ಅಧ್ಯಕ್ಷ ಟ್ರಂಪ್ ಜತೆ ಸಂಬಂಧವಿಲ್ಲ: ನಿಕ್ಕಿ ಹ್ಯಾಲೆ
Team Udayavani, Jan 28, 2018, 10:16 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಾವು ಸಂಬಂಧ ಹೊಂದಿದ್ದೇವೆಂಬ ವದಂತಿಗಳು ಹೇಯ ಹಾಗೂ ಅಸಹ್ಯ ಹುಟ್ಟಿಸುವಂಥವು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ, ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಕಿಡಿಕಾರಿದ್ದಾರೆ.
ಈ ವದಂತಿಯಲ್ಲಿ ಯಾವುದೇ ಹುರುಳಿಲ್ಲ ಎಂದಿರುವ ಅವರು, “”ಟ್ರಂಪ್ ಜತೆಗೆ ನಾನೆಂದಿಗೂ ಏಕಾಂತ ಸಮಯ ಕಳೆದಿಲ್ಲ. ಒಮ್ಮೆ ಮಾತ್ರ ಏರ್ಫೋರ್ಸ್ ಒನ್ನಲ್ಲಿ ಕಾರ್ಯ ನಿಮಿತ್ತ ಪ್ರವೇಶಿಸಿದ್ದುಂಟು. ಆಗ, ಅಲ್ಲಿ ಅನೇಕ ಜನರಿದ್ದರು. ಎಲ್ಲರಂತೆ ನಾನೂ ಅವರ ಬಳಿ ಮಾತಾಡಿ ಬಂದಿದ್ದೆ ಅಷ್ಟೆ” ಎಂದು ಸ್ಪಷ್ಟನೆ ನೀಡಿದ್ದಾರೆ.