ಕೊಳ್ಳೇಗಾಲದಲ್ಲಿ ಲಂಚ ಮುಕ್ತ ಜಾಗೃತಿ ಅಭಿಯಾನ


Team Udayavani, Sep 5, 2017, 3:32 PM IST

cham-4.jpg

ಕೊಳ್ಳೇಗಾಲ: ನಗರದ ತಾಲೂಕು ಕಚೇರಿಯ ಆವರಣದಲ್ಲಿ ಲಂಚಮುಕ್ತ ಜನ ಜಾಗೃತಿ ಅಭಿಯಾನ ಸೋಮವಾರ ಯಶಸ್ವಿಯಾಗಿ ನಡೆಯಿತು.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ರವಿ ಕೃಷ್ಣರೆಡ್ಡಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡಿದ ತಂಡದ ಸದಸ್ಯರು, ತಾಲೂಕು ಕಚೇರಿಯ ಆವರಣದಲ್ಲಿರುವ ಸಾರ್ವಜನಿಕರ ಶೌಚಾಲಯ ಗಬ್ಬು ನಾರುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಶೌಚಾಲಯದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳದ ಅಧಿಕಾರಿಗಳು ಇನ್ನೂ ಕುಂದು ಕೊರತೆಗಳನ್ನು ಎಷ್ಟರ ಮಟ್ಟಿಗೆ ನಿವಾರಣೆ ಮಾಡುತ್ತೀರಿ ಎಂದು ತಹಶೀಲ್ದಾರ್‌ ಕಾಮಾಕ್ಷಮ್ಮಗೆ ಪ್ರಶ್ನಿಸಿದರು. ಕೂಡಲೇ ಶುಚಿಗೊಳಿಸಿ, ಶುಚಿತ್ವ ಕಾಪಾಡುವಂತೆ ಮುಖಂಡರು ಮನವಿ ಮಾಡಿದರು.

ಎಲ್ಲಾ ಇಲಾಖೆಗಳಲ್ಲಿ ಪ್ರಮುಖವಾದ ಇಲಾಖೆ ಕಂದಾಯ ಇಲಾಖೆ. ತಾಲೂಕಿನ ವಿವಿಧ ಗ್ರಾಮಗಳಿಂದ ಹಲವು ಬಡಜನರು ದೂರುಗಳನ್ನು ತೆಗೆದುಕೊಂಡು ಬರುತ್ತಾರೆ. ಅವರನ್ನು ಹೆಚ್ಚು ಕಚೇರಿಗೆ ಅಲೆದಾಡಿಸದೇ, ಲಂಚ ಪಡೆಯದೇ ಕೆಲಸ ಮಾಡಿಕೊಡಬೇಕು ಎಂದು ಕಚೇರಿಯ ಸಿಬ್ಬಂದಿಗೆ ಸೂಕ್ತ ಸಂದೇಶ ರವಾನೆ ಮಾಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದರು. 

ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗೆ ನಾಮಫ‌ಲಕ ಮತ್ತು ಅವರ ಹೆಸರಿನ ಐಡಿ ಕಾರ್ಡ್‌ ಧರಿಸಿಕೊಂಡು ಬರಬೇಕು. ಸಾರ್ವಜನಿಕರಿಗೆ ಸಿಬ್ಬಂದಿಗಳ ಮಾಹಿತಿ ಲಭ್ಯವಾಗಬೇಕು ಮತ್ತು ಸಾರ್ವಜನಿಕರನ್ನು ಅಲೆದಾಡಿಸದೆ ನಿಗದಿತ ಸಮಯದಲ್ಲಿ ಕೆಲಸಗಳನ್ನು ಸರಿಪಡಿಸಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕೆಂದು ಸೂಚನೆ ನೀಡಿದರು. 

