ಒಂದೇ ವೇದಿಕೆಯಲ್ಲಿ ರಜನಿ- ಕಮಲ್: ಎಲ್ಲೆಡೆ ಗುಲ್ಲು
Team Udayavani, Jan 7, 2018, 6:35 AM IST
ಚೆನ್ನೈ: ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಬಹುಭಾಷಾ ನಟ ಕಮಲ್ಹಾಸನ್ ಕೌಲಾಲಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಕಲಾವಿದರ ಸಂಘಕ್ಕಾಗಿ ನಿಧಿ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಇಬ್ಬರೂ ಜತೆಯಾಗಿದ್ದು ತಮಿಳುನಾಡಿನ ರಾಜಕೀಯದಲ್ಲಿಯೂ ಅವರಿಬ್ಬರು ಜತೆಯಾಗಿ ಮಿಂಚಲಿದ್ದಾರೆ ಎಂಬ ವಿಶ್ಲೇಷಣೆಗಳು ಶುರುವಾಗಿವೆ.
ಮಲೇಷ್ಯಾಗೆ ಆಗಮಿಸಿದ ಸಂದರ್ಭದಲ್ಲೂ ಕಮಲ್ ಹಾಗೂ ರಜನಿ ಒಂದೇ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅಭಿಮಾನಿಗಳೇ ಕಾರ್ಯಕರ್ತರು: ಇದುವರೆಗೆ ರಜನಿ ಅಭಿಮಾನಿಗಳಾಗಿದ್ದವರು ಇನ್ನು ಮುಂದೆ ಪಕ್ಷದ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಶನಿವಾರ ರಜನಿ ಅಭಿಮಾನಿಗಳ ಸಂಘದ ವೆಬ್ಸೈಟ್ ಹೆಸರನ್ನು ರಜನಿ ಪೀಪಲ್ ಫೋರಂ ಎಂದು ಬದಲು ಮಾಡಿಕೊಂಡಿದೆ. ಮತ್ತೂಂದೆಡೆ, ಫೋರಂ ಸದಸ್ಯರು ಯಾವುದೇ ಟಿವಿ ಚಾನೆಲ್ಗಳ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ ಎಂದು ಸಂಘದ ಆಡಳಿತಾಧಿಕಾರಿ ವಿ.ಎಂ.ಸುಧಾಕರ್ ಹೇಳಿದ್ದಾರೆ.