“ಜೈವಿಕ ಶಿಲೀಂಧ್ರ’ ಲ್ಯಾಬೊರೇಟರಿ ಕಾರ್ಯಾರಂಭ


Team Udayavani, Jan 10, 2018, 12:37 PM IST

10-23.jpg

ಉಳ್ಳಾಲ: ಅಣುವಿಕಿರಣದಿಂದ ಜನರ ಮೇಲಾಗುವ ಪರಿಣಾಮವನ್ನು ಪತ್ತೆಹಚ್ಚುವ ಮತ್ತು ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಯೋಗಾಲಯವಾಗಿರುವ ಅಣುವೈದ್ಯಕೀಯ ಮತ್ತು ಅನ್ವಯಿಕ ವಿಜ್ಞಾನ ಸಂಸ್ಥೆ (ಐಎನ್‌ಎಂಎಎಸ್‌) ಮತ್ತು ನಿಟ್ಟೆ (ಪರಿಗಣಿಸಲಾಗಿರುವ ವಿಶ್ವವಿದ್ಯಾನಿಲಯ) ಜಂಟಿಯಾಗಿ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯಲ್ಲಿ  “ಜೈವಿಕ ಶಿಲೀಂಧ್ರ’ ಲ್ಯಾಬೋರೇಟರಿ ಪ್ರಾರಂಭಿಸುವ ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ.

ಲ್ಯಾಬೋರೇಟರಿಯು ಈಗಾಗಲೇ ಕಾರ್ಯಾರಂಭಿಸಿದೆ. ಜೈವಿಕ ಶಿಲೀಂಧ್ರ ಲ್ಯಾಬೋರೇಟರಿ ಸ್ಥಾಪನೆಯ ಕುರಿತು ನಿಟ್ಟೆ ವಿ.ವಿ. ಕುಲಪತಿ ಡಾ| ಸತೀಶ್‌ ಭಂಡಾರಿ ಮಾತನಾಡಿ ಐಎನ್‌ಎಂಎಎಸ್‌ (ಇನ್‌ಮಾಸ್‌) ಮೂಲ ಹಾಗೂ ಅನ್ವಯಿಕ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯಾಗಿದ್ದು, ಇದು ರೇಡಿಯೋಥೆರಪಿ ತುರ್ತು ಸ್ಥಿತಿಗೆ ಸಂಬಂಧಿಸಿದಂತೆ ರೇಡಿಯೋ ಪ್ರೊಟೆಕ್ಟರ್‌ ಮತ್ತು ಚಿಕಿತ್ಸಾ  ವಿಧಿವಿಧಾನಗಳು, ಜೈವಿಕ ಶಿಲೀಂಧ್ರ (ಬಯೋಡೋಸಿಮೆಟ್ರಿ), ಔಷಧ ಅಭಿವೃದ್ಧಿ ಮತ್ತು ರಾಸಾಯನಿಕ, ಜೈವಿಕ, ರೇಡಿಯೋಲಜಿ ಮತ್ತು ಅಣುರಕ್ಷಣೆ, ಪ್ರತಿವಿಕಿರಣ ಕ್ರಮಗಳು, ತುರ್ತು ಸ್ಥಿತಿಯಲ್ಲಿ ಚಿಕಿತ್ಸೆ ನೀಡುವುದು ಮತ್ತಿತರ ಕ್ಷೇತ್ರದಲ್ಲೂ ಸಂಶೋಧನೆ ನಡೆಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಿಟ್ಟೆ ವಿ.ವಿ.ಯ ಕುಲಾಧಿಪತಿ ಎನ್‌. ವಿನಯ ಹೆಗ್ಡೆ, ಸಹಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ, ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ, ಕ್ಷೇಮ ಡೀನ್‌ ಡಾ| ಪಿ.ಎಸ್‌.ಪ್ರಕಾಶ್‌, ವೈಸ್‌ ಡೀನ್‌ (ಆಡಳಿತ) ಡಾ| ಜಯಪ್ರಕಾಶ್‌ ಶೆಟ್ಟಿ, ಲ್ಯಾಬೋರೇಟರಿ ಮುಖ್ಯಸ್ಥೆ ಡಾ| ಸುಚೇತಾ, ಸಂಯೋಜಕ ಡಾ| ಪ್ರಶಾಂತ್‌ ಮತ್ತು “ಜೈವಿಕ ಶಿಲೀಂಧ್ರ’ ಡಿಆರ್‌ಡಿಒ ಮುಖ್ಯಸ್ಥರು ಉಪಸ್ಥಿತರಿದ್ದರು.

ರಾಜ್ಯದಲ್ಲಿ  ಮೊದಲ ಪ್ರಯೋಗಾಲಯ
2012-14ರ ಅವಧಿಯಲ್ಲಿ ಒಟ್ಟು 14 ರಾಷ್ಟ್ರಗಳು ಇಂಥ ಪ್ರಯೋಗಾಲಯವನ್ನು ಸ್ಥಾಪಿಸಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಭಾರತದಲ್ಲಿ ಕೇವಲ 3 ಪ್ರಯೋಗಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, “ಕ್ಷೇಮ’ದಲ್ಲಿ ಕಾರ್ಯಾರಂಭಗೊಳ್ಳಲಿರುವ ಪ್ರಯೋಗಾಲಯ ದೇಶದಲ್ಲಿ ನಾಲ್ಕನೆಯದು ಮತ್ತು ರಾಜ್ಯದ ಮೊದಲ ಪ್ರಯೋಗಾಲಯವಾಗಿದೆ.

ಪ್ರಥಮ ಹಂತದಲ್ಲಿ  18 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳ ಲಾಗಿದ್ದು, ಇದರಲ್ಲಿ 3 ತಿಂಗಳು ಸಿಬಂದಿ ತರಬೇತಿ, 12 ತಿಂಗಳ ಅನಂತರ ಪ್ರಯೋಗಾಲಯ ಹೋಲಿಕೆ, ನಿಟ್ಟೆ ಮತ್ತು ಐಎನ್‌ಎಂಎಎಸ್‌ (ಇನ್‌ಮಾಸ್‌) ನಡುವಿನ ಮೊದಲ ಡೋಸ್‌ ಸ್ಪಂದನೆಯ ಕ್ಯಾಲಿಬ್ರೇಷನ್‌ ಕರ್ವ್‌ ಅವಧಿ ಸೇರಿರುತ್ತದೆ. ಇನ್‌ಮಾಸ್‌ ತರಬೇತಿ ಉದ್ದೇಶಕ್ಕಾಗಿ 3.52 ಲಕ್ಷ ರೂ.ಗಳ ಆರಂಭಿಕ ಬೆಂಬಲದೊಂದಿಗೆ ಈ ಪ್ರಸ್ತಾವನೆಗೆ ಚಾಲನೆ ನೀಡಿದೆ. ಸೂಕ್ತ ದಾಖಲೆ ಸಲ್ಲಿಸಿದ ಅನಂತರ ತರಬೇತಿ ಕಾರ್ಯವನ್ನು ಪೂರ್ಣಗೊಳಿಸಿದ ಬಳಿಕ ಎಇಆರ್‌ಬಿ ಮಾನ್ಯತೆಗಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.