3 ವಾರಗಳ ಕನಿಷ್ಠಕ್ಕೆ ರೂಪಾಯಿ: ಮುಂಬಯಿ ಶೇರು 147 ಅಂಕ ನಷ್ಟ
Team Udayavani, Sep 6, 2017, 4:19 PM IST
ಮುಂಬಯಿ : ಡಾಲರ್ ಎದುರು ರೂಪಾಯಿ ಮೂರು ವಾರಗಳ ಕನಿಷ್ಠಕ್ಕೆ ಕುಸಿದಿರುವುದು ಮತ್ತು ಉತ್ತರ ಕೊರಿಯ ಪರಮಾಣು ಹುಚ್ಚಾಟ ಸಮರೋತ್ಸಾಹಕ್ಕೆ ಕಾರಣವಾಗಿರುವುದು ಇಂದು ಮುಂಬಯಿ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಯಿತು.
ಇಂದು ಬುಧವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 147.58 ಅಂಕಗಳ ನಷ್ಟದೊಂದಿಗೆ 31,661.97 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36 ಅಂಕಗಳ ಕುಸಿತದೊಂದಿಗೆ 9,916.20 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಹಿಂಡಾಲ್ಕೊ, ಅಲ್ಟ್ರಾ ಟೆಕ್ ಸಿಮೆಂಟ್, ಗೇಲ್, ಎಸ್ ಬ್ಯಾಂಕ್, ಕೋಟಕ್ಮಹೀಂದ್ರ ಶೇರುಗಳು ಟಾಪ್ ಗೇನರ್ ಎನಿಸಿಕೊಂಡರೆ ಸನ್ ಫಾರ್ಮಾ, ಐಡಿಯಾ ಸೆಲ್ಯುಲರ್, ಬಾಶ್, ಐಟಿಸಿ, ಲೂಪಿನ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!
Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ
Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!