ಪದ್ಮ ಪ್ರಶಸ್ತಿ: ರಾಜ್ಯದ ಒಂಬತ್ತು ಮಂದಿಗೆ ಗೌರವ

Team Udayavani, Jan 26, 2018, 3:42 AM IST

Padma-25-1.jpg

ಹೊಸದಿಲ್ಲಿ: ರಾಜ್ಯದ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಿದ ನವರತ್ನಗಳಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಸಂದಿದೆ. ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತವೆತ್ತಿರುವ ಪದ್ಮವಿಭೂಷಣಕ್ಕೆ ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕ ಇಳಯರಾಜ, ಮೂರನೇ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣಕ್ಕೆ ಬಿಲಿಯರ್ಡ್ಸ್‌ ಆಟಗಾರ ಕರ್ನಾಟಕದ ಪಂಕಜ್‌ ಆಡ್ವಾಣಿ, ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಭಾಜನರಾಗಿದ್ದಾರೆ.

ಇನ್ನು ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇ ಗೌಡ, ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಸಹೋದರರಾದ ರುದ್ರಪಟ್ಟಣಂ ನಾರಾ ಯಣ ಸ್ವಾಮಿ ತಾರಾನಾಥನ್‌ ಮತ್ತು ತ್ಯಾಗರಾಜನ್‌, ಸಮಾಜ ಸೇವಕಿಯರಾದ ಡಾ| ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿ, ಬಾಗಲಕೋಟೆಯ ಸೂಫಿ ಸಾಧಕ, ಕನ್ನಡ ಕಬೀರರೆಂದು ಖ್ಯಾತರಾದ ಇಬ್ರಾಹಿಂ ಸುತಾರ್‌,  ಸಂಗೀತ ವಿದ್ವಾಂಸ ಆರ್‌. ಸತ್ಯನಾರಾಯಣ ಅವರಿಗೆ ಪದ್ಮಶ್ರೀ ಗೌರವ ದಕ್ಕಿದೆ.

ಗುರುವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಒಟ್ಟು 85 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ವಿಶೇಷವೆಂದರೆ, ಈ ಬಾರಿಯೂ ಸರಕಾರ ‘ಎಲೆ ಮರೆಯ ಕಾಯಿಯಂಥ ಸಾಧಕ’ರನ್ನೇ ಗುರುತಿಸಿ ಪ್ರಶಸ್ತಿ ನೀಡಿದೆ. ಇವರಲ್ಲದೆ, ವಿಜ್ಞಾನಿ ಹಾಗೂ ಬೊಂಬೆ ತಯಾರಕ ಅರವಿಂದ್‌ ಗುಪ್ತಾ, ಚಿಕಿತ್ಸಕಿ ಲಕ್ಷ್ಮೀ ಕುಟ್ಟಿ, ಗೋಂದ್‌ ಕಲಾವಿದ ಭಜ್ಜು ಶ್ಯಾಮ್‌ ಹಾಗೂ 98ರ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಸುಧಾಂಶು ಬಿಸ್ವಾಸ್‌, ಬೌದ್ಧ ಗುರು ಯಶಿ ದೊಧೇನ್‌ ಹಾಗೂ ‘ಪ್ಲಾಸ್ಟಿಕ್‌ ರಸ್ತೆಯ ಅನ್ವೇಷಕ’ ಎಂ.ಆರ್‌. ರಾಜಗೋಪಾಲ್‌ ಅವರಿಗೂ ಈ ಬಾರಿಯ ಪದ್ಮ ಪ್ರಶಸ್ತಿಗಳು ಲಭಿಸಿವೆ. ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಸುಮಾರು 15,700 ಜನರು ಅರ್ಜಿ ಹಾಕಿದ್ದು, ಇವರಲ್ಲಿ 73 ಜನರಿಗೆ ಪದ್ಮಶ್ರೀ, ಒಂಭತ್ತು ಸಾಧಕರಿಗೆ ಪದ್ಮಭೂಷಣ  ಹಾಗೂ ಮೂವರಿಗೆ ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ.

ಪ್ರಶಸ್ತಿ ಸಂದ ಬಗ್ಗೆ ಉದಯವಾಣಿ ಜತೆ ಸಂತಸ ಹಂಚಿಕೊಂಡಿರುವ ರುದ್ರಪಟ್ಟಣಂ ಸೋದರರು, “ಕಳೆದೈದು ದಶಕಗಳ ನಮ್ಮ ಸೇವೆಗೆ ಸಂದ ಶ್ರೇಷ್ಠ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ’ ಎಂದಿದ್ದಾರೆ. ಕೇಂದ್ರ ಸರಕಾರ ತಡವಾಗಿಯಾದರೂ ನನ್ನನ್ನು ಗುರುತಿಸಿರುವುದು ಕನ್ನಡಕ್ಕೆ ಸಂದ ಗೌರವ. ಈ ಪ್ರಶಸ್ತಿ ಹಳ್ಳಿ ಹುಡುಗನಿಗೆ ದಿಲ್ಲಿ ಕಿರೀಟ ತೊಡಿಸಿದಂತಾಗಿದೆ ಎಂದು ದೊಡ್ಡರಂಗೇಗೌಡ ಹೇಳಿದ್ದಾರೆ. ಈ ಮಧ್ಯೆ, ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಸಿನಿಮಾ ಮಂದಿ ಹೆಚ್ಚು ಕಡಿಮೆ ಕಾಣೆಯಾಗಿದ್ದಾರೆ.

ಎಲೆಮರೆ ಕಾಯಿಯೇ ಹೆಚ್ಚು
ಈ ಬಾರಿಯೂ ಕೇಂದ್ರ ಸರಕಾರ ಹೆಚ್ಚು ಪ್ರಸಿದ್ಧಿಯಾದವರಿಗೆ ಪ್ರಶಸ್ತಿ ನೀಡಲು ಹೋಗದೇ, ಎಲ್ಲೋ ದೂರದಲ್ಲಿ ತಮ್ಮ ಪಾಡಿಗಿರುವಂಥವರನ್ನೇ ಹುಡುಕಿ ಗೌರವಿಸಿದೆ. ಇದರಲ್ಲಿ ಕರ್ನಾಟಕದ ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿಯವರೇ ಉದಾಹರಣೆ.

– 16 ಅನಿವಾಸಿ ಭಾರತೀಯರು, ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

– 2009ರಲ್ಲೇ ಪದ್ಮಭೂಷಣಕ್ಕೆ ಭಾಜನರಾಗಿದ್ದ ಇಳಯರಾಜ ಅವರಿಗೆ, ಈ ಬಾರಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.