ಬಯಲು ಬಹಿರ್ದೆಸೆ ಮುಕ್ತ ಅಟ್ಟರ್ಗಾ

Team Udayavani, Oct 3, 2017, 11:01 AM IST

bid-2.jpg

ಬೀದರ: ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮ ಪಂಚಾಯತನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಅರ್ಥಪೂರ್ಣವಾಗಿ ಘೋಷಿಸಲು ಸೋಮವಾರ ಗುಂಜರಗಾ ಗ್ರಾಮದಿಂದ ಅಟ್ಟರ್ಗಾ ಗ್ರಾಮದ ವರೆಗೆ ಸಚಿವರು ಹಾಗೂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಜಿಪಂ, ಸ್ವತ್ಛ ಭಾರತ ಮಿಷನ್‌, ತಾಪಂ ಮತ್ತು ಗ್ರಾಪಂ ಆಶ್ರಯದಲ್ಲಿ ಗುಂಜರಗಾ ಗ್ರಾಮದ ಶಾಲಾ ಆವರಣದಿಂದ ಬೆಳಗ್ಗೆ ಆರಂಭಗೊಂಡ “ನಮ್ಮ ನಡಿಗೆ ಸ್ವತ್ಛ ಗ್ರಾಮದೆಡೆಗೆ’ ಕಾಲ್ನಡಿಗೆ ಜಾಥಾಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಎರಡು ಕಿ.ಮೀ. ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಶೌಚಾಲಯ ಕಟ್ಟಿಸಿಕೊಳ್ಳುವುದರ ಬಗ್ಗೆ ಸಾರ್ವಜನಿಕರದಲ್ಲಿ ಜನಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಿದವು.

ತೀವ್ರಗತಿಯ ಅನುಷ್ಠಾನಕ್ಕಾಗಿ ಈ ಅಭಿಯಾನ. ಶೌಚಾಲಯ ಇಲ್ಲದ ಮನೆಗೆ ವಿದ್ಯುತ್‌ ಕಡಿತಗೊಳಿಸಲಾಗುವುದು ಎನ್ನುವ ಬ್ಯಾನರ್‌ನಡಿ ಜಾಥಾ ನಡೆಸುವ ಮೂಲಕ ಜನರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಯಿತು. ಗುಂಜರರ್ಗಾ ಗ್ರಾಮದ ವಿದ್ಯಾರ್ಥಿಗಳು ಸೈಕಲ್‌ ಜಾಥಾ ನಡೆಸಿ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಭವ್ಯ ಸ್ವಾಗತ: ಗುಂಜರಗಾದಿಂದ ಕಾಲ್ನಡಿಗೆ ಜಾಥಾ ಮೂಲಕ ಅಟ್ಟರ್ಗಾಕ್ಕೆ ಆಗಮಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಅಟ್ಟರ್ಗಾ ಗ್ರಾಮದ ಹಿರಿಯರು ಭವ್ಯ ಸ್ವಾಗತ ಕೋರಿದರು. ಮಹಿಳೆಯರು ತುಂಬಿದ ಕೊಡಗಳನ್ನು ಹೊತ್ತು ಮತ್ತು ಆರತಿ ಹಿಡಿದು ಸ್ವಾಗತ ಕೋರಿದರು. ಅಟ್ಟರ್ಗಾ ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು. ಗಾಂಧಿ ಜಯಂತಿ ಅಂಗವಾಗಿ ಈ ಸ್ವತ್ಛ ಭಾಲ್ಕಿ ಅಭಿಯಾನ ನಡೆಯುತ್ತಿದೆ. ಇದಕ್ಕೆ ಸಹಕರಿಸಿರಿ. ತಮ್ಮ ಮನೆಯ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಪುರಸಭೆಯ ವಾಹನಕ್ಕೆ ಹಾಕಬೇಕು. ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಬೇಡಿರಿ. ಬಯಲು ಶೌಚ ಮುಕ್ತ ಭಾಲ್ಕಿಗಾಗಿ ಪ್ರತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಿರಿ. ಪ್ಲಾಸ್ಟಿಕ್‌ ನಿಷೇಧಿಸಿದ್ದು, ಅದನ್ನು ಬಳಸದೇ ಸಹಕರಿಸಿರಿ. ಸ್ವತ್ಛ ಭಾಲ್ಕಿ ಆರೋಗ್ಯ ಭಾಲ್ಕಿ ಸ್ವತ್ಛತೆಯೆಡೆಗೆ ಒಂದು ಹೆಜ್ಜೆ ಎಂದು ಹೇಳುತ್ತ
ಕಾಲ್ನಡಿಗೆ ಜಾಥಾದಲ್ಲಿ ಎರಡು ವಾಹನಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿತು.

ಸೈಕಲ್‌ ಜಾಥಾ: ಇದೇ ವೇಳೆ ಗುಂಜರಗಾ ಗ್ರಾಮದಿಂದ ಅಟ್ಟರ್ಗಾವರೆಗೆ ಕಾಲ್ನಡಿಗೆ ಜಾಥಾ ನಡೆದರೆ, ಮಾಣಿಕೇಶ್ವರ
ಗ್ರಾಮದಿಂದ ಸೈಕಲ್‌ ಜಾಥಾ ನಡೆಯಿತು. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಸಿಇಒ ಡಾ| ಸೆಲ್ವಮಣಿ ಆರ್‌., ಸ್ವತ್ಛ ಭಾರತ ಅಭಿಯಾನದ ನೋಡೆಲ್‌ ಅಧಿಕಾರಿ ಗೌತಮ ಅರಳಿ, ಅಧಿಕಾರಿಗಳಾದ ಬಲಭೀಮ ಕಾಂಬಳೆ, ಜಿಯಾವುಲ್ಲಾ ಕೆ, ಡಾ| ಡಿ.ಎಸ್‌. ಹವಾಲ್ದಾರ, ಎಂ.ಎ.ಜಬ್ಟಾರ, ಐ.ಎಸ್‌. ಪಾಂಚಾಳ, ಪ್ರೇಮಸಾಗರ ದಾಂಡೇಕರ, ಅವಿನಾಶ ಕೆ. ಮತ್ತಿತರರು ಇದ್ದರು.

ಟಾಪ್ ನ್ಯೂಸ್

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.