ಹಣ ಕೇಳಬೇಡಿ: ಮಿನಿ ವಿಧಾನಸೌಧದ ಭವನದಲ್ಲಿ ಇರುವ ಸರ್ವೇ ಇಲಾಖೆಗೆ ದಾಳಿ ಮಾಡಿದ ತಂಡ ಜನರು ಮನವಿ ಪತ್ರವನ್ನು ನೀಡಿದ ಕೆಲವೇ ದಿನಗಳಲ್ಲಿ ಅವರ ಜಮೀನು, ಇನ್ನಿತರ ಭೂಮಿಯನ್ನು ಸರ್ವೇ ಮಾಡಬೇಕು. ಸರ್ವೇ ಕೆಲಸಕೆಂದು ಬರುವ ಸಾರ್ವಜನಿಕರಿಂದ ಯಾವುದೇ ಕಾರಣಕ್ಕೂ ಹಣ ಸುಲಿಗೆ ಮಾಡಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ಲೋಕಾಗೆ ದೂರು: ಸರ್ವೆ ಅಧಿಕಾರಿಗಳು ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಕೂಡಲೇ ಅಂತಹವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ಸಲ್ಲಿಸಲಾಗುವುದೆಂದು ತಿಳಿಸಿದರು.

ನಂತರ ಉಪ ಖಜಾನೆಗೆ ಭೇಟಿ ನೀಡಿದ ಅವರು, ಈಗಾಗಲೇ ಉಪ ಖಜಾನೆಯ ಅಧಿಕಾರಿಗಳು ಬಡಾವಣೆ ಮಾಡಿಕೊಡಲು ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದು, ಯಾರಿಂದಲೂ ಹಣಕ್ಕೆ ಒತ್ತಾಯ ಮಾಡಬಾರದು, ಎಂದು ಖಜಾನೆಯ ಅಧಿಕಾರಿ ಸುಲೋಚನಗೆ ಸಲಹೆ ನೀಡಿದರು.

ಆಸ್ಪತ್ರೆ: ವೇದಿಕೆಯ ತಂಡವು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಅಪಾರ ಸಂಖ್ಯೆಯಲ್ಲಿ ರೋಗಿಗಳು ಜಮಾವಣೆ ಗೊಂಡಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿ ಸಾಕಷ್ಟು ರೋಗಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸರ್ಕಾರದಿಂದ ಎಲ್ಲಾ ಔಷಧಿಗಳು ಸರಬರಾಜು ಆಗುತ್ತಿದ್ದು, ರೋಗಿಗಳಿಗೆ ಸಂಪೂರ್ಣ ಬಳಕೆಯಾಗಬೇಕು ಮತ್ತು ರೋಗಿಗಳಿಂದ ಯಾವುದೇ ತರಹದ ಹಣ ಸುಲಿಗೆ ಮಾಡಬಾರದು.ಆಸ್ಪತ್ರೆ ಸಂಪೂರ್ಣ ಸ್ವತ್ಛತೆಗೆ ಆದ್ಯತೆ ನೀಡಬೇಕೆಂದು ವೈದ್ಯರಿಗೆ ಮನವಿ ಮಾಡಿದರು.

ಉಪ ನೊಂದಾಧಿಕಾರಿಗಳ ಕಚೇರಿ: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ದಂಧೆ ದಿನನಿತ್ಯ ನಡೆಯುತ್ತಿದೆ. ರಿಯಲ್‌ ಎಸ್ಟೇಟ್‌ನ ಹಾವಳಿಯು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಒಂದು ಆಸ್ತಿಯನ್ನು ಹಲವಾರು ಜನರಿಗೆ ನೋಂದಾಯಿಸುವುದನ್ನು ತಡೆದು ಸೂಕ್ತ ಕಡತಗಳನ್ನು ಪರಿಶೀಲಿಸಬೇಕು. ಸಾರ್ವಜನಿಕರು ದಾಖಲೆ ಪಡೆಯಲು ತಿಂಗಳುಗಟ್ಟಲೆ ಕಾಯಿಸಿ, ಸಾರ್ವಜನಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದು, ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಮಾಡಿದರು.

