ಕಾರ್ಡ್ ವಹಿವಾಟು ಪ್ರಮಾಣದಲ್ಲಿ ಭಾರೀ ಹೆಚ್ಚಳ
Team Udayavani, Nov 20, 2017, 9:03 AM IST
ಮುಂಬಯಿ: ನಗದುರಹಿತ ವಹಿವಾಟಿಗೆ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ನೀಡಿರುವ ಕರೆಗೆ ಪೂರಕವೆಂಬಂತೆ ದೇಶದಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ಗಳ ಬಳಕೆ ಹೆಚ್ಚಾಗಿದೆ.
ಸೆಪ್ಟಂಬರ್ನಲ್ಲಿ ಕಾರ್ಡ್ ಬಳಕೆ ಪ್ರಮಾಣ ಶೇ.84ರಷ್ಟು ಹೆಚ್ಚಳವಾಗಿದೆ ಎಂದು ವರ್ಲ್ಡ್ ಲೈನ್ ವರದಿ ಹೇಳಿದೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕಾರ್ಡ್ಗಳ ಮೂಲಕ 40,130 ಕೋಟಿ ರೂ. ವಹಿವಾಟು ನಡೆದಿದ್ದರೆ, ಈ ವರ್ಷದ ಸೆಪ್ಟಂಬರಲ್ಲಿ 74,090 ಕೋಟಿ ರೂ. ವಹಿವಾಟು ನಡೆದಿದೆ.