ಹದಿನೆಂಟನ್ನು ಅದ್ಧೂರಿ ಸ್ವಾಗತಿಸಿದ ವಿಜಯಪುರ


Team Udayavani, Jan 1, 2018, 3:13 PM IST

vij-3.jpg

ವಿಜಯಪುರ: ನೋವು-ನಲಿವುಗಳನ್ನು ಸಮಾನವಾಗಿ ಮಡಿಲಲ್ಲಿ ಮಲಗಿಸಿಕೊಂಡು ಹದಿನೇಳನ್ನು ಬೀಳ್ಕೊಟ್ಟ ಗುಮ್ಮಟ ನಗರಿ ವಿಜಯಪುರದ ಜನತೆ ಹದಿನೆಂಟನ್ನು ಕೂಡ ಮತ್ತದೇ ಹೊಸ ನಿರೀಕ್ಷೆಯ ಭರವಸೆಯೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಹೊಸ ವರ್ಷವನ್ನು ಬಲೂನ್‌ ಹಾರಿಸಿ ಬಿಟ್ಟು, ಕೇಕ್‌ ಕತ್ತರಿಸಿ, ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಹೊಸ ವರ್ಷದ ಆಚರಣೆಗೆ ಬರುವ ತನ್ನ ಗ್ರಾಹಕರನ್ನು ಸಂತೃಪ್ತಿ ಪಡಿಸಲು ನಗರದ ಹಲವು ಹೋಟೆಲ್‌ಗ‌ಳು ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದವು. ಇದರಿಂದಾಗಿ ಬಹುತೇಕ ಹೋಟೆಲ್‌ಗ‌ಳು ಮಧ್ಯರಾತ್ರಿವರೆಗೂ ಭರ್ತಿಯಾಗಿದ್ದು ಗ್ರಾಹಕರಿಗೆ ಸೇವೆ ನೀಡಿದವು.

ಹೊಸ ವರ್ಷ ಎಂದರೆ ಮದ್ಯ ಸೇವಿಸಿ ಬರಮಾಡಿಕೊಳ್ಳುವುದು ಎಂಬ ಸಾಮಾನ್ಯ ಸ್ಥಿತಿ. ಆದರೆ ಇದಕ್ಕೆ ಬದಲಾಗಿ ನಗರದ ಹಲವು ಹೋಟೆಲ್‌ಗಳು ಮದ್ಯ ರಹಿತವಾದ ಹಾಗೂ ಪರಿಶುದ್ಧ ತರೆವಾರಿ ಸಸ್ಯಹಾರದೊಂದಿಗೆ ಊಟದ ವ್ಯವಸ್ಥೆ ಮಾಡಿಕೊಂಡಿದ್ದವು. ಹೊಸ ವರ್ಷದಲ್ಲಿ ಸಂತಸವನ್ನು ಮೈದುಂಬಿಕೊಂಡು ಬರುವಂತಾಗುವ ಆಶಯದೊಂದಿಗೆ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಬಂದು ಸಂತಸದಿಂದ ಹೊಸ ವರ್ಷವನ್ನು ಆಚರಿಸಿದರು.

ಹೊಸ ವರ್ಷಕ್ಕಾಗಿ ಜಿಲ್ಲೆಯ ಬಹುತೇಕ ಬೇಕರಿ ಕೇಂದ್ರಗಳು ಮಧ್ಯ ರಾತ್ರಿವರೆಗೂ ತಾವು ತಯಾರಿಸಿದ್ದ ತರೆವಾರಿ ಕೇಕ್‌ ಮಾರುತ್ತಿದ್ದವು. ಪರಿಣಾಮ ಬೇಕರಿ ಕೇಂದ್ರಗಳು ರಾತ್ರಿಯಾದರೂ ಜನರಿಂದ ತುಂಬಿ ತುಳಕುತ್ತಿದ್ದವು. 
ವಿಭಿನ್ನ ಹಾಗೂ ವಿವಿಧ ಖಾದ್ಯಗಳ ಊಟ ಹಾಗೂ ಹೊಸ ವರ್ಷಕ್ಕಾಗಿ ಇತರೆ ವಿಶೇಷ ಸೇವೆ ನೀಡಲು ಹೋಟೆಲ್‌ಗ‌ಳು ಕೂಡ ನಿಗದಿಗಿಂತ ಹೆಚ್ಚಿನ ಹಾಗೂ ವಿಶೇಷ ಶುಲ್ಕವನ್ನೂ ವಿಧಿಸಿದ್ದವು.

ನಗರದ ಆಶ್ರಮ ರಸ್ತೆಯ ಸಾಯಿ ವಿಹಾರದಲ್ಲಿ ಎಫ್‌-ಎಫ್‌ ಗ್ರೂಫ್‌ನವರು ದೊಡ್ಡ ವೇದಿಕೆ ನಿರ್ಮಿಸಿ, ಸಿಹಿ ಹಾಗೂ ಖಾರದ ವಿವಿಧ ವೈವಿಧ್ಯಮಯ ಊಟದ ವ್ಯವಸ್ಥೆ ಮಾಡಿದ್ದರು. ಹಳೆಯ ವರ್ಷ ನಿರ್ಗಮಿಸಿ ಹೊಸ ವರ್ಷ ದರ್ಶನ ನೀಡುತ್ತಲೇ ವೇದಿಕೆ ಏರಿದ ಜನರು ಸಂಭ್ರಮಿಸಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ ಎಂದು ಪುರುಷ-ಮಹಿಳೆ, ಮಕ್ಕಳು, ಯುವಕರು-ಹಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.

ಆಧುನಿಕ ತಂತ್ರಜ್ಞಾನ ಮೊಬೈಲ್‌ ಮೂಲಕ ಸಚಿತ್ರ ಸಂದೇಶ ಕಳಿಸಿ, ಕರೆ ಮಾಡಿ ಹೊಸ ವರ್ಷದ ಶುಭಾಶಯ ವಿನಯಮ ಮಾಡಿಕೊಂಡು ನವ ವರ್ಷವಾದರೂ ತಮ್ಮ ಬಾಳಲ್ಲಿ ಸಂತಸದ ಬೆಳಕು ಹರಿಯಲಿ ಎಂದು ಜಿಲ್ಲೆಯ ಜನರು ಸಂತಸ ಹಾಗೂ ಸಂಭ್ರಮದಿಂದ ಬರಮಾಡಿಕೊಂಡರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.