ಸರ್ಕಾರ ಹೊರಡಿಸಿರುವ ಆದೇಶದಂತೆ ನಾಮಫ‌ಲಕ, ಸಕಾಲ ಇನ್ನಿತರ ಮಾಹಿತಿಗಳನ್ನು ನಮೂದಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ನೋಂದಾವಣೆ ಇಲಾಖೆಯ ಅಧಿಕಾರಿ ಮಹದೇವಯ್ಯಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ, ಈಗಾಗಲೇ ರಾಜ್ಯದ 150 ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಲಂಚ ಪಡೆಯುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿಸಿ, ಭ್ರಷ್ಟರಿಗೆ ತಕ್ಕ ಪಾಠ ಕಲಿಸಲಾಗಿದೆ. ವೇದಿಕೆಯ ಹೆಸರು ಹೇಳಿದ ಸಾರ್ವಜನಿಕರಿಗೆ ಹಲವಾರು ಇಲಾಖೆಗಳಲ್ಲಿ ದಿಢೀರನೇ ಕೆಲಸಗಳು ಆಗಿರುವ ಘಟನೆಗಳು ನಡೆದಿರುವುದು ಸಂಘಟನೆಯ ಹೋರಾಟಕ್ಕೆ ತಂದ ಜಯ ಎಂದು ತಿಳಿಸಿದರು.

ಉದ್ದೇಶ: ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ, ಮಾಹಿತಿ ಹಕ್ಕು ಮತ್ತು ಸಕಾಲ ಕಾಯ್ದೆಯ ಕುರಿತು ತರಬೇತಿ ನೀಡುವುದು, ಲಂಚ ಮತ್ತು ಭ್ರಷ್ಟಚಾರದ ಬಗ್ಗೆ ಲಭ್ಯವಾಗುವ ಮಾಹಿತಿಯನ್ನು ಲೋಕಾಯುಕ್ತ ಮತ್ತು ಎಸಿಬಿ ಸಂಸ್ಥೆಗಳಿಗೆ ನೀಡಿ, ಭ್ರಷ್ಟಾಚಾರ ನಿಮೂರ್ಲನೆ, ಭ್ರಷ್ಟರ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ, ಕಾನೂನಿನ ಹೋರಾಟ ಮಾಡುವುದು. ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಅರಣ್ಯ ಕನಿಜ ಸಂಪತ್ತುಗಳ ಉಳಿವಿಗಾಗಿ ಹೋರಾಡಲಾಗುವುದು ಎಂದು ವಿವರಿಸಿದರು.

ಮೂಲಭೂತ ಸೌಕರ್ಯ ಮತ್ತು ಸ್ಥಳೀಯರ ಕುಂದುಕೊರತೆಗಳ ಬಗ್ಗೆ ಹೋರಾಟ, ಸಾಮಾಜಿಕ ಹೋರಾಟಗಾರರು ಮತ್ತು ಅನ್ಯ ಸಂಘಟನೆಗಳ ಒಳಗೂಡಿ ಭ್ರಷ್ಟಚಾರದ ವಿರುದ್ಧ ಜಂಟಿ ಹೋರಾಟ ನಡೆಸುವುದೇ ವೇದಿಕೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಸ್‌.ವೆಂಕಟೇಶ್‌ ಪ್ರಸಾದ್‌, ಖಜಾಂಚಿ ಮಹೇಶ್‌, ರಾಜ್ಯ ಸಮಿತಿ ಸದಸ್ಯರಾದ ವೆಂಕಟೇಶ್‌, ರಾಜನಾಗ್‌, ಉದಯಸಿಂಹ, ಜಿಲ್ಲಾಧ್ಯಕ್ಷ ಮೋಹನ್‌, ಉಪಾದ್ಯಕ್ಷ ಪ್ರಭಾಕರ್‌, ಕಾರ್ಯದರ್ಶಿ ನಂಜುಂಡಸ್ವಾಮಿ ಇದ್ದರು.

ಟಾಪ್ ನ್ಯೂಸ್

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.