ಕೋಸ್ಟ್ ಗಾರ್ಡ್ ರೈಸಿಂಗ್ ಡೇ ಆಚರಣೆ
Team Udayavani, Feb 3, 2018, 1:44 PM IST
ಪಣಂಬೂರು: ಕೋಸ್ಟ್ ಗಾರ್ಡ್ ಪಣಂಬೂರು ಕೇಂದ್ರ ಕಚೇರಿಯಲ್ಲಿ 42ನೇ ಕೋಸ್ಟ್ಗಾರ್ಡ್ ರೈಸಿಂಗ್ ಡೇ ಆಚರಿಸಲಾಯಿತು.
ಶಾಸಕ ಮೊದಿನ್ ಬಾವಾ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಬಳಿಕ ಮಾತನಾಡಿದ ಬಾವಾ ಅವರು, ಕರಾವಳಿ ಸಮುದ್ರ ತೀರವನ್ನು ರಕ್ಷಿಸುವ ಜತೆಗೆ ಮೀನುಗಾರರ ಜೀವ ರಕ್ಷಣೆಯ ಕಾರ್ಯವನ್ನು ಮಾಡುತ್ತಾ ತಟ ರಕ್ಷಣಾ ಪಡೆ ದೇಶ ಸೇವೆ ಮಾಡುತ್ತಿದೆ. ದೇಶ ರಕ್ಷಣೆಯ ಜವಾಬ್ದಾರಿ ಹೊತ್ತ ಸೈನಿಕರಿಗೆ ನಾಗರಿಕ ಗೌರವ, ಬೆಂಬಲ ಸದಾ ಇದೆ ಎಂದರು.
ಡಿಐಜಿ ಎಸ್.ಎಸ್. ದಸೀಲಾ ಮಾತನಾಡಿ, ಸ್ವಾರ್ಥ ರಹಿತ ದೇಶ ರಕ್ಷಣೆಯೊಂದಿಗೆ ಅಮೂಲ್ಯ ಜೀವ ಉಳಿಸುವ ಕಾರ್ಯವನ್ನು ತಟ ರಕ್ಷಣಾ ಪಡೆ ಮಾಡುತ್ತಿದೆ. 320 ಕಿ.ಮೀ. ಸಮುದ್ರ ತೀರವನ್ನು ಕರ್ನಾಟಕ ಹೊಂದಿದ್ದು ಯಾವುದೇ ಅಪಾಯ ಎದುರಾಗದಂತೆ ಬಿಗಿ ಕಣ್ಗಾವಲು ಇಡಲಾಗಿದೆ ಎಂದರು. ರೈಸಿಂಗ್ ಡೇ ಪ್ರಯುಕ್ತ ಪೈಂಟಿಂಗ್ ಸಹಿತ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಏನೆಲ್ಲ ಇದೆ
ಕರ್ನಾಟಕದ ಸಮುದ್ರ ತೀರ ರಕ್ಷಣೆಗೆ ಶೂರ್ ನೌಕೆ, ನಾಲ್ಕು ಸ್ಪೀಡ್ ಬೋಟುಗಳು ನೆಲ ಹಾಗೂ ಜಲದಲ್ಲಿ ಕಾರ್ಯಾಚರಿಸಬಲ್ಲ ಎರಡು ಹೋವರ್ ಕ್ರಾಫ್ಟ್, ಎರಡು ಇಂಟರ್ ಸೆಪ್ಟರ್ ಬೋಟುಗಳು, ಒಂದು ಲಘು ಕಣ್ಗಾವಲು ವಿಮಾನ ಬಳಸಿಕೊಳ್ಳಲಾಗುತ್ತಿದೆ ಎಂದು ಡಿಐಜಿ ಎಸ್. ಎಸ್. ದಸೀಲಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