ಅಂಗದಾನ : ಪುರಾಣದ ಚಿತ್ರಣ ಬಿಚ್ಚಿಟ್ಟ ನೃತ್ಯ ರೂಪಕ

Team Udayavani, Oct 27, 2017, 12:50 AM IST

Bettkoppa-25-10.jpg

‘ಅಂಗದಾನಗಳು ಪುರಾಣ ಸಮ್ಮತವೇ? ಪುರಾಣಗಳಲ್ಲೂ ಅಂಗಗಳ ಕಸಿ ನಡೆದಿತ್ತೇ? ಅಂಥದೊಂದ್ದರ ಕುರಿತಾದ ಪರಿಕಲ್ಪನೆಯ ರೂಪಕ ಶಿರಸಿಯಲ್ಲಿ ಪ್ರದರ್ಶನ ಕಂಡಿತು. ನಾಟ್ಯದೀಪ ಕಲ್ಚರಲ್‌ ಅಸೋಸಿಯೇಶನ್‌ ನಡೆಸಿದ ಈ ಪ್ರಯೋಗ ಹೊಸ ಹೊಳಹಿಗೂ ಕಾರಣವಾಯಿತು’

ಅಂಗದಾನಗಳನ್ನು ವೈದ್ಯಕೀಯ ಲೋಕ ಇದನ್ನು ಸ್ವಾಗತಿಸಿದರೂ ಹಲವಡೆ ವೈದಿಕೀಯ ಲೋಕ ಇದನ್ನು ಅಷ್ಟಾಗಿ ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ನಮ್ಮ ಪುರಾಣ ಕಥೆಗಳು ಏನೆನ್ನುತ್ತವೆ? ಅಲ್ಲಿ ಸಮ್ಮತವಾಗಿತ್ತೇ?  ಪುರಾಣಗಳಲ್ಲೂ ಅಂಗಗಳ ಕಸಿ ನಡೆದಿತ್ತೇ? ಈ ಚರ್ಚೆಗಳು ಇಂದಿಗೂ ಇದೆ. ಅಂಥ ಪುರಾಣ ಕಥಾನಗಳಲ್ಲಿನ ಕಸಿ, ನೇತ್ರದಾನ, ದೇಹದಾನ, ಅಂಗದಾನಗಳ ಕುರಿತು ಇರುವ ಕಥೆಗಳನ್ನೇ ಸೇರಿಸಿ ಒಂದು ಭರತನಾಟ್ಯ ರೂಪಕ ಇಲ್ಲಿ ಗಮನ ಸೆಳೆದಿದೆ. ಪುರಾಣಗಳಲ್ಲಿ ಅಂಗದಾನ ಕುರಿತು ಇರುವ ಕಥಾನಕ ಅನಾವರಣಗೊಳಿಸುವ ಅಪರೂಪದ ಭರತನಾಟ್ಯ ನೃತ್ಯ ರೂಪಕ “ಅಂಗದಾನಂ ಪರಂಸ್ಮತಂ’ ಒಂದೂವರೆ ಗಂಟೆಗಳ ಕಾಲ ಮನ ಮುಟ್ಟುವಂತೆ ನಗರದ ಲಯನ್ಸ ನಯನ ನೇತ್ರ ಭಂಡಾರ ಪ್ರದರ್ಶನದ ವೇಳೆ ಪ್ರದರ್ಶನ ಕಂಡಿತು.

