ಐಎಸ್ಎಲ್: ಕೋಲ್ಕತಾ ವಿರುದ್ಧ ಬೆಂಗಳೂರಿಗೆ ಜಯ
Team Udayavani, Feb 5, 2018, 6:35 AM IST
ಕೋಲ್ಕತಾ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಕೂಟದಲ್ಲಿ ಬೆಂಗಳೂರು ಎಫ್ಸಿ ತಂಡ 2-0 ಗೋಲುಗಳ ಅಂತರದಿಂದ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು ಮಣಿಸಿದೆ.
ಕೋಲ್ಕತಾದ ಸಾಲ್ಟ್ ಲೇಕ್ನಲ್ಲಿ ಶನಿವಾರ ಪಂದ್ಯ ನಡೆದಿತ್ತು. ಬೆಂಗಳೂರು ತಂಡದ ಪರ 3ನೇ ನಿಮಿಷದಲ್ಲಿ ಜೋರ್ಡಿ ಫಿಗುರೆಸ್ ಹಾಗೂ ಮಿಕು 83ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಬೆಂಗಳೂರಿಗೆ 2-0 ಅಂತರದ ಗೋಲು ತಂದುಕೊಟ್ಟರು. ಈ ಮೂಲಕ ಕೂಟದಲ್ಲಿ ಬೆಂಗಳೂರು ಸತತ ಮೂರನೇ ಗೆಲುವು ಸಾಧಿಸಿತು. ಕೋಲ್ಕತಾ ತಂಡ ಗೆಲುವಿಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ಆತಿಥೇಯ ತಂಡದ ಎಲ್ಲ ಪ್ರಯತ್ನವನ್ನು ಸುನಿಲ್ ಚೆಟ್ರಿ ಪಡೆ ಭಗ್ನಗೊಳಿಸಿತು.