ನಟಿ ಮೆಗನ್- ಹ್ಯಾರಿ ವಿವಾಹ ಫಿಕ್ಸ್
Team Udayavani, Nov 28, 2017, 6:00 AM IST
ಲಂಡನ್: ಬ್ರಿಟನ್ನ ರಾಜಕುಮಾರ ಹ್ಯಾರಿ ಅಮೆರಿಕ ಮೂಲದ ನಟಿ ಮೆಗನ್ ಮಾಕ್ಲೆìಯನ್ನು ವಿವಾಹವಾಗುವುದಾಗಿ ಸೋಮವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಹಲವು ತಿಂಗಳುಗಳಿಂದಲೂ ಈ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಕ್ಕೆ ಈ ಮೂಲಕ ತೆರೆ ಎಳೆದಿದ್ದಾರೆ. ಮುಂದಿನ ವರ್ಷ ವಿವಾಹ ನಡೆಯಲಿದ್ದು, ದಿನಾಂಕವನ್ನು ನಂತರದಲ್ಲಿ ಘೋಷಿಸಲಾಗುತ್ತದೆ ಎಂದು ರಾಜ ಮನೆತನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಚ್ಛೇದಿತ ಮೆಗನ್ರನ್ನು ವಿವಾಹವಾಗುತ್ತಿರುವುದು ಈಗ ಇಂಗ್ಲೆಂಡ್ನ ಬಹುಚರ್ಚಿತ ವಿಷಯವಾಗಿದೆ. ಸಾಂಪ್ರದಾ ಯಿಕ ರಾಜ ಕುಟುಂಬದಲ್ಲಿ ಇಂತಹ ವಿವಾಹಕ್ಕೆ ಅಘೋಷಿತ ನಿಷೇಧ ಇದ್ದರೂ, 2005ರಲ್ಲಿ ವಿಚ್ಛೇದಿತೆ ಕ್ಯಾಮಿ ಲಾರನ್ನು ರಾಜಕುಮಾರ ಚಾರ್ಲ್ಸ್ ವಿವಾಹ ವಾಗಲು ರಾಣಿ ಎಲಿಜಬೆತ್ 2 ಅನುಮತಿ ನೀಡಿದ್ದರು.