ವಾಟ್ಸ್ಆ್ಯಪ್ ಸಂದೇಶ ಇನ್ನು ಡಿಲೀಟ್ ಮಾಡಿ
Team Udayavani, Nov 2, 2017, 6:20 AM IST
ನವದೆಹಲಿ: ವ್ಯಾಟ್ಸ್ಆ್ಯಪ್ನಲ್ಲಿ ಒಂದು ಬಾರಿ ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ವ್ಯವಸ್ಥೆ ಬುಧವಾರದಿಂದ ಶುರುವಾಗಿದೆ. ಆದರೆ ಒಂದು ಸಂದೇಶ ಕಳುಹಿಸಿದ ಏಳು ನಿಮಿಷದ ಒಳಗೆ ಅದರ ಮೇಲೆ ಟ್ಯಾಪ್ ಮಾಡಿ ಬೆರಳನ್ನು ಸ್ಥಿರವಾಗಿ ಇರಿಸಿದಾಗ ಡಿಲೀಟ್ ಆಯ್ಕೆ ಬರುತ್ತದೆ. ವೈಯಕ್ತಿಕ ಮತ್ತು ಗ್ರೂಪ್ ಚಾಟ್ಗಳಿಗೂ ಈ ಆಯ್ಕೆ ಲಭ್ಯವಿದೆ. ವಿಂಡೋಸ್, ಆ್ಯಂಡ್ರಾಯ್ಡ ಮತ್ತು ಐಫೋನ್ಗಳಲ್ಲಿಯೂ ಈ ಸೌಲಭ್ಯ ಇರಲಿದೆ. ಸಂದೇಶವನ್ನು ಅಳಿಸಿದ ಬಳಿಕ ದೃಢೀಕರಣ ಸಂದೇಶ ಸ್ಕ್ರೀನ್ ಮೇಲೆ ಮೂಡುತ್ತದೆ. ಅಂದ ಹಾಗೆ ಇದು ನಿಗದಿತ ಮಾಹಿತಿಯನ್ನು ಸ್ವೀಕರಿಸಿದ ವ್ಯಕ್ತಿಗೆ ಅನ್ವಯವಾಗುವುದಿಲ್ಲ. ಈ ಮಾಹಿತಿಯನ್ನು ಫೇಸ್ಬುಕ್ ಕೂಡ ದೃಢೀಕರಿಸಿದೆ.