ದೇಹದಾನ, ನೇತ್ರದಾನ, ರಕ್ತ ದಾನ ಇತ್ಯಾದಿಗಳನ್ನು ನಮ್ಮ ಉಪಯೋಗದ ನಂತರ ಅವಶ್ಯವಿದ್ದವರಿಗೆ ದಾನ ಮಾಡುವ ಲೋಕಹಿತದ ಜಾಗೃತಿಗಾಗಿ ಪುರಾಣಗಳಲ್ಲಿ ನಡೆದ ಗಣೇಶನಿಗೆ ಆನೆ ಮುಖದ ಅಂಗಕಸಿ, ಶಬಿ ಚಕ್ರವರ್ತಿಯಿಂದ ಮಾಂಸ ಹಾಗೂ ಹೃದಯ ದಾನ ಕಥಾನಕ, ದದೀಚಿ ದೇಹ ದಾನ,  ಬೇಡರ ಕಣ್ಣಪ್ಪನಿಂದ ನೇತ್ರದಾನ ಸೇರಿದಂತೆ ಪುರಾಣಗಳಲ್ಲಿನ ಕಥಾನಕವನ್ನು ಮನಮುಟ್ಟುವಂತೆ ನಿರೂಪಿಸಲಾಯಿತು. ಇಲ್ಲಿನ ನಾಟ್ಯದೀಪ ಕಲ್ಚರಲ್‌ ಟೀಂ ಕಲಾವಿದರು ನಡೆಸಿಕೊಟ್ಟರು. ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ನೃತ್ಯ ವಿದುಷಿ, ಗುರು ಸೀಮಾ ಭಾಗವತ್‌ ನಿರ್ದೇಶನದಲ್ಲಿ ಶಿಷ್ಟ ಪ್ರಯತ್ನ ನಡೆಸಿಕೊಟ್ಟರು.

ಮೇಲುಕೋಟೆಯ ವಿದ್ವಾಂಸ ಉಮಾಕಾಂತ ಭಟ್ಟ ಕೇರೇಕೈ ಹಾಗೂ ನೇತ್ರ ತಜ್ಞ ಡಾ.ಶಿವರಾಮ ಕೆ.ವಿ. ಪರಿಕಲ್ಪನೆಯ ರೂಪಕಕ್ಕೆ ಪೋ›. ಎಂ.ಎ.ಹೆಗಡೆ ದಂಟ್ಕಲ್‌ ಗೀತ ಸಾತ್ಯ ರಚನೆ ಮಾಡಿದ್ದಾರೆ. ನತ್ಯ ಸಂಯೋಜನೆ ಜೊತೆ ನಟುವಾಂಗವನ್ನು ವಿದುಷಿ ಸೀಮಾ ಭಾಗವತ್‌ ನೀಡಿದ್ದಾರೆ. . ಬಾಲಸುಬ್ರಹ್ಮಣ್ಯಂ, ಮೃದಂಗ ಜನಾರ್ಧನ ರಾವ್‌,  ಕೊಳಲು ಜಯರಾಂ ಬೆಂಗಳೂರು, ರಿಸಂಪ್ಯಾಡ್‌ ಕಾರ್ತಿಕ್‌ ಮೂರ್ತಿ, ಅವರ ತಂಡ ಹಿನ್ನಲೆ ಗಾಯನ ಒದಗಿಸಿದೆ. ಈಶ್ವರ, ಶಬಿ ಚಕ್ರವರ್ತಿ, ದದೀಚಿ, ಬೇಡರ ಕಣ್ಣಪ್ಪನ ಪಾತ್ರಗಳು, ಋಷಿ ಪಾತ್ರಧಾರಿಗಳು ಮನ ಮುಟ್ಟುವಂತೆ ನಿರ್ವಹಿಸಿದರು. ಇಂದ್ರನಾಗಿ ನಧಿ ಸ್ವಾದಿ, ಪಾರ್ವತಿಯಾಗಿ ನವ್ಯ ಭಟ್ಟ, ಶಿವನಾಗಿ ದೀಪಾ ಭಗವತ್‌, ಸೂತಧಾರನಾಗಿ ದೀಕ್ಷಾ ಭಟ್ಟ, ಬೇಡರ ಕಣ್ಣಪ್ಪನಾಗಿ ಸೌಭಾಗ್ಯ ಹಂದ್ರಾಳ, ನರ್ತಕಿಯಾಗಿ ಚೈತ್ರಾ ಹೆಗಡೆ, ದದೀಚಿಯಾಗಿ ಸೌಮ್ಯ ಕಚವೀರಮಠ, ಶಬಿ ಚಕ್ರವರ್ತಿಯಾಗಿ ಅಮೃತಾ ಸುಗಂಧಿ, ದೇವತೆಯಾಗಿ ನಿರೀಕ್ಷಾ ಸ್ವಾದಿ, ಪಾರಿವಾಳವಾಗಿ ಅನಘ ಹೆಗಡೆ, ಗರುಡನಾಗಿ ಪಲ್ಲ ಕೊಡಿಯಾ, ದೇವತೆಯಾಗಿ ನಿಧಿ ಗೌಡ, ಗಣಪತಿಯಾಗಿ ನಿತ್ಯಾ ರಾವ್‌, ಶಿಷ್ಯರಾಗಿ ಸಂಜನಾ ಹೆಗಡೆ, ನಚಿಕೇತ್‌ ಹೆಗಡೆ ಪಾತ್ರ ನಿರ್ವಸಿದರು.

