ನಮ್ಮಲ್ಲಿ ಕೊಹ್ಲಿ, ಧೋನಿ ಆಡಲಿ ಪಾಕ್ ಅಭಿಮಾನಿಗಳ ಆಗ್ರಹ
Team Udayavani, Sep 13, 2017, 6:05 AM IST
ಲಾಹೋರ್: ಈಗಾಗಲೇ ಪಾಕಿಸ್ಥಾನದಲ್ಲಿ ವಿಶ್ವ ಇಲೆವೆನ್ ಮತ್ತು ಆತಿಥೇಯ ತಂಡದ ನಡುವೆ ಟಿ-20 ಸರಣಿ ಆರಂಭವಾಗಿದೆ. ಆದರೆ ಪಾಕ್ ಅಭಿಮಾನಿಗಳು ಭಾರತೀಯ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ವಿಶ್ವ ತಂಡದಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಬಾಂಗ್ಲಾದೇಸ, ಶ್ರೀಲಂಕಾ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡದ ಆಟಗಾರರಿದ್ದಾರೆ. ಆದರೆ ಭಾರತೀಯ ಆಟಗಾರರು ಆಡುತ್ತಿಲ್ಲ. ಇದು ಪಾಕ್ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಭಿಮಾನಿಗಳು, “ನಾವು ಪಾಕಿಸ್ಥಾನದಲ್ಲಿ ಕೊಹ್ಲಿ, ಧೋನಿ ಆಡುವುದನ್ನು ಬಯಸುತ್ತೇವೆ. ನಾವು ಅವರ ಅಭಿಮಾನಿಗಳು. ಈ ಸಂದರ್ಭದಲ್ಲಿ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