ಉತ್ತರ ಹೇಳಿ ಬೈಕ್‌ ಗೆಲ್ಲಿ!


Team Udayavani, Aug 30, 2017, 10:32 AM IST

Vaira.jpg

ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಎರಡು ಜೋಡಿಗಳಿಗೆ ದುಬೈ ತೋರಿಸುವುದಾಗಿ ಇತ್ತೀಚೆಗಷ್ಟೇ ಒಂದು ಸ್ಪರ್ಧೆ ಆಯೋಜಿಸಿದ್ದರು, “ಮಾರ್ಚ್‌ 22′ ಚಿತ್ರದ ನಿರ್ಮಾಪಕ ಹರೀಶ್‌ ಶೇರಿಗಾರ್‌. ಈಗ ಅಂಥದ್ದೇ ಒಂದು ಪ್ರಯತ್ನವನ್ನು ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ಸಹ ಮಾಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ಸಂಬಂಧಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅವರು 50 ಬೈಕ್‌ಗಳನ್ನು ಕೊಡುವುದಕ್ಕೆ ತೀರ್ಮಾನಿಸಿದ್ದಾರೆ.

ಹೌದು, ನವರಸನ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ವೈರ’ ಚಿತ್ರವು ಸೆಪ್ಟೆಂಬರ್‌ ಎರಡನೆಯ ವಾರದಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಜನರನ್ನು ಸೆಳೆಯಲು ಮಂಜುನಾಥ್‌ ಹೊಸ ಆಫ‌ರ್‌ ಇಟ್ಟಿದ್ದಾರೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಚಿತ್ರ ನೋಡಿದವರಿಗೆಂದು ಪ್ರತಿ ಚಿತ್ರಮಂದಿರದಲ್ಲೂ ಲಕ್ಕಿ ಡಿಪ್‌ ಮಾಡಲಾಗುತ್ತದೆ. ಈ ಲಕ್ಕಿ ಡಿಪ್‌ನಲ್ಲಿ ವಿಜೇತರಾಗುವವರಿಗೆ, ಚಿತ್ರದ ಕುರಿತು ಏಳು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಆ ಏಳು ಪ್ರಶ್ನೆಗಳಿಗೆ ಉತ್ತರ ಕೊಟ್ಟವರಿಗೆ ಬೈಕ್‌ ಬಹುಮಾನವಾಗಿ ಕೊಡಲಾಗುತ್ತದೆ. ಆ ತರಹ 50 ಬೈಕ್‌ಗಳನ್ನು ಬಹುಮಾನವಾಗಿ ಕೊಡಲಾಗುತ್ತದಂತೆ. “ನನ್ನ ಮೊದಲ ಚಿತ್ರ “ರಥಾವರ’ವನ್ನು ನೋಡಿ ಹೆಚ್ಚಾಗಿ ಪ್ರೋತ್ಸಾಹಿಸಿದ್ದು ಯುವಕರು ಮತ್ತು ಕಾಲೇಜ್‌ ವಿದ್ಯಾರ್ಥಿಗಳು. ಅವರ ಸಹಕಾರದಿಂದ ಚಿತ್ರ ಸುದ್ದಿಯಾಯಿತು. ಅವರಿಗೆ ಏನಾದರೂ ವಾಪಸ್ಸು ಕೊಡುವ ನಿಟ್ಟಿನಲ್ಲಿ ಈ ಸ್ಫರ್ಧೆ ಆಯೋಜಿಸಿದ್ದೇವೆ. ಈ ಸ್ಪರ್ಧೆಯಲ್ಲಿ ಒಟ್ಟು 50 ಬೈಕ್‌ ಕೊಡುವುದಕ್ಕೆ ತೀರ್ಮಾನಿಸಿದ್ದೇವೆ.

ಈ ಪೈಕಿ ಹೆಣ್ಮಕ್ಕಳು ಗೆದ್ದರೆ, ಅವರಿಗೆ ಸ್ಕೂಟಿ ಕೊಡಲಿದ್ದೇವೆ. ಈ ಸ್ಪರ್ಧೆ ಹಳ್ಳಿ, ಸಿಟಿ ಅಂತಿಲ್ಲ. ಎಲ್ಲರಿಗೂ ಓಪನ್‌ ಆಗಿರುತ್ತದೆ. ಯಾರು ಬೇಕಾದರೂ ಭಾಗವಹಿಸಬಹುದು. ಲಕ್ಕಿ ಡಿಪ್‌ನಲ್ಲಿ ವಿಜೇತರಾದವರು, ಚಿತ್ರದ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಬೈಕ್‌ ತೆಗೆದುಕೊಂಡು ಹೋಗಬಹುದು’ ಎನ್ನುತ್ತಾರೆ ಮಂಜುನಾಥ್‌. ಒಂದು ಬೈಕಿಗೆ 50 ಸಾವಿರ ಅಂತಿಟ್ಟುಕೊಂಡರೂ, 50 ಬೈಕಿಗೆ 25 ಲಕ್ಷವಾಗುತ್ತದೆ.

ಇದು ಸ್ವಲ್ಪ ಜಾಸ್ತಿಯಾಯಿತಲ್ಲವೇ ಎಂದರೆ, ಇಲ್ಲ ಎನ್ನುತ್ತಾರೆ ಮಂಜುನಾಥ್‌. “ಯಾವುದೇ ಸಮಸ್ಯೆ ಇಲ್ಲ. ಜನರಿಂದಲೇ ದುಡ್ಡು ಬಂದಿದೆ. ಈಗ ಅವರಿಗೇ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೇ’ ಎನ್ನುತ್ತಾರೆ ಅವರು. “ವೈರ’ ಚಿತ್ರದಲ್ಲಿ ನವರಸನ್‌, ಪ್ರಿಯಾಂಕಾ ಮಲಾ°ಡ್‌ ಮುಂತಾದವರು ನಟಿಸಿದ್ದು, ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.