Beware! ನಕಲಿ ಬ್ಲೂವೇಲ್ apps ಬಂದಿದೆ, ಡೌನ್ ಲೋಡ್ ಮಾಡಿದ್ರೆ ಕಂಟಕ?
Team Udayavani, Sep 28, 2017, 12:00 PM IST
ನವದೆಹಲಿ: ರಷ್ಯಾದಲ್ಲಿ ನೂರಮೂವತ್ತಕ್ಕೂ ಹೆಚ್ಚು ಬಾಲಕರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಬ್ಲೂ ವೇಲ್ ಎಂಬ ಆತ್ಮಹತ್ಯೆ ಗೇಮ್ ಭಾರತಕ್ಕೂ ಕಾಲಿರಿಸಿ ಸುದ್ದಿ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಏತನ್ಮಧ್ಯೆ ಡೆಡ್ಲಿ ಬ್ಲೂ ವೇಲ್ ಗೇಮ್ ಹುಚ್ಚಿಗೆ ಬೀಳದಿರುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಆದರೆ ಬ್ಲೂವೇಲ್ ಚಾಲೆಂಜ್ ಗೇಮ್ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ವರದಿಯೊಂದು ತಿಳಿಸಿದೆ.
ಸೈಬರ್ ತಂತ್ಜಜ್ಞರ ನಂಬಿಕೆಯ ಪ್ರಕಾರ. ಈಗಾಗಲೇ ಹಲವಾರು ರೀತಿಯ ನಕಲಿ ಬ್ಲೂವೇಲ್ ಗೇಮ್ ಆಪ್ ಗಳು ಹಾಗೂ ಮಾಲ್ ವೇರ್(ಮಾಲ್ ವೇರ್ ಎ೦ಬುದು Melecious Software (ದುರುದ್ದೇಶಪೂರಿತ ತ೦ತ್ರಾ೦ಶ) ಎ೦ಬುದರ ಸ೦ಕ್ಷಿಪ್ತ ರೂಪ) ಇಂಟರ್ನೆಟ್ ನಲ್ಲಿ ಲಭ್ಯವಾಗುತ್ತಿದೆ. ಒಂದು ವೇಳೆ ಕುತೂಹಲಕ್ಕಾದರು ನೀವು ಈ ಆಪ್ ಗಳನ್ನು ಡೌನ್ ಲೋಡ್ ಮಾಡಿದರೆ, ಅದರಿಂದಾಗಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕಳ್ಳತನವಾಗಲಿದೆ ಎಂದು ಎಚ್ಚರಿಸಿದ್ದಾರೆ.