ಸೆಪ್ಟೆಂಬರ್ 22ರಿಂದ “ಕವಲು ದಾರಿ’
Team Udayavani, Sep 19, 2017, 12:07 PM IST
ಪುನೀತ್ ರಾಜಕುಮಾರ್ ಪಿ.ಆರ್.ಕೆ ಪ್ರೊಡಕ್ಷನ್ಸ್ ಎಂಬ ಬ್ಯಾನರ್ ಹುಟ್ಟುಹಾಕಿ, ಅದರಡಿ ಚಿತ್ರ ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗ ಆ ಸಂಸ್ಥೆಯ ಮೊದಲ ಚಿತ್ರವಾದ “ಕವಲು ದಾರಿ’ ಇದೇ ಶುಕ್ರವಾರ ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಲಿದೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಡಾ ರಾಜಕುಮಾರ್ ಕುಟುಂಬದವರು ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
“ಕವಲು ದಾರಿ’ ಚಿತ್ರವನ್ನು ಪುನೀತ್ ಅವರ ಪತ್ನಿ ಅಶ್ವಿನಿ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಅನಂತ್ ನಾಗ್, ಅಚ್ಯುತ್ ಕುಮಾರ್, ರಿಷಿ, ಸುಮನ್ ರಂಗನಾಥ್, ರೋಶಿನಿ ಪ್ರಕಾಶ್ ಮುಂತಾದ ಹಲವರು ನಟಿಸುತ್ತಿದ್ದಾರೆ. ಚಿತ್ರದ ಕಥೆಯು ಕೊಲೆ ಪ್ರಕರಣವೊಂದರ ತನಿಖೆಯ ಕುರಿತಾಗಿದ್ದು, ಇದರಲ್ಲಿ ಅನಂತ್ನಾಗ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ರಿಷಿ ಟ್ರಾಫಿಕ್ ಎಸ್.ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಚರಣ್ರಾಜ್ ಸಂಗೀತವಿದೆ. ಅದ್ವೆ„ತ ಗುರುಮೂರ್ತಿ ಕ್ಯಾಮೆರಾ ಛಾಯಾಗ್ರಹಣ ಮಾಡುತ್ತಿದ್ದಾರೆ. ವರದರಾಜ್ ಕಾಮತ್ ಕಲಾ ನಿರ್ದೇಶಕರಾಗಿದ್ದು, ಎಂ.ಆರ್. ರಾಜಾಕೃಷ್ಣನ್ ಶಬ್ಧ ವಿನ್ಯಾಸ ಮಾಡಲಿದ್ದಾರೆ. ಚಿತ್ರದ ಚಿತ್ರೀಕರಣವು ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಿ ಡಿಸೆಂಬರ್ನಲ್ಲಿ ಮುಗಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
ಇಸ್ರೇಲ್ ದೇಶದಲ್ಲಿ ಅಲ್ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್