ನಾಲ್ಕು ಪೌರಾಣಿಕ ಕಥಾನಕಗಳ ಮೂಲಕ ದೇಹದಾನ, ನೇತ್ರದಾನ, ಅಂಗಾಂಗ ದಾನ, ಅಂಗ ಕಸಿಯ ಕುರಿತು ವೈದ್ಯಕೀಯ ಕ್ಷೇತ್ರಕ್ಕೆ ಪುರಾಣದ ನ್ನಲೆಯಲ್ಲಿನ ಹೊಸ ಹೊಳಹವನ್ನು ನೀಡಿತು. ಇಡೀ ರೂಪಕದಲ್ಲಿ ದೇಹದಾನ, ನೇತ್ರದಾನ, ಬೇಡರ ಕಣ್ಣಪ್ಪನಂತಹ ಪಾತ್ರಗಳು ಕಟ್ಟಿದ ರೂಪಕಗಳು ಮನ ಮುಟ್ಟಿದವು. ಹಲವಡೆ ಕೋರಿಯೋಗ್ರಫಿ ಕೂಡ ಇಷ್ಟವಾಗುವಂತೆ ಪ್ರದರ್ಶನವಾದವು. ಈಶ್ವರ ಲಿಂಗದ ಕಣ್ಣಿನಿಂದ ರಕ್ತ, ಶಬಿ ಚಕ್ರವರ್ತಿಯು ಪ್ರಜೆಗಳ ನಡುವೆ ಬರುವಂಥದ್ದು ಜಿಂಕೆ ಬೇಟೆಯಾಡುವಂತಹ ಪ್ರಸಂಗಗಳು ಪ್ರೇಕ್ಷಕರನ್ನೂ ಗಮನ ಸೆಳೆದು ಪಾತ್ರಧಾರಿಯಗಿಸಿದವು.

ಪುರಾಣದಲ್ಲಿನ ಕಥೆಗಳನ್ನು ಮನೋಜ್ಞವಾಗಿ ನಿರೂಪಿಸುವಲ್ಲಿ ರೂಪಕ ಯಶಸ್ವಿಯಾಗಿದೆ. 
– ಪ್ರೊ. ಎಂ.ಎ.ಹೆಗಡೆ ದಂಟ್ಕಲ್‌, ವಿದ್ವಾಂಸರು

ನೇತ್ರ, ಅಂಗದಾನದ ಕುರಿತ ಈ ರೂಪಕವು ಸಕಾಲಿಕ ಸ್ಪೂರ್ತಿಯನ್ನು ಉಂಟು ಮಾಡಿದೆ.
– ಉಮಾಕಾಂತ ಭಟ್ಟ ಮೇಲುಕೋಟೆ

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.