ಝುಕರ್ಬರ್ಗ್ ಸಹೋದರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ
Team Udayavani, Dec 2, 2017, 12:04 PM IST
ಸಾನ್ ಫ್ರಾನ್ಸಿಸ್ಕೊ: ಫೇಸ್ಬುಕ್ ಸಹ ಸಂಸ್ಥಾಪಕ, ಕಾರ್ಯನಿರ್ವಹಣಾಧಿಕಾರಿ ಮಾಕ್ ಝುಕರ್ ಬರ್ಗ್ ಅವರ ಸಹೋದರಿ , ಫೇಸ್ಬುಕ್ನ ಮಾಜಿ ಮಾರುಕಟ್ಟೆ ಅಭಿವೃದ್ಧಿ ನಿರ್ದೇಶಕಿಯಾಗಿರುವ ರಾಂಡಿ ಝುಕರ್ಬರ್ಗ್ ಅವರಿಗೆ ಅಲಸ್ಕಾ ಏರ್ಲೈನ್ಸ್ನಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ.
ರಾಂಡಿ ಅವರು ಈ ವಿಚಾರವನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು,ಲಾಸ್ ಎಂಜಲೀಸ್ನಿಂದ ಮಜತ್ಲಾನ್ಗೆ ಪ್ರಯಾಣಿಸುವ ವೇಳೆ ತನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಅಸಹ್ಯವಾಗಿ ವರ್ತಿಸಿ, ಅಶ್ಲೀಲ ಪದಗಳನ್ನು ಆಡಿ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದಾರೆ.
‘ಅಶ್ಲೀಲ ಲೈಂಗಿಕ ಹೇಳಿಕೆಗಳನ್ನು ಆಡುತ್ತಿದ್ದ ಆತನಿಗೆ ವಿಮಾನ ಪರಿಚಾರಕಿಯರು ಏನೂ ಹೇಳದೆ ಸುಮ್ಮನಿದ್ದರು. ಕೇಳಿದರೆ ಆತ ನಿರಂತರ ವಿಮಾನದಲ್ಲಿ ಐ ಹಾರಾಡುವವನೆಂದು ಅವನ ನಡವಳಿಕೆಯಿಂದ ಹೊರಗುಳಿದರು ಮಾತ್ರವಲ್ಲದೆ ನಿರಂತರವಾಗಿ ಮದ್ಯವನ್ನುನೀಡಿದರು. ನಮ್ಮ ಸುರಕ್ಷತೆಗಿಂತ $ಆತನಡಾಲರ್ಗಳೆ ಹೆಚ್ಚು ಎಂದು ನಾನು ತಿಳಿದುಕೊಳ್ಳುತ್ತೇನೆ’ ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಏರ್ಲೈನ್ಸ್ಗೆ ದೂರನ್ನು ರಾಂಡಿ ನೀಡಿದ್ದಾರೆ. ದೂರಿಗೆ ಪ್ರತಿಕ್ರಿಯೆಯಾಗಿ ತಕ್ಷಣ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು