ಮುಂದಿನ ವಾರ ಕೊಹ್ಲಿ-ಅನುಷ್ಕಾ ಮದುವೆ?
Team Udayavani, Dec 7, 2017, 6:00 AM IST
ನವದೆಹಲಿ: ಇದುವರೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ಮದುವೆಯಾಗುತ್ತಾರೆಂದರೆ ಸುಳ್ಳು ಎಂದು ಇಬ್ಬರೂ ನಿರಾಕರಿಸುತ್ತಿದ್ದರು. ಇದೀಗ ಬಂದಿರುವ ನೂತನ ವರದಿಗಳ ಪ್ರಕಾರ ಮುಂದಿನ ವಾರವೇ ಕೊಹ್ಲಿ-ಅನುಷ್ಕಾ ಇಟಲಿಯ ಮಿಲಾನ್ನಲ್ಲಿ ವಿವಾಹವಾಗುವುದು ಖಚಿತ. ಕೊಹ್ಲಿ ಗುರುವಾರವೇ ಇಟಲಿಗೆ ಹೊರಡಲಿದ್ದಾರೆ. ಮದುವೆ ಅತ್ಯಂತ ಖಾಸಗಿ ಕಾರ್ಯಕ್ರಮವಾಗಿದ್ದು, ಯಾವುದೇ ಕ್ರಿಕೆಟಿಗನಿಗೂ ಆಹ್ವಾನ ಸಿಕ್ಕಿಲ್ಲ.
ಡಿ.9,10,11, 12 ಈ ಇಷ್ಟರಲ್ಲಿ ಯಾವುದೇ ದಿನಾಂಕದಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ. ಡಿ.21ರಂದು ಮುಂಬೈನಲ್ಲಿ ಆರತಕ್ಷತೆ ಇರುವುದರಿಂದ ಅಲ್ಲಿ ಎಲ್ಲ ಕ್ರಿಕೆಟಿಗರೂ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕಳೆದ ವಾರ ಅನುಷ್ಕಾ ಶರ್ಮ ಮನೆಯಿಂದ ವಸ್ತ್ರ ವಿನ್ಯಾಸಕ ಸಬÂಸಾಚಿ ಮುಖರ್ಜಿ ಹೊರಹೋಗುತ್ತಿದ್ದಾಗ ಮಾಧ್ಯಮದ ಕಣ್ಣಿಗೆ ಬಿದ್ದಿದ್ದರು. ಆಗಲೇ ವಿವಾಹದ ಸುಳಿವು ಸಿಕ್ಕಿತ್ತು. ಆದರೂ ಮದುವೆಯ ಬಗ್ಗೆ ಅನುಷ್ಕಾ ಕುಟುಂಬ ಯಾವುದೇ ಸ್ಪಷ್ಟನೆಯನ್ನು ಇನ್ನೂ ನೀಡಿಲ್ಲ. ಸ್ವತಃ ಕೊಹ್ಲಿ ಬಾಲ್ಯಕಾಲದ ಕೋಚ್ ರಾಜ್ಕುಮಾರ್ ಶರ್ಮ ಡಿ.7ರಿಂದ ಮದುವೆಯೊಂದರಲ್ಲಿ ಭಾಗವಹಿಸುತ್ತೇನೆಂದು ರಣಜಿಯಿಂದ ದೂರವುಳಿದಿದ್ದಾರೆ. ಇದು ಕೂಡ ಅನುಮಾನ ಬಲಗೊಳ್ಳಲು ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