೇಬ ನದಾಫ್‌, ಸಾಂಗ್ಲಿಯ ಸದಾಶಿವ ಮುಗದುಮ, ಭೀಡ ಜಿಲ್ಲೆಯ  ಶ್ರೀಮಂತ ರಾಷ್ಟ್ರಪಾಲ ಅವರ ತಂಡ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಜಲಜಾಗೃತಿ ಸಮಾವೇಶದಲ್ಲಿ ಜನರಿಗೆ ಎಲ್ಲ ನದಿ ಸಂರಕ್ಷಣೆ ಕುರಿತು ಮನವಿ ಮಾಡಿಕೊಂಡು ಜಾಗೃತಿ ನಡೆಸಿದೆ. ಮತ್ತೂಂದೆಡೆ ಸೀಮಾಂಧ್ರದಿಂದ ಬಂದಿರುವ ರೈತರು ಕರ್ನಾಟಕದಲ್ಲಿ ನಡೆಯುತ್ತಿರುವ ಜಲ ಸಂರಕ್ಷಣೆ ಕಾರ್ಯಕ್ರಮಗಳ ಕುರಿತು ಮುಕ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಲದ್ದಕ್ಕೆ ತಮ್ಮ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರ್ನಾಟಕದ ರಾಜ್ಯದಿಂದ ಪಾಠ ಕಲಿಯುವಂತೆ ಕುಟುಕಿದ್ದಾರೆ. ಕೃಷ್ಣಾ ನದಿಯ ಉಗಮದಿಂದ ಸಮುದ್ರಕ್ಕೆ ಸೇರುವ ಕೊನೆಯ ಹಂತದವರೆಗಿನ ಇಡೀ ನದಿ ಪಾತ್ರದ ಜನರು ಒಂದೆಡೆ ಸೇರಿ ಕೃಷ್ಣೆಯ ಮಾಲಿನ್ಯ ತಡೆಗೆ ಚರ್ಚೆ ನಡೆಸುತ್ತಿರುವ ಕ್ರಮ ನಿಜಕ್ಕೂ ಅನುಕರಣೀಯ. ಕೃಷ್ಣಾ ನದಿಯ ತನ್ನ ಪಾಲಿನ ನೀರಿನ ಬಳಕೆಗಾಗಿ ಕರ್ನಾಟಕ ನಡೆಸಿರುವ ಯುದ್ಧೋಪಾದಿಯ ನಡೆ ಅಚ್ಚರಿ ಮೂಡಿಸುತ್ತಿವೆ ಎಂದು ಸೀಮಾಂಧ್ರದ ವಿಜಯವಾಡ ಜಿಲ್ಲೆಯ ನಿಡುಮರಿ ಗ್ರಾಮದ ಉಯ್ನಾರ ಶಿವಾರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೇ ನದಿಪಾತ್ರದ ನೀರಿನ ಪಾಲು ಹೊಂದಿರುವ ಸೀಮಾಂಧ್ರದಲ್ಲಿ ಮಾತ್ರ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಕೇವಲ ಆಕರ್ಷಕ ಮಾತನಾಡುತ್ತಿರುವ ಚಂದ್ರಬಾಬು ನಾಯ್ಡು ಕರ್ನಾಟಕದ ಸರ್ಕಾರದ ಕ್ರಮದಿಂದ ಪಾಠ ಕಲಿಯಬೇಕಿದೆ. ವಿಜಯಪುರ ಜಿಲ್ಲೆಯಲ್ಲೂ ನಡೆದಿರುವ ಜಲ ಮೂಲಗಳ ಪುನಶ್ಚೇತನ ಕಾರ್ಯ ಅನುಕರಣೀಯ ಎಂದು ವಿಜಯವಾಡದ ಜಂಗಾ ನಾಗಿರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲಿ ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬಲು ರೂಪಿಸಿರುವ ಯೋಜನೆ ದೇಶಕ್ಕೆ ಮಾದರಿ. ಕೃಷ್ಣಾ ನದಿಗೆ ರೂಪಿಸಿರುವ ನಿಡುಮರು ಏತನೀರಾವರಿ ಯೋಜನೆ ನಿರ್ವಹಣೆಯಲ್ಲಿ ನಮ್ಮ ಸರ್ಕಾರ ಎಡವುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಅನಂತವಾಡ ಗ್ರಾಮದ ಪೋಲ ರಮೇಶ ಹೇಳುತ್ತಾರೆ.

ಜಿ.ಎಸ್‌.ಕಮತರ

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.